ಶಿವಮೊಗ್ಗ,ಡಿ.೨೧: ಜನಸ್ಪಂದನ ಟ್ರಸ್ಟ್ ಮತ್ತು ಸುದ್ದಿಪಬ್ಲಿಕೇಷನ್ಸ್ ವತಿಯಿಂದ ಕರ್ನಾಟಕ ಸಂಘ ಶಿಕಾರಿಪುರದ ಜುಬೇದ ವಿದ್ಯಾ ಸಂಸ್ಥೆ ಕುವೆಂಪು ವಿವಿಯ ಪದವಿ ಕಾಲೇಜು ಕನ್ನಡ ಅಧ್ಯಾಪಕರ ವೇದಿಕೆ ಇವರ ಸಹಕಾರದಲ್ಲಿ ಕನ್ನಡದ ನಾಡಿ ಡಾ.ನಾ.ಡಿಸೋಜ ಸಾಹಿತ್ಯೋತ್ಸವ-೨೦೨೩ರ ಒಂದು ದಿನ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ ಎಂದು ಜನಸ್ಪಂದನ ಟ್ರಸ್ಟಿನ ಅಧ್ಯಕ್ಷ ಬಿ.ಎನ್. ಸುನೀಲ್‌ಕುಮಾರ್ ಹೇಳಿದರು.


ಅವರು ಇಂದು ಕರ್ನಾಟಕ ಸಂಘದಲ್ಲಿ ಕರೆದಿದ್ದ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾ. ಡಿಸೋಜರವರು ಖ್ಯಾತ ಸಾಹಿತಿ, ವೈಚಾರಿಕ ಪ್ರಜ್ಞೆಯ ಚಿಂತಕ, ಸರ್ವಧರ್ಮ ಸಮಭಾವದ ಪ್ರತಿಪಾದಕ ಇಂತಹ ಸಾಹಿತಿಯವರ ಬದುಕು-ಬರಹ ಕುರಿತು ಕನ್ನಡ ನಾಡಿ ನಾ.ಡಿಸೋಜ ಸಾಹಿತ್ಯೋತ್ಸವದ ಹೆಸರಿನಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಕರ್ನಾಟಕ ಸಂಘದದಲ್ಲಿ ಡಿ.೩೧ರಂದು ಬೆಳಿಗ್ಗೆ ೧೦ರಿಂದ ಸಂಜೆಯವರೆಗೆ ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಆರ್. ಸಾಹಿತ್ಯೋತ್ಸವವನ್ನು ಉದ್ಘಾಟಿಸುವರು. ಇದೇ ಸಂದರ್ಭದಲ್ಲಿ ನಾ.ಡಿಸೋಜರವರ ಸಮಗ್ರ ಕಾದಂಬರಿಗಳ ಸಂಪುಟ ಮತ್ತು ಸೆಲ್ವಿಯ ಎಂಬ ಹುಡುಗಿ ಕಿರುಚಿತ್ರವನ್ನು ಬಿಡುಗಡೆ ಮಾಡಲಾಗುವುದು. ಕಾದಂಬರಿಗಳ ಸಂಪುಟವನ್ನು ವಿದ್ವಾಂಸ ನಾಡೋಜ ಡಾ. ಹಂಪನಾಗರಾಜಯ್ಯ ಬಿಡುಗಡೆ ಮಾಡುವರು. ನಾ.ಡಿಸೋಜರವರನ್ನು ಅಭಿನಂದಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಕೇಂದ್ರ ಬಾಲ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ. ಹಾಫೀಜ್ ಕರ್ನಾಟಕಿ, ಜಿಲ್ಲಾ ಕ.ಸ.ಪ. ಅಧ್ಯಕ್ಷ ಡಿ. ಮಂಜುನಾಥ್, ಶಿಕಾರಿಪುರ ಪ್ರಥಮ ದರ್ಜೆ ಕಾಲೇಜಿನ ಪ್ರಾಶುಂಪಾಲ ಡಾ. ಶೇಖರ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಜಿಲ್ಲಾ ಸಂಘದ ಉಪಾಧ್ಯಕ್ಷ ಕೆ.ಎಸ್.ಹುಚ್ರಾಯಪ್ಪ, ಚಿತ್ರನಿರ್ದೇಶಕ ನವೀನ್ ಡಿಸೋಜ, ಸುವಿ ಪಬ್ಲಿಕೇಷನ್‌ನ ಪ್ರಕಾಶಕ ಡಿ.ಎನ್. ಸುನೀಲ್‌ಕುಮಾರ್ ಉಪಸ್ಥಿತರಿರುವರು ಎಂದರು.


ಸಾಹಿತ್ಯೋತ್ಸವದ ಅಂಗವಾಗಿ ೬ ಗೋಷ್ಠಿಗಳನ್ನು ಆಯೋಜಿಸಲಾಗಿದೆ. ೧೨.೩೦ಕ್ಕೆ ಈ ಗೋಷ್ಠಿಗಳು ಆರಂಭವಾಗುತ್ತವೆ. ನಾಡಿಯವರ ಕಾದಂಬರಿ ನೋಟ ಕುರಿತು ಪ್ರಾಧ್ಯಾಪಕ ಡಾ. ಮೋಹನ್ ಚಂದ್ರಗುತ್ತಿ ಕಥಾ ಸಾಹಿತ್ಯ ಕುರಿತು ಡಾ. ಎಂ.ಎಸ್. ದುರ್ಗಪ್ರವೀಣ, ಬದುಕು ಮತ್ತು ಬರಹದಲ್ಲಿ ಪರಿಸರ ಕುರಿತು ಅಖಿಲೇಶ್ ಚಿಪ್ಪಳಿ, ಮುಳುಗಡೆ ಮತ್ತು ನಾಡಿಸೋಜನ ಕುರಿತು ಸತ್ಯನಾರಾಯಣ ಜಿ.ಟಿ. ಮಕ್ಕಳ ಸಾಹಿತ್ಯ ಕುರಿತು ಮೇದಿನಿ ಕೆಸವಿನಮನೆ, ಪುಟ್ಟಜ್ಜಿ ಕಥೆ ಹೇಳು ಕುರಿತು ಸಾತ್ವಿಕ ಬೋಸ್ ಮಾತನಾಡುವರು ಎಂದರು.


ಸಮಾರೋಪ ಸಮಾರಂಭ ನಂತರ ನಡೆಯಲಿದ್ದು ಇದರ ಅಧ್ಯಕ್ಷತೆಯನ್ನು ಕರ್ನಾಟಕದ ಸಂಘದ ಅಧ್ಯಕ್ಷ ಎಂ.ಎನ್. ಸುಂದರ್‌ರಾಜ್ ವಹಿಸುವರು. ವಿಮರ್ಶಕ ಡಾ. ರಾಜೇಂದ್ರ ಚೆನ್ನಿ ಸಮಾರೋಪ ನುಡಿಗಳನ್ನಾಡುವರು. ವಾರ್ತಾಧಿಕಾರಿ ಆರ್. ಮಾರುತಿ, ರಂಗಾಯಣದ ಮಾಜಿ ನಿರ್ದೇಶಕ ಸಂದೇಶ್ ಜವಳಿ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಣದ ಅಧ್ಯಕ್ಷ ಪಾಪಯ್ಯ ಬಿ ಭಾಗವಹಿಸುವರು ಎಂದರು.


ನಾಡಿಯವರ ೪೪ ಸಮಗ್ರ ಕಾದಂಬರಿಗಳು ೯ ಸಂಪುಟಗಳನ್ನು ಪ್ರಕಟಿಸಲಾಗಿದ್ದು, ಈ ೯ ಸಂಪುಟಗಳ ಒಟ್ಟು ಬೆಲೆ ೫೮೮೫ರೂ.ಗಳಾಗುತ್ತದೆ. ಬಿಡುಗಡೆಯ ಅಂದಿನ ಸಂದರ್ಭದಲ್ಲಿ ೪೪೦೦ ರೂ. ರಿಯಾಯಿತಿ ಬೆಲೆಯಾಗಿದ್ದು, ಓದುಗರು ಪುಸ್ತಕಕೊಳ್ಳಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಂ.ಎನ್. ಸುಂದರ್‌ರಾಜ್, ಕೆ.ಎಸ್. ಹುಚ್ರಾಯಪ್ಪ, ಉಪನ್ಯಾಸಕರಾದ ಬಂಗಾರಪ್ಪ ಬಿ, ಡಾ.ಪ್ರಕಾಶ್ ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!