ಶಿವಮೊಗ್ಗ,ಡಿ.೧೨: ಗ್ರಾಮೀಣ ಅಂಚೆನೌಕರರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇಂದು ಇಲ್ಲಿನ ಪ್ರಧಾನ ಅಂಚೆ ಕಚೇರಿ ಎದುರು ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿತು.


ಗ್ರಾಮೀಣ ಭಾಗದ ಅಂಚೆ ನೌಕರರಿಗೆ ಸಾಮಾಜಿಕ ಭದ್ರತೆ ಇಲ್ಲ. ೩೦ರಿಂದ ೪೦ ವರ್ಷಗಳ ಕಾಲ ಸೇವೆ ಸಲ್ಲಿಸಿದರು ಪ್ರಯೋಜನವಾಗಿಲ್ಲ. ನಗರ ಮತ್ತು ಗ್ರಾಮೀಣ ಅಂಚೆ ನೌಕರರ ಮಧ್ಯೆ ಸಾಕಷ್ಟು ತಾರತಮ್ಯವಿದೆ. ಕಮಲೇಶ್ ಚಂದ್ರ ಕಮಿಟಿ ವರದಿ ಕಳೆದ ೬ ವರ್ಷಗಳಿಂದ ಜಾರಿಯಾಗಿಲ್ಲ. ಹಲವು ಬಾರಿ ಹೋರಾಟ ಮಾಡಿದರು ಪ್ರಯೋಜನವಾಗಿಲ್ಲ. ನಾವು ಈಗ ಕೇಂದ್ರ ಸಂಘಟನೆಯ ಕರೆಯ ಮೇರೆಗೆ ಅನಿರ್ಧಿಷ್ಟಾವಧಿ ಮುಷ್ಕರವನ್ನು ಆರಂಭಿಸಿದ್ದೇವೆ. ಕೇಂದ್ರ ಸರ್ಕಾರ ನಮ್ಮ ಬೇಡಿಕೆಗಳನ್ನು ತಕ್ಷಣವೇ ಈಡೇರಿಸಬೇಕು ಎಂದು ಮುಷ್ಕರ ನಿರತರು ಆಗ್ರಹಿಸಿದರು.


೮ಗಂಟೆಗಳ ಕಾಲ ಕೆಲಸ ನೀಡಬೇಕು. ಪಿಂಚಣಿ ಸೇರಿದಂತೆ ಎಲ್ಲಾ ಸೌಲತ್ತುಗಳ ಒದಗಿಸಬೇಕು. ಸೇವಾ ಹಿರಿತನದ ಆಧಾರದಲ್ಲಿ ೧೨ ವರ್ಷದಿಂದ ೩೬ ವರ್ಷಗಳವರೆಗೆ ಸೇವಾ ಸಲ್ಲಿಸಿದ ನೌಕರರಿಗೆ ವಿಶೇಷ ಭತ್ಯೆ ನೀಡಬೇಕು. ಗ್ರೂಪ್ ಇನ್ಸ್‌ರೆನ್ಸ್ ಮೊತ್ತವನ್ನು ೫ ಲಕ್ಷಕ್ಕೆ ಹೆಚ್ಚಿಸಬೇಕು. ಈಗಿರುವ ಗ್ರಾಚ್ಯುಟಿ ಹಣ ೧.೫ಲಕ್ಷ ಮಿತಿಯನ್ನು ತೆಗೆದು ೫ಲಕ್ಷದ ವರೆಗೆ ನೀಡಬೇಕು. ೧೮೦ ದಿನಗಳ ಕಾಲ ರಜೆ ಉಳಿಸಿಕೊಳ್ಳುವ ಸೌಲಭ್ಯ ಕೊಡಬೇಕು. ಜಿಡಿಎಸ್ ಮತ್ತು ಅವರ ಕುಟುಂಬದ ಸದಸ್ಯರಿಗೆ ವೈದ್ಯಕಿಯ ಸೌಲಭ್ಯ ಒದಗಿಸಬೇಕು ಎಂದು ಮುಷ್ಕರ ನಿರತರು ಒತ್ತಾಯಿಸಿದರು.


ಮುಷ್ಕರಲ್ಲಿ ವಿಭಾಗಿಯ ಅಧ್ಯಕ್ಷ ಹೆಚ್.ಜಿ. ವೆಂಕಟೇಶ್, ಪ್ರತಿನಿಧಿ ಕೆ.ಪ್ರಹ್ಲಾದ್‌ರಾವ್, ಕಾರ್ಯದರ್ಶಿ ಹೆಚ್.ಆರ್. ಭಾಸ್ಕರ್‌ರೆಡ್ಡಿ, ವಿಭಾಗೀಯ ಖಜಾಂಚಿ ರಾಯಪ್ಪ ನಾಯಕ್, ನರಸಿಂಹಪ್ಪ, ಮನೋಜ್ ಸೇರಿದಂತೆ ಹಲವರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!