ರಾಜ್ಯದ ಎಸ್ಕಾಂ ವಿಭಾಗದ ಎಲ್ಲ ನೌಕರವರ್ಗ, ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಒಳಗಾಗದೆ ಮಾನಸಿಕ ತುಡಿತವನ್ನು ಬದಿಗೊತ್ತಿ ಕರ್ತವ್ಯ ನಿರ್ವಹಿ ಸುವ ಮನೋಭಾವಕ್ಕೆ ಬರಬೇಕು. ಆದಷ್ಟು ಸುರಕ್ಷಿತ ವಾಗಿ ಪವರ್ ಮ್ಯಾನ್‌ಗಳು ಕೆಲಸ ಮಾಡಬೇಕು ಎಂದು ಶಿವಮೊಗ್ಗ ಮೆಸ್ಕಾಂ ವಿಭಾಗದ ಕಾರ್ಯ ಪಾಲಕ ಅಭಿಯಂತರ ಎಚ್. ಆರ್. ವೀರೇಂದ್ರ ಅವರು ತಿಳಿಸಿದರು.


ಅವರಿಂದು ಬೆಳಗ್ಗೆ ಶಿವಮೊಗ್ಗ ಜೆಎನ್‌ಎನ್‌ಸಿ ಹಾಗೂ ಕೃಷಿ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಎರಡು ದಿನಗಳ ಕಾಲದ ವಿದ್ಯುತ್ ಇಲಾಖೆಯ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.


ಪವರ್ ಮ್ಯಾನ್ ಆಕಸ್ಮಿಕವಾಗಿ ಕರ್ತವ್ಯ ನಿರತರಾಗಿ ರುವಾಗ ಸಾವು ಕಂಡಿರುವ ಹಿನ್ನೆಲೆಯಲ್ಲಿ ಅವರ ಸ್ಮರ ಣಾರ್ಥ ಬಲರಾಮ್ ಅಭಿಮಾನಿಗಳ ಸಂಘ, ಈರಪ್ಪ ಗ್ರಾಮೀಣಾಭಿವೃದ್ಧಿ ಎಜುಕೇಶನ್ ಟ್ರಸ್ಟ್ , ತುಂಗಾ ತರಂಗ ದಿನಪತ್ರಿಕೆ, ರಾಜೀವ್ ಗಾಂಧಿ ರೂರಲ್ ಡೆವಲಪ್ಮೆಂಟ್ ಟ್ರಸ್ಟ್ ಆಶ್ರಯದಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ಎಸ್ಕಾಂ ಕ್ರಿಕೆಟ್ ಪಂದ್ಯಾವಳಿಯಲ್ಲಿ ಉದ್ಘಾಟನೆಯಲ್ಲಿ ಮಾತನಾಡುತ್ತಿದ್ದರು.


ದೈಹಿಕವಾದ ಒತ್ತಡಕ್ಕಿಂತ ಮಾನಸಿಕ ಒತ್ತಡ ಅತ್ಯಂತ ಅಪಾಯಕಾರಿ ಎಂಬುದನ್ನು ಗಮನಿಸಬೇಕು. ಯಾವ ಕಾರಣಕ್ಕೆ ಒತ್ತಡ ಬರುತ್ತದೆ ಎಂಬುದನ್ನು ಅರಿತುಕೊಳ್ಳುವ ಅಗತ್ಯವಿದೆ. ಸುರಕ್ಷತೆ ಉದ್ದೇಶದಿಂದ ಹೆಚ್ಚಿನ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಬೇಕಿದೆ. ಮೃತರ ಸ್ಮರಣಾರ್ಥ ನಡೆಯುತ್ತಿರುವ ಇಂತಹ ಪಂದ್ಯಾ ವಳಿ ನಿಜಕ್ಕೂ ಅರ್ಥಗರ್ಭಿತವಾದದ್ದು ಎಂದರು.


ಎಸ್ಕಾಂ ಸಿಬ್ಬಂದಿಗಳು ಇಂತಹ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮೂಲಕ ದೈಹಿಕವಾದ ಚಟುವಟಿಕೆ ನಡೆಸುವುದು. ಆರೋಗ್ಯಕ್ಕೆ ವಿರುದ್ದವಾಗಿ ಯಾವುದೇ ಅಮುಲು ಬರುವ ಆಮಿಷಗಳಿಗೆ ತುತ್ತಾಗಬಾರದು ಎಂದರು.


ಈ ಸಂದರ್ಭದಲ್ಲಿ ಬೆಂಗಳೂರಿನ ಸಹಕಾರ ನಗರದ ಬೆಸ್ಕಾಂ ಸಹಾಯಕ ಅಭಿಯಂತರ ಎನ್ ಪಣಿಂದ್ರ, ಬೆಸ್ಕಾಂ ಗುತ್ತಿಗೆದಾರರಾದ ರವಿಕುಮಾರ್ ಎಸ್. ಆರ್. ಸಹಕಾರನಗರ, ರವಿಕುಮಾರ್ ಸಿ. ಸಹಕಾರನಗರ ಮತ್ತು ಶ್ರೀನಿವಾಸ್ ಕೆ ವಿ ಕೊಡುಗೆಹಳ್ಳಿ, ಮೆಸ್ಕಾಂ ಡಿವಿಜನಲ್ ಅಧಿಕಾರಿ ಮಂಜುನಾಥ್, ಸಿಇಸಿ ಸಂಘಟನಾ ಕಾರ್ಯದರ್ಶಿ ಹೇಮಣ್ಣ, ತುಂಗಾತಂಗ ಸಂಪಾದಕ ಎಸ್.ಕೆ.ಗಜೇಂದ್ರ ಸ್ವಾಮಿ, ಆಯೋಜ ಕರಾದ ಹೆಚ್ ಬಿ ಮಂಜುನಾಥ್, ಲೋಕೇಶ್ ನಾಯಕ್, ಶಿವು ಹಾಗೂ ಇತರರಿದ್ದರು. ಇಂದಿನಿಂದ ರಾಜ್ಯದ ೨೪ ತಂಡಗಳು ತಲಾ ೫ ರಿಂದ ೬ ಪಂದ್ಯಗಳಲ್ಲಿ ಭಾಗವಹಿಸುವ ಮೂಲಕ ನಾಳೆ ಸಂಜೆ ೪ ಗಂಟೆಗೆ ನಡೆಯುವ ಫೈನಲ್ ನಲ್ಲಿ ಬಾಗವಹಸಬಹುದಾದ ಅವಕಾಶವನ್ನು ಪಡೆಯಲಿದ್ದಾರೆ

By admin

ನಿಮ್ಮದೊಂದು ಉತ್ತರ

You missed

error: Content is protected !!