ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾನಿಲಯದ 36ನೆಯ ಅಂತರ ಕಾಲೇಜುಗಳ ಅಥ್ಲೆಟಿಕ್ ಕ್ರೀಡಾಕೂಟ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು ಆಶ್ರಯದಲ್ಲಿ ಡಿ. 10ರಿಂದ 12ರವರೆಗೆ ನೆಹರು ಕ್ರೀಡಾಂಗಣದಲ್ಲಿ ನಡೆಯಲಿದೆ.
ಪತ್ರಿಕಾಭÀವನದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಎಟಿಎನ್‍ಸಿಸಿ ಕಾಲೇಜಿನ ಪ್ರಾಚಾರ್ಯೆ ಪ್ರೊ. ಪಿ. ಆರ್ ಮಮತಾ, ಮೂರು ದಿನಗಳ ಕಾಲ ನಡೆಯುವ ಈ ಕ್ರೀಡಾಕೂಟದಲ್ಲಿ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಒಟ್ಟು 86 ಕಾಲೇಜುಗಳ ಸುಮಾರು 800 ರಿಂದ 1000 ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಇವರಲ್ಲಿ 530 ವಿದ್ಯಾರ್ಥಿಗಳು ಮತ್ತು 470 ವಿದ್ಯಾರ್ಥಿನಿಯರಿದ್ದಾರೆ. 150 ಜನ ಅಧಿಕಾರಿ, ತಾಂತ್ರಿಕ ವರ್ಗದವರಿರುತ್ತಾರೆ ಎಂದರು.
ಕ್ರೀಡಾಪಟುಗಳಿಗೆ ಕಮಲಾ ನೆಹರು ಮಹಿಳಾ ಕಾಲೇಜು, ಕಸ್ತೂರಬಾ ಕಾಲೇಜುಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಅಧಿಕಾರಿಗಳಿಗೆ ಮತ್ತು ಕ್ರೀಡಾಪಟುಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದೆ. ಡಿ.9 ರಂದು ಸಂಜೆ 7.30 ಕ್ಕೆ ಈ ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲಾ ಕಾಲೇಜುಗಳ ವ್ಯವಸ್ಥಾಪಕರ ಸಭೆಯನ್ನು ಎಟಿಎನ್‍ಸಿಸಿ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ಕಾಲೇಜಿನ ಚಂದನ ಸಭಾಂಗಣದಲ್ಲಿ ಕರೆಯಲಾಗಿz ಎಂದರು.
ಕ್ರೀಡಾಪಟುಗಳು ತಮ್ಮ ತಮ್ಮ ಕಾಲೇಜುಗಳ ಧ್ವಜ, ಸಮವಸ್ತ್ರದೊಂದಿಗೆ ತಂಡದ ವ್ಯವಸ್ಥಾಪಕರೊಂದಿಗೆ ಡಿ. 10ರ ಬೆಳಗ್ಗೆ 8 ಗಂಟೆಗೆ ಕ್ರೀಡಾಂಗಣದಲ್ಲಿ ಹಾಜರಾಗಬೇಕು. ಕ್ರೀಡಾಪಟುಗಳಿಗೆ ಆರೋಗ್ಯ ತಪಾಸಣೆ, ಕುಡಿಯುವ ಮಿನರಲ್ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ. ಕ್ರೀಡಾಪಟುಗಳಿಗೆ ಫಿಟ್ ನೆಸ್ ಮತ್ತು ಆರೋಗ್ಯ ತಪಾಸಣಾ ದೃಢೀಕರಣ ಪತ್ರವನ್ನು ಕಡ್ಡಾಯವಾಗಿ ತರಲು ಸೂಚಿಸಲಾಗಿದೆ. ತರದೇ ಇದ್ದಲ್ಲಿ ಆಯಾ ಕಾಲೇಜಿನ ಪ್ರಾಂಶುಪಾಲ, ವ್ಯವಸ್ಥಾಪಕರೇ ಜವಾಬ್ದಾರರಾಗಿರುತ್ತಾರೆ ಎಂದರು.
ಕ್ರೀಡಾಕೂಟದ ಮೂರನೆಯ ದಿನ ಬೆಳಗ್ಗೆ ನಡೆಯುವ ಪುರುಷ/ಮಹಿಳೆಯರ ಮ್ಯಾರಥಾನ್ ಓಟವು ಎಂಆರ್‍ಎಸ್ ವೃತ್ತದಿಂದ ಪ್ರಾರಂಭವಾಗಿ-ಒಡ್ಡಿನಕೊಪ್ಪ – ವಿಮಾನ ನಿಲ್ದಾಣ – ಕಾಚಿನಕಟ್ಟೆ – ದೊಡ್ಡಿಬೀಳು – ಲಕ್ಕಿನಕೊಪ್ಪ ವೃತ್ತ – ಮಾರುತಿ ಫಾರಂನಿಂದ ವಾಪಾಸ್ ಎಂಆರ್‍ಎಸ್ ವೃತ್ತಕ್ಕೆ ಬಂದು ಮುಕ್ತಾಯ ಮಾಡಲಾಗುವುದು. ಈ ಮ್ಯಾರಥಾನ್ ಓಟಕ್ಕೆ ಸುರಕ್ಷತಾ ದೃಷ್ಟಿಯಿಂದ ರಕ್ಷಣೆ ಒದಗಿಸಲು ಪೆÇಲೀಸ್ ಇಲಾಖೆಯನ್ನು ಕೋರಲಾಗಿದೆ. ಕ್ರೀಡಾಕೂಟದ ಸಂಚಾಲಕತ್ವವನ್ನು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಕೆ.ಎಂ.ನಾಗರಾಜು ವಹಿಸಲಿದ್ದು, ಯಶಸ್ಸಿಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಎಂದರು.
ಪತ್ರಿಕಾಗೋಷ್ಟಿಯಲ್ಲಿ ಕ್ರೀಡಾಕೂಟದ ಸಂಚಾಲಕ ಮತ್ತು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಕೆ.ಎಂ.ನಾಗರಾಜು, ಕುವೆಂಪು ವಿವಿ ದೈಹಿಕ ಶಿಕ್ಷಣ ನಿರ್ದೇಶಕ ಎನ್ ಡಿ ವಿರೂಪಾಕ್ಷ, ರವೀಂದ್ರ ಗೌಡ ಉಪಸ್ಥಿತರಿದ್ದರು.