ಮೂರು ಬಾರಿ ಲೋಕಸಭಾ ಸದಸ್ಯರಾಗಿ ರುವ ಮತ್ತು ಜೀವನದ ೫೦ ವರ್ಷಗಳನ್ನು ಪೂರೈಸಿರುವ ಬಿ.ವೈ.ರಾಘವೇಂದ್ರ ಅವರಿಗೆ ಮಲೆನಾಡು ವೀರಶೈವ ಲಿಂಗಾಯಿತ ಮಠಾ ಧೀಶರರ ಪರಿಷತ್ತು ವತಿಯಿಂದ ಸಾರ್ಥಕ ಸುವರ್ಣ ಎಂಬ ಹೆಸರಲ್ಲಿ ಡಿ.೦೮ರಂದು ಸಂಜೆ ೫.೩೦ಕ್ಕೆ ಸವಳಂಗ ರಸ್ತೆಯಲ್ಲಿರುವ ಸರ್ಜಿ ಕನ್ವೆನ್ಷನ್ ಹಾಲ್‌ನಲ್ಲಿ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ ಎಂದು ಬೆಕ್ಕಿನ ಕಲ್ಮಠ ಶ್ರೀಗಳಾದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.


ಅವರು ಇಂದು ಬೆಕ್ಕಿನ ಕಲ್ಮಠದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿ.ವೈ.ರಾಘವೇಂದ್ರರವರ ಕೊಡುಗೆ ಜಿಲ್ಲೆಗೆ ಬಹಳಷ್ಟಿದೆ. ಅಭಿವೃದ್ಧಿ ಹರಿಕಾರ ಎಂದೇ ಜನಪ್ರಿಯರಾಗಿದ್ದಾರೆ. ಸಿಗಂದೂರು ಸೇತುವೆ, ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಯೋಜನೆಗಳು, ನೀರಾವರಿ, ವಿಮಾನ ನಿಲ್ದಾಣ ಹೀಗೆ ಹಲವು ಅಭಿವೃದ್ಧಿಗಳನ್ನು ಮಾಡಿದ್ದಾರೆ. ಮಠಮಂದಿ ರಗಳಿಗೆ ಅನುದಾನ ಸರ್ವ ಜನಾಂಗದವರ ಕಲ್ಯಾಣ ಹೀಗೆ ಹಲವು ಕಾರ್ಯಕ್ರಮಗಳ ಮೂಲಕ ಕೊಡುಗೆ ನೀಡಿರುವ ಬಿ.ವೈ. ರಾಘವೇಂದ್ರರವರನ್ನು ಸನ್ಮಾನ ಮಾಡುತ್ತಿರು ವುದು ಹೆಮ್ಮೆಯ ವಿಷಯವಾಗಿದೆ ಎಂದರು.


ನಮ್ಮ ಸಾನಿಧ್ಯದಲ್ಲಿ ಹೊಂಬುಜ ಹುಂಚಾ ಜೈನಮಠದ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿ, ಆದಿಚುಂಚನಗಿರಿ ಮಹಾಸಂಸ್ಥಾನದ ಕಾರ್ಯದರ್ಶಿ ಶ್ರೀಪ್ರಸನ್ನ ನಾಥ ಮಹಾಸ್ವಾಮೀಜಿ, ನಿಟ್ಟೂರು ಶ್ರೀ ನಾರಾಯಣಗುರು ಸಂಸ್ಥಾನದ ಶ್ರೀ ರೇಣುಕಾ ನಂದ ಮಹಾಸ್ವಾಮಿ ಅವರ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಶರಣ ಸಾಹಿತ್ಯ ಪರಿಷತ್‌ನ ರಾಷ್ಟ್ರೀಯ ಅಧ್ಯಕ್ಷ ಡಾ. ಶ್ರೀ ಸೋಮಶೇಖರ್ ಉಪನ್ಯಾಸ ನೀಡಲಿದ್ದಾರೆ. ರಾಯಚೂರಿನ ಹಿಂದೂಸ್ತಾನಿ ಗಾಯಕ ಪಂಡಿತ್ ಅಂಬಯ್ಯನುಲಿ ಅವರಿ ಂದ ವಚನ ಸಂಗೀತ ಕಾರ್ಯಕ್ರಮ ಇರುತ್ತದೆ ಎಂದರು.


ಆನಂದಪುರಂ ಮಹಾಸಂಸ್ಥಾನ ಮಠ ದಲ್ಲಿ ಶರಣ ಸಾಹಿತ್ಯ ಸಮ್ಮೇಳನ : ಡಿ.೧೨ರಂದು ಆನಂದ ಪುರಂನಲ್ಲಿರುವ ಶ್ರೀ ಜಗದ್ಗುರು ಮುರುಘರಾಜೇಂದ್ರ ಮಹಾಸಂ ಸ್ಥಾನ ಮಠದಲ್ಲಿ ಶರಣ ಸಾಹಿತ್ಯ ಸಮ್ಮೇಳನ ಮತ್ತು ಭಾವೈಕ್ಯ ಸಮ್ಮೇಳನವನ್ನು ಆಯೋಜಿ ಸಲಾಗಿದೆ ಎಂದು ಶ್ರೀಗಳು ತಿಳಿಸಿದರು.
ಅಂದು ಬೆಳಿಗ್ಗೆ ೯.೩೦ಕ್ಕೆ ಶರಣ ಸಾಹಿ ತ್ಯದ ೫೭೩ನೇ ಮಾಸಿಕ ಶಿವಾನುಭವ ಗೋಷ್ಠಿ ಹಾಗೂ ಆರೋಗ್ಯ ತಪಾಸಣೆ ಶಿಬಿರ ನಡೆಯ ಲಿದೆ. ೧೦ಕ್ಕೆ ಶರಣ ಸಾಹಿತ್ಯ ಸಮ್ಮೇಳನವನ್ನು ಗೋಣಿಬೀಡಿನ ಶೀಲಸಂಪಾದನ ಮಠದ ಡಾ. ಸಿದ್ದಲಿಂಗ ಮಹಾಸ್ವಾಮಿಗಳು ಉದ್ಘಾಟಿ ಸುವರು. ಹಲವು ಸ್ವಾಮೀಜಿಗಳು ಭಾಗವಹಿ ಸುವರು. ಆರೋಗ್ಯ ತಪಾಸಣಾ ಶಿಬಿರವನ್ನು ಆರೋಗ್ಯಾಧಿಕಾರಿ ಡಾ. ರಾಜೇಶ್ ಸುರಗಿ ಹಳ್ಳಿ ಉದ್ಘಾಟಿಸುವರು. ಸಂಜೆ ೪.೩೦ಕ್ಕೆ ಭಾವೈಕ್ಯ ಸಮ್ಮೇಳನ ನಡೆಯಲಿದೆ. ಹುಂಚಾ ಜೈನಮಠದ ಶ್ರೀಗಳ ಸಮ್ಮುಖದಲ್ಲಿ ಬಸವ ಕೇಂದ್ರದ ಡಾ. ಬಸವ ಮರಳು ಸಿದ್ಧ ಮಹಾಸ್ವಾಮಿಗಳು ಉಪನ್ಯಾಸ ನೀಡುವರು. ಸಚಿವ ಮಧುಬಂಗಾರಪ್ಪ ಕಾರ್ಯಕ್ರಮ ಉದ್ಘಾಟಿಸುವರು ಎಂದು ವಿವರಣೆ ನೀಡಿದರು.


ಇದೇ ಸಂದರ್ಭದಲ್ಲಿ ಕೆಳದಿ ರಾಣಿ ಚೆನ್ನಮ್ಮ ಪ್ರಶಸ್ತಿಯನ್ನು ಪದ್ಮಶ್ರೀ ಮಂಜಮ್ಮಜೋಗತಿಗೆ ನೀಡಲಾ ಗುವುದು. ಈ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ.ರಾಘ ವೇಂದ್ರ ಸೇರಿದಂತೆ ಶಾಸಕರುಗಳು, ವಿವಿಧ ಮುಖಂ ಡರು ಭಾಗವಹಿಸುವರು. ಕಾಗೋಡು ತಿಮ್ಮಪ್ಪ ಹಾಗೂ ನಟ ದೊಡ್ಡಣ್ಣರವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿ ಸಲಾಗುವುದು. ಹಾಗೂ ಹಲವರಿಗೆ ಸಮಾಜ ಸೇವಾ ರತ್ನಾ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.
ಪತ್ರಿಕಾಗೋಷ್ಟಿಯಲ್ಲಿ ಜಡೆಶ್ರೀಗಳಾದ ಮಹಂತ ಸ್ವಾಮಿ, ಬಿಳಕಿ ಶ್ರೀಗಳಾದ ರಾಚೋಟೇಶ್ವರ ಸ್ವಾಮಿ, ತೋಗರ್ಸಿಯ ಚನ್ನವೀರ ದೇಶೀಕೇಂದ್ರ ಸ್ವಾಮೀಜಿ ಹಾಗೂ ಸಮಾಜದ ಮುಖಂಡರುಗಳಾದ ಡಾ. ಧನಂಜಯ್ ಸರ್ಜಿ, ಜ್ಯೋತಿಪ್ರಕಾಶ್,ಮಹೇಶ್ ಮೂರ್ತಿ ಸಿ. ಶಾಂತವೀರಪ್ಪ, ರುದ್ರೇಶ್, ಇ. ವಿಶ್ವಾಸ್ ಮೊದಲಾದವರು ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!