ಬೆಂಗಳೂರು, ನ.28: ಮುಂಬರುವ ವರ್ಷ 2024ಕ್ಕೆ ಮುಂಜೂರಾದ ಸಾರ್ವತ್ರಿಕ ರಜೆಗಳ ಪಟ್ಟಿಯನ್ನು (Public Holidays) ಕರ್ನಾಟಕ ಸರ್ಕಾರವು ಬಿಡುಗಡೆ ಮಾಡಿದೆ. ಎಲ್ಲಾ ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಭಾನುವಾರಗಳು ಸೇರಿದಂತೆ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಹೀಗಿದೆ.
ಜನವರಿ 15, ಸೋಮವಾರ: ಉತ್ತರಾಯಣ ಪುಣ್ಯಕಾಲ, ಮಕರ ಸಕ್ರಾಂತಿ
ಜನವರಿ 26, ಶುಕ್ರವಾರ: ಗಣರಾಜ್ಯೋತ್ಸವ
ಮಾರ್ಚ್ 8, ಶುಕ್ರವಾರ: ಮಹಾ ಶಿವರಾತ್ರಿ
ಮಾರ್ಚ್ 29, ಶುಕ್ರವಾರ: ಗುಡ್ ಫ್ರೈಡೆ
ಏಪ್ರಿಲ್ 9, ಮಂಗಳವಾರ: ಯುಗಾದಿ ಹಬ್ಬ
ಏಪ್ರಿಲ್ 11, ಗುರುವಾರ: ಖುತುಬ್ ಎ ರಂಜಾನ್
ಮೇ 1, ಬುಧವಾರ: ಕಾರ್ಮಿಕರ ದಿನಾಚರಣೆ
ಮೇ 10, ಶುಕ್ರವಾರ: ಬಸವ ಜಯಂತಿ, ಅಕ್ಷಯ ತೃತೀಯ
ಜೂನ್ 17, ಸೋಮವಾರ: ಬಕ್ರೀದ್
ಜುಲೈ 17, ಬುಧವಾರ: ಮೊಹರಂ ಕಡೇ ದಿನ
ಆಗಸ್ಟ್ 15, ಗುರುವಾರ: ಸ್ವಾತಂತ್ರ್ಯ ದಿನಚಾರಣೆ
ಸೆಪ್ಟೆಂಬರ್ 7, ಶನಿವಾರ: ವರಸಿದ್ಧಿ ವಿನಾಯಕ ವೃತ
ಸೆಪ್ಟೆಂಬರ್ 16, ಸೋಮವಾರ: ಈದ್ ಮಿಲಾದ್
ಅಕ್ಟೋಬರ್ 2, ಬುಧವಾರ: ಗಾಂಧಿ ಜಯಂತಿ, ಮಹಾಲಯ ಅಮವಾಸ್ಯೆ
ಅಕ್ಟೋಬರ್ 11, ಶುಕ್ರವಾರ: ಮಹಾನವಮಿ, ಆಯುಧಪೂಜೆ
ಅಕ್ಟೋಬರ್ 17, ಗುರುವಾರ: ಮಹರ್ಷಿ ವಾಲ್ಮೀಕಿ ಜಯಂತಿ
ಅಕ್ಟೋಬರ್ 31, ಗುರುವಾರ: ನರಕ ಚತುರ್ದಶಿ
ನವೆಂಬರ್ 1, ಶುಕ್ರವಾರ: ಕನ್ನಡ ರಾಜ್ಯೋತ್ಸವ
ನವೆಂಬರ್ 2, ಶನಿವಾರ: ಬಲಿಪಾಡ್ಯಮಿ, ದೀಪವಾಳಿ
ನವೆಂಬರ್ 18. ಸೋಮವಾರ: ಕನಕದಾಸ ಜಯಂತಿ
ಡಿಸೆಂಬರ್ 25, ಬುಧವಾರ: ಕ್ರಿಸ್ಮಸ್
ಈ ರಜಾ ಪಟ್ಟಿಯಲ್ಲಿ ಭಾನುವಾರಗಳಂದು ಬರುವ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ (ಏಪ್ರಿಲ್ 14) ಮತ್ತು ಮಹಾವೀರ ಜಯಂತಿ (ಏಪ್ರಿಲ್ 21) ಹಾಗೂ ಎರಡನೇ ಶನಿವಾರದಂದು ಬರುವ ವಿಜಯದಶಮಿ (ಅಕ್ಟೋಬರ್ 12) ಈ ರಜೆ ಪಟ್ಟಿಯಲ್ಲಿ ನಮೂದಿಸಿರುವುದಿಲ್ಲ.
ಸಾರ್ವತ್ರಿಕ ರಜಾ ದಿನಗಳಲ್ಲಿ ರಾಜ್ಯಾದ್ಯಂತ ಸರ್ಕಾರಿ ಕಚೇರಿಗಳು ಮುಚ್ಚಲ್ಪಡುತ್ತದೆ. ಕಚೇರಿಯ ಜರೂರು ಕೆಲಸವನ್ನು ವಿಲೇವಾರಿ ಮಾಡುವ ಬಗ್ಗೆ ಇಲಾಕಾ ಮುಖ್ಯಸ್ಥರು ಸೂಕ್ತ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ.
ಈ ಪಟ್ಟಿಯಲ್ಲಿ ಸೇರಿಸಲಾಗಿರುವ ಮುಸಲ್ಮಾನರ ಹಬ್ಬಗಳು ನಿಗಧಿತ ದಿನಾಂಕದಂದು ಬೀಳದಿದ್ದರೆ ಸರ್ಕಾರಿ ಸೇವೆಯಲ್ಲಿರುವ ಮುಸಲ್ಮಾನ ನೌಕರರಿಗೆ ನಿಗದಿತ ರಜೆಗೆ ಬದಲಾಗಿ ಹಬ್ಬದ ದಿನದಂದು ರಜೆ ಮಂಜೂರು ಮಾಡಬಹುದು. ಸೆಪ್ಟೆಂಬರ್ 3 ಮಂಗಳವಾರ ಕೈಲ್ ಮೂಹೂರ್ತ, ಅಕ್ಟೋಬರ್ 17 ಗುರುವಾರ ತುಲಾ ಸಂಕ್ರಮಣ ಹಾಗೂ ಡಿಸೆಂಬರ್ 14 ಶನಿವಾರ ಹುತ್ತರಿ ಹಬ್ಬವನ್ನು ಆಚರಿಸಲು ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಸ್ಥಳೀಯ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿದೆ. (ಅಧಿಕೃತ ಸಂಗ್ರಹ ಸುದ್ದಿ)
ಈ ಸುದ್ದಿಯನ್ನೂ ಓದಿ:
https://tungataranga.com/?p=25568
ಶಿವಮೊಗ್ಗ ಮಹಾನಗರ ಪಾಲಿಕೆಯ ಆಡಳಿತ ವರ್ಗಕ್ಕೊಂದು ಗಂಭೀರ ಪ್ರಶ್ನೆ/ ಬಿಜೆಪಿ ರಾಜ್ಯಾಧ್ಯಕ್ಷರ ಆಗಮನದ ಎಲ್ಲಾ ಪ್ಲೆಕ್ಸಿಗಳ ತೆರಿಗೆ ಹಣ ಬಂದಿದೆಯಾ?
ಸಂಪೂರ್ಣ ಸುದ್ದಿ ಓದಲು ಲಿಂಕ್ ಬಳಸಿ