ಇದು ಮೊದಲ ಮಾತು
ಹೊರಗುತ್ತಿಗೆ ನೌಕರನೇ ಲಂಚ ಕೇಳುವ ಹಾಗೂ ಲಂಚಕ್ಕೆ ಪೀಡಿಸುವ, ಮಾಮೂಲಿ ವಸೂಲಿ ವಿಚಾರಕ್ಕೆ ಮುಂದಾದ ಎಂದರೆ ಇಡೀ ವ್ಯವಸ್ಥೆ ಏನಾಗುತ್ತದೆ. ಇಂತಹ ಭ್ರಷ್ಟರನ್ನು ಆಯ್ಕೆ ಮಾಡುವ ವಿಷಯ ಗಂಭೀರವಾಗಿದೆ. ಸರ್ಕಾರ ಹಾಗೂ ಆಯಾ ಇಲಾಖೆ ಮತ್ತು ಹೊರಗುತ್ತಿಗೆ ಪಡೆಯುವ ಏಜೆನ್ಸಿಗಳು ಇತ್ತ ಗಮನಿಸುವ ಹಾಗೂ ಗಂಭೀರ ಕ್ರಮ ಕೈಗೊಳ್ಳುವ ಅಗತ್ಯವಿದೆ.
ಶಿವಮೊಗ್ಗ, ನ.28:
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಹೊರಗುತ್ತಿಗೆ ನೌಕರನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ತೀಕ್ ಎಸ್.ಕೆ ಅವರು ಪ್ರತಿ ತಿಂಗಳು ಸೇವಾಬಿಲ್ಲುಗಳ ಬಿಡುಗಡೆಗೆ ಟೆಂಡರ್ದಾರರಿಗೆ ಹಣದ ಬೇಡಿಕೆಯಿಟ್ಟು ವಂಚಿಸುತ್ತಿದ್ದು, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ತೀರ್ಥಹಳ್ಳಿ ಕುಡುಮಲ್ಲಿಗೆಯ ಪೂರ್ಣೇಶ್ ಮನವಿ ಸಲ್ಲಿಸಿದ್ದಾರೆ.
ಕಾರ್ತೀಕ್ ಅವರು ಇಲ್ಲಿಗೆ ಹೊರಗುತ್ತಿಗೆ ಆಧಾರದಲ್ಲಿ ನಿಯೋಜನೆಗೊಂಡು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಿವಮೊಗ್ಗ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಾನು ಇದೇ ಇಲಾಖೆಯ ಶಿವಮೊಗ್ಗ ವ್ಯಾಪ್ತಿಯಲ್ಲಿನ ವಸತಿ ನಿಲಯಗಳಿಗೆ ಆಹಾರ ಸಾಮಗ್ರಿಗಳನ್ನು ಪೂರೈಕೆ ಮಾಡುತ್ತಿದ್ದೇನೆ.ಇಲಾಖೆಗೆ ಸಲ್ಲಿಸಲಾಗುವ ಬಿಲ್ಲುಗಳ ಬಿಡುಗಡೆಗೆ ಕಾರ್ತಿಕ್ ಪ್ರತಿ ತಿಂಗಳು 20,000/- ಬೇಡಿಕೆ ಇಟ್ಟಿದ್ದು ನಾನು ಪ್ರತಿಬಾರೀ 15,000 ರೂ ಗಳನ್ನು ಬಿಲ್ ಬಿಡುಗಡೆಗಾಗಿ ಕಾರ್ತೀಕರಿಗೆ ನೀಡುತ್ತಿದ್ದೇನೆ ಎಂದು ಮನವಿಯಲ್ಲಿ ಹೇಳಿದ್ದಾರೆ.
ಇಲಾಖೆಯ ಬಯೋಮೆಟ್ರಿಕ್ ಹಾಜರಾತಿಯನ್ನು ಸಹ ತಾವೇ ನಿರ್ವಹಿಸುತ್ತಿದ್ದು, ಹೊರಗುತ್ತಿಗೆ ನೌಕರನೆಂಬುದನ್ಮು ಮರೆತು ತಾವೇ ಅಧಿಕಾರಿಯಂತೆ ನಡೆಯುತ್ತಿದ್ದಾರೆ ಹಾಗೂ ವಸತಿ ನಿಲಯದಲ್ಲಿ ಪ್ರವೇಶ ಪಡೆಯುವ ಕ್ರೀಡಾಪಟುಗಳಿಂದ ಹಣ ವಸೂಲಿ ಮಾಡುತ್ತಿರುವ ವಿಷಯ ಕೇಳಿಬಂದಿರುತ್ತದೆ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.
ಕಾರ್ತಿಕ್ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಅವರ ವಂಚನೆಯ ವಿಷಯ ಬಹಿರಂಗಗೊಳ್ಳಬೇಕು ಎಂಬ ಇತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ಪ್ರವೀಣ ಅವರು ಜಿಲ್ಲಾಧಿಕಾರಿ ಸೇದಂತೆ ವಿವಿಧ ಇಲಾಖೆಗಳಿಗೆ ಮನವಿ ಸಲ್ಲಿಸಿದ್ದಾರೆ.