ಶಿವಮೊಗ್ಗ: ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಸಂಸ್ಥೆ ವತಿಯಿಂದ ನ.೧೯ರಂದು ಬೆಳಿಗ್ಗೆ ೯-೩೦ಕ್ಕೆ ಅಂಬೇಡ್ಕರ್ ಭವನದಲ್ಲಿ ಪ್ರಾಂತೀಯ ಸಮ್ಮೇಳನ ಭಾವನೋತ್ಸವ ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷೆ ಸುರೇಖಾ ಮುರಳೀಧರ್ ಹೇಳಿದರು.


ಅವರು ಇಂದು ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಎಂಬುದು ಅಂತರಾಷ್ಟ್ರೀಯ ಸಂಸ್ಥೆಯಾಗಿದೆ. ಇದರ ಶಿವಮೊಗ್ಗ ಘಟಕ ೨೦೨೧ರಲ್ಲಿ ಪ್ರಾರಂಭವಾಯಿತು. ಅಂದಿನಿಂದ ಸಾಮಾಜಿಕ ಚಟುವಟಿಕೆ, ಶೈಕ್ಷಣಿಕ ಕಾರ್ಯಕ್ರಮ, ಆರೋಗ್ಯ ಶಿಬಿರಗಳು, ಪರಿಸರ ಕಾಳಜಿ, ಶಾಲಾ ಕಾಲಾಕಾಲೇಜುಗಳಲ್ಲಿ ಹದಿಹರೆಯದ ಹೆಣ್ಣುಮಕ್ಕಳಿಗೆ ಆರೋಗ್ಯ ಮಾಹಿತಿ, ಸಾಂಸ್ಕೃತಿಕ ಕಾರ್ಯಕ್ರಮಗಳು, ಹೊಲಿಗೆ ಮಿಷನ್, ವ್ಹೀಲ್ ಚೇರ್ ಕೊಡುಗೆ, ಸಾರ್ವಜನಿಕ ಸ್ಥಳಗಳಲ್ಲಿ ನೀರಿನ ಬಗ್ಗೆ ಜನಜಾಗೃತಿ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ ಎಂದರು.


ಈಗ ಪ್ರಾಂತೀಯ ಸಮ್ಮೇಳನವನ್ನು ಶಿವಮೊಗ್ಗದಲ್ಲಿ ಹಮ್ಮಿಕೊಳ್ಳಲಾಗಿದೆ. ಇದರ ಆತಿಥ್ಯ ಸ್ವೀಕರಿಸಿರುವ ಶಿವಮೊಗ್ಗ ಘಟಕ ವಿಶೇಷವಾಗಿ ಈ ಕಾರ್ಯಕ್ರಮ ಆಯೋಜಿಸಿದೆ. ಶಿವಮೊಗ್ಗ ಘಟಕದಲ್ಲಿ ಸುಮಾರು ೧೨೬ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಇದು ಪ್ರಾಂತೀಯ ಸಮ್ಮೇಳನವಾದ್ದರಿಂದ ಸುಮಾರು ೪೦೦ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಲಿದ್ದಾರೆ. ಈ ಸಂಸ್ಥೆಯು ಹೆಣ್ಣುಮಕ್ಕಳಿಂದ ಅದರಲ್ಲೂ ನಲವತ್ತು ವರ್ಷಕ್ಕೂ ಹೆಚ್ಚು ವಯಸ್ಸಿನವರು ಸದಸ್ಯರಾಗಿರುತ್ತಾರೆ ಎಂದರು.


ಸಿಎಸ್‌ಎಲ್‌ನ ರಾಷ್ಟ್ರೀಯ ಅಧ್ಯಕ್ಷ ಪ್ರೊ. ವಾಗೀಶ್‌ವೈದ್ಯನ್ ಸಮ್ಮೇಳ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ, ನವೀನ್ ಅಮಿನ್, ಹರಿಪ್ರಸಾದ್ ರೈ, ಭರತ್‌ದಾಸ್, ಡಾ. ಅರವಿಂದ ರಾವ್, ಜೋಸೆ ಕಂಡೋತ್, ರಾಜೇಶ್ ವೈಭವ್, ರೆಹಮಾನ್, ಚಿತ್ರಾ ಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಇಡೀದಿನ ನಿರಂತರ ಚಟುವಟಿಕೆಗಳು ನಡೆಯುತ್ತವೆ. ಮನ್ನಣೆ, ಪುರಸ್ಕಾರಗಳೂ ಇರುತ್ತವೆ ಎಂದರು.


ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಪುಷ್ಪಾ ಎಸ್. ಶೆಟ್ಟಿ, ರತ್ನಾ ಲಕ್ಷ್ಮೀನಾರಾಯಣ್, ವಾತ್ಸಲ್ಯ ಸತೀಶ್ ಶೆಟ್ಟಿ, ಸುಶೀಲಾ ಷಣ್ಮುಗಂ ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!