ಸಕ್ರೆಬೈಲು ಆನೆ ಬಿಡಾರದ ಭಾನುಮತಿ ಆನೆಯ ಬಾಲ ಕಟ್ ಆಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುಮತಿ ಆನೆಯ ಸೀನಿಯರ್ ಹಾಗೂ ಜೂನಿಯರ್ ಕಾವಾಡಿಗರನ್ನು ಅಮಾನತು ಮಾಡಲಾಗಿದೆ.
ಸುದೀಪ್ ಹಾಗೂ ಮೊಹಮ್ಮದ್ ಅವರನ್ನು ಶಿವಮೊಗ್ಗ ವನ್ಯಜೀವಿ ವಿಭಾಗದ ಡಿಎಫ್‌ಓ ಪ್ರಸನ್ನ

ಪಟಗಾರ್ ಅಮಾನತು ಮಾಡಿದ್ದಾರೆ.
ಅಕ್ಟೋಬರ್ ೧೭ರಂದು ಭಾನುಮತಿ ಆನೆಯ ಬಾಲ ಭಾಗಶಃ ತುಂಡಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಗರ್ಭ ಧರಿಸಿದ್ದ ಭಾನುಮತಿ ಆನೆ ನವೆಂಬರ್ ೪ ರಂದು ಹೆಣ್ಣು ಮರಿಗೆ ಜನ್ಮ ನೀಡಿತ್ತು.

ಆನೆ ಬಾಲ ಭಾಗಶಃ ತುಂಡಾಗಿರುವ ಬಗ್ಗೆ ತಿಳಿದ ಡಿಸಿಎಫ್ ಪ್ರಸನ್ನ ಪಟಗಾರ್ ಅವರು ಸಕ್ರೆಬೈಲು ಎಸಿಎಫ್ ನೇತೃತ್ವದಲ್ಲಿ ತನಿಖಾ ಸಮಿತಿ ರಚನೆ ಮಾಡಿ ವರದಿ ನೀಡುವಂತೆ ಸೂಚಿಸಿತ್ತು.


ಈ ಸಮಿತಿಯು ಡಿಸಿಎಫ್ ಅವರಿಗೆ ವರದಿ ನೀಡಿದ್ದು, ವರದಿಯಲ್ಲಿ ಆನೆ ಬಾಲ ಭಾಗಶಃ ತುಂಡಾಗಲು ಹರಿತವಾದ ಆಯುಧ ಬಳಕೆ ಮಾಡಲಾಗಿದೆ. ಆನೆಯನ್ನು ನೋಡಿಕೊಳ್ಳುವ ಮಾವುತ ಹಾಗೂ ಕಾವಾಡಿಗರು ಇದರ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ. ಆನೆಯು ಗರ್ಭಿಣಿಯಾಗಿದ್ದ

ಕಾರಣ ಅದು ಬಿಡಾರದಲ್ಲಿಯೇ ಇತ್ತು. ಈ ವೇಳೆ ನಡೆದ ಘಟನೆ ಎಂದು ಹೇಳಲಾಗಿತ್ತು. ಈ ವರದಿಯನ್ನು ಪರಿಶೀಲಿಸಿದ ಡಿಎಪ್‌ಓ ಪ್ರಸನ್ನ ಪಟಗಾರ್ ಅವರು ಆನೆಯ ಕಾವಾಡಿಗಳಿಬ್ಬರನ್ನು ಅಮಾನತು ಮಾಡಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!