ಶಿವಮೊಗ್ಗ, ನ.೧೩:
ಜಿಲ್ಲೆಯಲ್ಲಿ ಬರಗಾಲ ಇದ್ದರೂ ಜನರು ದೀಪಾವಳಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಲು ಹಿಂದೆ ಬಿದ್ದಿಲ್ಲ. ದೀಪಾವಳಿ ಹಿನ್ನೆಲೆಯಲ್ಲಿ ನಗರದ ಗಾಂಧಿ ಬಜಾರ್‌ನಲ್ಲಿ ಜನ ಜಂಗುಳಿ ಕಂಡು ಬಂತು. ಹಬ್ಬಕ್ಕೆ ಬೇಕಾದ ದಿನಸಿ ಪದಾರ್ಥ, ಪೂಜೆಗೆ ಹೂವು ಹಣ್ಣು ಮತ್ತು ಪಟಾಕಿ ಮಾರಾಟ ಭರ್ಜರಿಯಾಗಿ ನಡೆಯಿತು.


ಗಾಂಧಿ ಬಜಾರ್ ರಸ್ತೆಯಲ್ಲಿರುವ ಅಂಗಡಿಗಳು ಹಬ್ಬಕ್ಕಾಗಿಯೇ ಸಾಕಷ್ಟು ಸಾಮಗ್ರಿಗಳನ್ನು ಶೇಖರಿಸಿಟ್ಟು, ಕೊಡುಗೆ ಇರುವ ವಸ್ತುಗಳ ಬ್ಯಾನರ್ ಮಾಡಿಸಿ ಅಂಗಡಿ ಮುಂದೆ ಕಟ್ಟಿ, ಗ್ರಾಹಕರನ್ನು ಆಕರ್ಷಣೆ ಮಾಡುತ್ತಿದ್ದ ದೃಶ್ಯ ಕಂಡು ಬಂತು. ಹೂವಿನ ಬೆಲೆ ಗಗನಕ್ಕೇರಿದ್ದರೂ ದೀಪಾವಳಿ ಹಬ್ಬ ಆಚರಣೆ ಮಾಡಲೇ ಬೇಕಾಗಿರುವ ಕಾರಣ ಚೌಕಾಸಿ ಮಾಡಿಯಾದ್ರೂ ಮಹಿಳೆಯರು ಖರೀದಿ ಮಾಡಿದರು.


ದಸರಾದಲ್ಲಿ ಅಂಗಡಿಗೆ ಪೂಜೆ ಮಾಡದ ವರು ದೀಪಾವಳಿಗೆ ಮಾಡುತ್ತಾರೆ. ಹೀಗಾಗಿ ನಗರದಲ್ಲಿ ಎಲ್ಲಿ ನೋಡಿದರೂ ಅಂಗಡಿಗಳಿಗೆ ಹೂವು, ದೀಪಾಲಂಕಾರ ಮಾಡುವುದು ಕಂಡು ಬಂತು. ಈ ಹಿಂದೆ ಸೈನ್ಸ್ ಮೈದಾನ, ನೆಹರು ಕ್ರೀಡಾಂಗಣದಲ್ಲಿ ಪಟಾಕಿ ಮಾರಾ ಟಕ್ಕೆ ಅವಕಾಶ ಮಾಡಲಾಗಿತ್ತು

. ಈ ವರ್ಷ ಪ್ರೀಡಂ ಪಾರ್ಕ್‌ನಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ತಾತ್ಕಾಲಿಕ ಶೆಡ್ ಹಾಕಿಕೊಂಡು ೬೭ ಮಳಿಗೆಯಲ್ಲಿ ಪಟಾಕಿ ಮಾರಾಟಗಾರರು ವ್ಯಾಪಾರ ಮಾಡು ತ್ತಿದ್ದಾರೆ. ಭಾನುವಾರ ರಜೆ ದಿನವಾಗಿದ್ದರಿಂದ ಪಟಾಕಿ ಖರೀದಿಗೆ ಜನ ಮುಗಿ ಬಿದ್ದಿದ್ದರು.


ಜನರ ಅಭಿರುಚಿಗೆ ತಕ್ಕಂತೆ ದೀಪಾವಳಿ ಹಬ್ಬದ ಪಟಾಕಿಗಳು ಕೂಡ ಬದಲಾಗುತ್ತಿವೆ. ಹಳೆಯ ದೀಪಾವಳಿಗೂ, ಈಗಿನ ದೀಪಾ ವಳಿಗೂ ಅಜಗಜಾಂತರ ವ್ಯತ್ಯಾಸ ಕಂಡುಬರು ಸತ್ತಿದೆ. ಮೊದಲ್ಲೆಲ್ಲಾ ಮಾರುಕಟ್ಟೆಯಲ್ಲಿ ಕಾಣಸಿಗುತ್ತಿದ್ದ ಚೈನಾ ಪಟಾಕಿಗಳು ಇದೀಗ ಮಾಯವಾಗಿ ಮೇಕ್ ಇನ್ ಇಂಡಿಯಾ ಪಟಾಕಿಗಳು ಲಗ್ಗೆ ಇಟ್ಟಿವೆ.


ಪಟಾಕಿ ಮಾರುಕಟ್ಟೆಯಲ್ಲಿ ಇವುಗಳನ್ನು ಹುಡುಕುವುದೇ ಕಷ್ಟವಾಗಿದ್ದು, ಈಗೇನಿ ದ್ದರೂ ಡಬಲ್ ಟ್ರ್ಯಾಕರ್, ತ್ರಿಬಲ್ ಟ್ರ್ಯಾಕ್ಟರ್, ಡಬಲ್ ಸೌಂಡ್, ೭ ಸೌಂಡ್ ನಂತಹ ಇಂಗ್ಲಿಷ್ ನಾಮಧೇಯದ ಪಟಾಕಿಗಳದ್ದೇ ಕಾರುಬಾರಾಗಿದೆ. ಬಾಕ್ಸ್ ಗಾತ್ರಕ್ಕೆ ತಕ್ಕಂತೆ ಬೆಲೆ ನಿಗದಿ ಮಾಡಿದ್ದು, ೨೫೦ರಿಂದ ಹಿಡಿದು ೧೦ ಸಾವಿರ ರು.ವರೆಗೆ ಪಟಾಕಿ ಬಾಕ್ಸ್‌ಗಳು ಇವೆ. ಭಾನುವಾರ ಪ್ರೀಡಂ ಪಾರ್ಕ್‌ನಲ್ಲಿ ತಮ್ಮ ಮಕ್ಕಳೊಂದಿಗೆ ಬಂದಿದ್ದ ಪೋಷಕರು ಮಕ್ಕಳಿಗೆ ಬೇಕಾದ ಪಟಾಕಿಗಳ ಖರೀದಿ ಮಾಡಿದರು.

By admin

ನಿಮ್ಮದೊಂದು ಉತ್ತರ

error: Content is protected !!