ಶಿವಮೊಗ್ಗ: ನಿಕಟಪೂರ್ವ ಮುಖ್ಯಮಂತ್ರಿ ಹಾಗೂ ನನ್ನ ರಾಜಕೀಯ ಗುರುಗಳು ಆದ ಬಿ.ಎಸ್.ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿಯಾಗಿ ಮುಂದವರೆಯಲು ವಯಸ್ಸಾಗಿದೆ ಎಂಬ ಕಾರಣ ನೀಡಿ ಕೆಳಗಿಸಿದ ಬಿಜೆಪಿಯ ಮಹಾನ್ ನಾಯಕರುಗಳು ಈಗ ಬರ ಅದ್ಯಯನ ಪ್ರವಾಸ ಎಂಬ ಹೆಸರಿನಲ್ಲಿ ನಡೆಸುತ್ತಿರುವ ಕಾರ್ಯಕ್ರಮಕ್ಕೆ ಈಗ ಯಡಿಯೂರಪ್ಪ ಅವರ ನಾಯಕತ್ವ ನೀಡಿದ್ದಾರೆ. ಈಗ ಅವರಿಗೆ ವಯಸ್ಸಾಗಿಲ್ಲವೇ..? ಈ ಬಿಜೆಪಿ ನಾಯಕರು ಅವರ ಹೋರಾಟವನ್ನು, ಅವರ ಶಕ್ತಿಯನ್ನು ಅತ್ಯಂತ ಅವಮಾನ ಮಾಡಿದ್ದಾರೆ ಎಂದು ಮಾಜಿ ಸಂಸದ ಆಯನೂರು ಮಂಜುನಾಥ್ ಇಂದಿಲ್ಲಿ ತೀವ್ರ ಅಸಮಧಾನ ವ್ಯಕ್ತಪಡಿಸಿದರು


ಹಿಂದೆ ಅತ್ಯಂತ ಸುಭೀಕ್ಷವಾಗಿ ರಾಜ್ಯದ ಇಕ್ಕೆಲಗಳಲ್ಲೂ ಸುತ್ತಾಡುತ್ತಾ ಮುಖ್ಯಮಂತ್ರಿಯಾಗಿ ಅತ್ಯಂತ ಪ್ರಭಾವಿಯಾಗಿ ಕೆಲಸ ಮಾಡುತ್ತಿದ್ದ ಯಡಿಯೂರಪ್ಪ ಅವರನ್ನು ವಯಸ್ಸಾಗಿದೆ ಎಂಬ ಕುಂಟು ನೆಪ ನೀಡಿ ನಂತರ ಬಿಜೆಪಿ ಸರ್ಕಾರವನ್ನೆ ಕುಂಟುವಂತೆ ಮಾಡಿದ ನಾಯಕರುಗಳಿಗೆ ಈಗ ಮತ್ತೆ ಯಡಿಯೂರಪ್ಪ ಬೇಕಾಗಿದ್ದಾರೆ. ನಾನು ಅವರ ಶಿಷ್ಯನಾಗಿ ಬೆಳೆದವನು. ಅವರ ಶಾಂತ ಸ್ವರೂಪ ಅರ್ಥವಾಗಲಿಲ್ಲ. ಅವರನ್ನು ಇನ್ನು ಎಷ್ಟು ಅವಮಾನ ಮಾಡಬೇಕು ಎಂದುಕೊಂಡಿದ್ದೀರಿ ಎಂದು ಬಿಜೆಪಿ ನಾಯಕರಿಗೆ ಪ್ರಶ್ನಿಸಿದರು
.


ಅವರ ಇಬ್ಬರು ಮಕ್ಕಳು ಜನಪ್ರತಿನಿಧಿಯಾಗಿದ್ದಾರೆ. ಕನಿಷ್ಠ ಪಕ್ಷ ಅವರಿಗಾದರೂ ಯಡಿಯೂರಪ್ಪ ನವರ ಶಕ್ತಿ ಗೊತ್ತಾಗಿಲಿಲ್ಲವೇ. ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಸುವ ಹೊತ್ತಿನಲ್ಲಿ ಸುಮ್ಮನಿದ್ದವರು ಈಗ ಇಂತಹ ಬರ ಅಧ್ಯಯನಕ್ಕೆ ಹಳ್ಳಿ, ಹಳ್ಳಿಗಳಿಗೆ ತಂದೆಯನ್ನು ಕರೆದುಕೊಂಡು ಹೋಗುತ್ತಾರೆ ಎಂದಾಗ ಬಿಜೆಪಿ ನಾಯಕರಿಗೆ ಪ್ರಶ್ನಿಸಲು ಆಗಲಿಲ್ಲವೇ.? ಯಡಿಯೂರಪ್ಪ ಅವರಿಗೆ ಬಿಜೆಪಿ ನಾಯಕರು ಮಾಡಿದ ಅವಮಾನವನ್ನು ಯಾರೂ ಸಹಿಸುವುದಿಲ್ಲ ಎಂದರು.

.

By admin

ನಿಮ್ಮದೊಂದು ಉತ್ತರ

error: Content is protected !!