ರಾಜ್ಯದ ನೂರಾರು ಮಕ್ಕಳ ಪಾಲ್ಗೊಳ್ಳುವಿಕೆಗೆ ಹರ್ಷ ವ್ಯಕ್ತಪಡಿಸಿದ ಜ್ಯೋತಿಪ್ರಕಾಶ್
ಶಿವಮೊಗ್ಗ ,ನ.29:
ಕರಾಟೆ ಅನ್ಯ ದೇಶದ ಕ್ರೀಡೆಯಾಗಿದ್ದರೂ ಭಾರತದಲ್ಲಿ ತನ್ನದೇ ಗುರುತರ ಸ್ಥಾನ ಹೊಂದಿದೆ. ಸುಮಾರು ಮುವತ್ತು ವರುಷದ ಹಿಂದೆ ಬೆಂಗಳೂರಿನಿಂದ ಇಲ್ಲಿಗೆ ಬಂದು ಕರಾಟೆ ಪಾಠ ಹೇಳಿಕೊಡುತ್ತಿದ್ದರು ಎಂದು ಆ ಕ್ರೀಡೆಯ ಬಗ್ಗೆ ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಜ್ಯೋತಿ ಪ್ರಕಾಶ್ ಹೇಳಿದರು.
ಅವರು ಇಂದು ಕರ್ನಾಟಕ ರಾಜ್ಯ ಕರಾಟೆ ಸಂಸ್ಥೆ ಹಾಗೂ ಶಿವಮೊಗ್ಗ ಜಿಲ್ಲಾ ಕರಾಟೆ ಸಂಸ್ಥೆಯು ಕರ್ನಾಟಕ ರಾಜ್ಯದಲ್ಲೇ ಲಾಕ್ ಡೌನ್ ನಂತರ ಪ್ರಥಮ ಬಾರಿಗೆ ಇಂದು ಶಿವಮೊಗ್ಗದ ಸ್ಕೌಟ್ ಭವನದಲ್ಲಿ ಕನ್ನಡ ರಾಜ್ಯೋತ್ಸವ ಕಪ್ ದ್ವಿತೀಯ ರಾಜ್ಯ ಮಟ್ಟದ ಕರಾಟೆ ಪಂದ್ಯಾವಳಿಯ ಉದ್ಘಾಟನೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕರಾಟೆ ಕಲಿಕೆ ಇಂದಿನ ದಿನಮಾನಗಳಲ್ಲಿ ಸುಲಭವಾಗಿದೆ. ಕ್ರೀಡೆಯ ಆಸಕ್ತಿ ಹಾಗೂ ಭಾಗವಹಿಸುವಿಕೆ ಅತ್ಯಂತ ಮುಖ್ಯ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪತ್ರಕರ್ತ ಎಸ್. ಕೆ.ಗಜೇಂದ್ರಸ್ವಾಮಿ ಅವರು ಮಾತನಾಡುತ್ತಾ ಕರಾಳ ಕೊರೊನಾ ಅವಧಿ ಅಂತ್ಯ ಕಾಣದ ಇಂದಿನ ದಿನಮಾನಗಳಲ್ಲಿ ರಾಜ್ಯಮಟ್ಟದ ಪಂದ್ಯಾವಳಿಯನ್ನು ಶಿವಮೊಗ್ಗ ಸಮಿತಿ ವ್ಯವಸ್ಥಿತವಾಗಿ ಆಯೋಜಿಸಿರುವುದು ರಾಜ್ಯದಲ್ಲೇ ಶಿವಮೊಗ್ಗವನ್ನು ಉತ್ತುಂಗದಲ್ಲಿ ಗುರುತಿಸುವಂತೆ ಮಾಡಿದೆ ಎಂದರು.
ಕೊರೊನಾ ಅವಧಿಯ ಆನ್ ಲೈನ್ ಪಾಠ ಹಾಗೂ ಪಠ್ಯೇತರ ಚಟುವಟಿಕೆಗಳನ್ನು ಕೈಬಿಟ್ಟಿರುವ ಈ ಅವಧಿ ಎಲ್ಲಾ ಕ್ರೀಡೆಗಳಿಗೆ ಸಂದಿಗ್ದತೆ ಕಾಲವನ್ನು ನೀಡಿದೆ. ಕರಾಟೆ ಬಾಲಕಿಯರ ಆತ್ಮವಿಶ್ವಾಸ ಹೆಚ್ಚಿಸುವ ಕ್ರೀಡೆ ಎಂದರು.
ಪಾಲಿಕೆ ಸದಸ್ಯ ದೀರರಾಜ್ ಹೊನ್ನವಿಲೆ ಅವರು ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟೀಯ ಪಂದ್ಯಾವಳಿಗಳನ್ನು ಶಿವಮೊಗ್ಗದಲ್ಲಿ ಆಯೋಜಿಸಿ ಜಿಲ್ಲೆಯ ಕೀರ್ತಿ ಎತ್ತಿಹಿಡಿದಿರುವನಗರ ಕರಾಟೆ ಅಸೋಸಿಯೇಷನ್ ನ ಕಲಿಕೆಗೆ ಸೂಡಾ ಜಾಗ ನೀಡಿದರೆ ಪಾಲಿಕೆ ಯಿಂದ ಸಹಾಯ ಕೊಡಿಸುವ ವಿಶ್ವಾಸ ವ್ಯಕ್ತಪಡಿಸಿದರು.
ಮೆಸ್ಕಾಂ ನಿರ್ದೇಶಕ ದಿನೇಶ್ ಮಾತನಾಡಿ ಮಕ್ಕಳಿಗೆ ಶುಭಹರಸಿದರು.
ಮಾನವಹಕ್ಕುಗಳ ಕಮಿಟಿಯ ರಾಜ್ಯಾಧ್ಯಕ್ಷ ಕೆ. ನಾಗರಾಜ್, ಜಿಲ್ಲಾ ಗೌರವಾಧ್ಯಕ್ಷ ಎಸ್. ರಮೇಶ್, ರಾಜ್ಯ ಕಾರ್ಯದರ್ಶಿ ನಿರಂಜನಮೂರ್ತಿ ಹಾಸನದ ವಕೀಲರಾದ ಮಹೇಶ್ ಉಪಸ್ಥಿತರಿದ್ದರು.
ಪಂದ್ಯಾವಳಿ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಸಂಸ್ಥೆಯ ಅಧ್ಯಕ್ಷರಾದ ವಿನೋದ್ ವಹಿಸಿದ್ದರು.
ಈ ಪಂದ್ಯಾವಳಿಗೆ ಕರ್ನಾಟಕದ ವಿವಿಧ ಜಿಲ್ಲೆಗಳಾದ ಹಾಸನ, ಬಳ್ಳಾರಿ, ಬೆಳಗಾವಿ, ಚಿಕ್ಕಮಗಳೂರು, ಹಾವೇರಿ ಸೇರಿದಂತೆ ಹಲವು ಜಿಲ್ಲೆಗಳ ನೂರಾರು ಕ್ರೀಡಾಪಟುಗಳು ಆಗಮಿಸಿದ್ದರು.
ಪಂದ್ಯಾವಳಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಕರಾಟೆ ಸಂಸ್ಥೆಯ ಪದಾಧಿಕಾರಿಗಳಾದ ರಾಘವೇಂದ್ರ, ಸಚಿನ್, ಶಂಭು, ಪಂಚಪ್ಪ, ಶರವಣ, ಶ್ರೇಯಸ್ , ವೆಂಕಟೇಶ್, ಹರ್ಷಿತ, ಚಂದ್ರಕುಮಾರ್, ವೀರೇಶಪ್ಪ , ದುರ್ಗಾ, ದರ್ಶನ್, ಜೀವನ್ ಹಾಗೂ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ವಿವಿಧ ಜಿಲ್ಲೆಗಳಿಂದ ಕರಾಟೆ ತರಬೇತುದಾರರಾದ ಆರಿಫ್ ಶಿವಕುಮಾರ್ ದಿಲೀಪ್ ಮಲ್ಲಿಕಾರ್ಜುನ್ ಆಗಮಿಸಿದ್ದರು.
ಶಾರದಾ ಶೇಷಗಿರಿಗೌಡ ಸ್ವಾಗತಿಸಿ ವಂದಿಸಿದರು. ಉಷಾ ಉತ್ತಪ್ಪ ಕಾರ್ಯಕ್ರಮ ನಿರೂಪಿಸಿದರು.