ಶಿವಮೊಗ್ಗ : ರಾಗಿ ಗುಡ್ಡದಲ್ಲಿ ನಡೆದ ಘಟನೆಯನ್ನು ನೋಡಿದರೆ ರಾಜ್ಯ ಸರ್ಕಾರ ಬದುಕಿದೆಯೇ ಎಂಬ ಪ್ರಶ್ನೆ ಮೂಡುತ್ತದೆ ಎಂದು ಮಾಜಿ ಸಚಿವ ಅಶ್ವತ್ ನಾರಾಯಣ್ ಹೇಳಿದರು.

ಬಿಜೆಪಿ ಸತ್ಯಶೋಧನಾ ಸಮಿತಿ ಗಲಭೆ ಪೀಡಿತ ರಾಗಿಗುಡ್ಡಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸ್ಥಳೀಯರಿಂದ ಘಟನೆ ಕುರಿತು ಮಾಹಿತಿ ಪಡೆದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ನಿಜಕ್ಕೂ ಅಲ್ಲಿ ಭಯದ ವಾತಾವರಣವಿದೆ. ಜನರು ಕೂಡ ಅಸಹಾಯಕರಾಗಿದ್ದಾರೆ. ಭಯ ಬೀತಗೊಂಡಿದ್ದಾರೆ. ಸುಮಾರು 200 ರಿಂದ 300ಕ್ಕೂ ಹೆಚ್ಚು ಜನ ಹಿಂದು ಗಳ ಮನೆಗಳಿಗೆ ನುಗ್ಗಿ ಸುಖ ಸುಮ್ಮನೆ ಹಲ್ಲೆ ನಡೆಸಿದ್ದಾರೆ. ಇದು ನಿಜಕ್ಕೂ ಖಂಡನೀಯ ಎಂದರು.

ರಾಗಿಗುಡ್ಡದಲ್ಲಿ ಅಮಾಯಕರ ಮೇಲೆ ಹಲ್ಲೆ ನಡೆಸಿದ್ದಾರೆ. ಜನರು ಭಯ ಗೊಂಡಿದ್ದಾರೆ. ರಾಜ್ಯ ಸರ್ಕಾರ ಬದುಕಿದೆಯಾ ಎಂದು ಪ್ರಶ್ನಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಕೆಲ ಸಚಿವರು ರಾಜಕೀಯ ಪ್ರೇರಿತ ಹೇಳಿಕೆ ನೀಡುತ್ತಿದ್ದಾರೆ. ಇದು ನಿಜಕ್ಕೂ ಖಂಡನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಘಟನೆಯನ್ನು ನೋಡಿದರೆ ಇದು ಪೂರ್ವ ನಿಯೋಜಿತ ಕೃತ್ಯ ಎಂದಿನಿಸುತ್ತದೆ. ಇದು ನಿಜಕ್ಕೂ ಶಕ್ತಿ ಪ್ರದರ್ಶನವಲ್ಲದೆ ಬೇರೇನು ಅಲ್ಲ. ಪ್ರಚೋದನೆ ಇಲ್ಲದೆ ಈ ರೀತಿ ಏಕಾಏಕಿ ಹಲ್ಲೇ ನಡೆಸುವುದಕ್ಕೆ, ದೊಂಬಿ ನಡೆಸುವುದಕ್ಕೆ ಸಾಧ್ಯವಿಲ್ಲ. ಇವರಿಗೆ ಸರ್ಕಾರವೇ ಒಂದು ರೀತಿಯಲ್ಲಿ ಉತ್ತೇಜನ ನೀಡುತ್ತಿದೆ ಎಂಬ ಅನುಮಾನವ ವ್ಯಕ್ತವಾಗುತ್ತಿದೆ ಎಂದು ಆರೋಪಿಸಿದರು.

By admin

ನಿಮ್ಮದೊಂದು ಉತ್ತರ

error: Content is protected !!