ಶಿವಮೊಗ್ಗ, ಸೆ.29:
ಶಾಂತಿ ಪ್ರಕಾಶನ ಹೊರ ತಂದಿರುವ ಯೋಗೇಶ್ ಮಾಸ್ಟರ್ ಬರಹದ ನನ್ನ ಅರಿವಿನ ಪ್ರವಾದಿ ಪುಸ್ತಕವನ್ನು ಇಂದು ಶಿವಮೊಗ್ಗದ ಪತ್ರಿಕಾಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಮಂಜುನಾಥ್ ಬಿಡುಗಡೆಗೊಳಿಸಿದರು.
ಇಡೀ ವಿಶ್ವದಲ್ಲಿ ಎಲ್ಲಾ ಧರ್ಮಗಳನ್ನು ಪ್ರೀತಿಸುವ ಮನೋಸ್ಥಿತಿ ನಮ್ಮಲ್ಲಿ ಬೆಳೆಯಬೇಕಿದೆ. ಧರ್ಮಗಳು ಯಾವುದೇ ವೈಯಕ್ತಿಕ ವಿಚಾರನ್ನು ಹೇಳುವುದಿಲ್ಲ. ಬಾಂಧವ್ಯಗಳನ್ನು ಬೆಸೆಯುತ್ತವೆ. ಅಂತಹ ಕೃತಿಯನ್ನು ನಾಗೇಶ್ ಮಾಸ್ತರ್ ರಚಿಸಿದ್ದು, ಶಾಂತಿ ಪ್ರಕಾಶನದ ಈ ಪುಸ್ತಕ ಪ್ರವಾದಿ ಮಹಮ್ಮದ್‌ರ ಸದ್ಗುಣ, ಕ್ಷಮಾಗುಣ, ಎಕದೇವತ್ವದ ಪ್ರತಿಪಾದನೆಯನ್ನು ನೀಡಿದೆ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ ಅವರು ಮಾತನಾಡುತ್ತಾ, ಇಂದಿನ ದಿನಮಾನಗಳಲ್ಲಿ ಮನುಷ್ಯ ಮನುಷ್ಯನನ್ನೇ ನಂಬದ ಸ್ಥಿತಿಗೆ ಬಂದಿದೆ. ಮನುಷ್ಯನ ವಿಶಾಲ ಮನಸ್ಸು ಸತ್ತೇ ಹೋಗಿದೆ. ಇಂತಹ ಕಾಲದಲ್ಲಿ ಪ್ರವಾದಿಯ ಕುರಿತ ಈ ಲೇಖನ ನಮ್ಮ ಬಾಂಧವ್ಯವನ್ನು ಬೆಸೆಯುವ ಕೊಂಡಿಯಾಗುತ್ತದೆ ಎಂದರು.


ಸಮಾಜದ ತಪ್ಪು ಸರಿಪಡಿಸಲು ಪ್ರಯತ್ನಗಳು ನಡೆಯುತ್ತಿವೆ. ಬುದ್ದ, ಬಸವಣ್ಣ, ಆಚಾರ್ಯತ್ರಯರಂತಹ ಆಚಾರ ವಿಚಾರಗಳ ಪಾಲನೆಯಲ್ಲಿ ನಾವು ಸೋತಿರುವುದು ದುರಂತವೇ ಹೌದು ಎಂದರು.
ಪ್ರೆಸ್‌ಟ್ರಸ್ಟ್ ಅಧ್ಯಕ್ಷ ಮಂಜುನಾಥ್ ಮಾತನಾಡುತ್ತಾ, ಕುವೆಂಪುರವರ ವಿಶ್ವಮಾನವ ಸಂಬಂಧ ಅವರವರ ಇಷ್ಟದಂತೆ ಬದಲಾಗುತ್ತದೆ. ಇದು ವಿದ್ಯಾವಂತರಲ್ಲೇ ಹೆಚ್ಚಾಗಿರುವುದು ದುರಂತವೇ ಹೌದು. ಶಾಂತಿ ಪ್ರಕಾಶನ ಹೊರತಂದಿರುವ ಇಂತಹ ಕೃತಿಗಳು ಸದ್ಬಳಕೆಯ ವಸ್ತುವಾಗಲೀ ಎಲ್ಲರೂ ಎಲ್ಲಾ ಧರ್ಮವನ್ನು ಅರಿವು ಮನೋಸ್ಥಿತಿ ಬೆಳೆಯಲಿ ಎಂದರು.

By admin

ನಿಮ್ಮದೊಂದು ಉತ್ತರ

error: Content is protected !!