ಹೊಸನಗರ: ಹೊಸನಗರ ತಾಲ್ಲೂಕು ಮೂಡುಗೊಪ್ಪ ವ್ಯಾಪ್ತಿಯ ದುಬಾರ್‌ತಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಖಾಯಂ ಶಿಕ್ಷಕರಿಲ್ಲ ಈ ಬಗ್ಗೆ ಶಿಕ್ಷಣಾದಿಕಾರಿಗಳಿಗೆ ಸಾಕಷ್ಟು

ಬಾರೀ ಲಿಖಿತ ಹಾಗೂ ಮೌಖಿಕವಾಗಿ ತಿಳಿಸಿದರೂ ಎನೂ ಪ್ರಯೋಜನವಾಗಿಲ್ಲ ಎಂದು ಶಿಕ್ಷಣಾದಿಕಾರಿಗಳನ್ನು ಆರೋಪಿಸಿ ಆ ಶಾಲೆಯ ವಿದ್ಯಾರ್ಥಿಗಳು ಹಾಗೂ ಮಕ್ಕಳ ಪೋಷಕರು ಗ್ರಾಮ ಪಂಚಾಯಿತಿ ಸದಸ್ಯ ಕರುಣಾಕರ ಶೆಟ್ಟಿಯವರ ನೇತೃತ್ವದಲ್ಲಿ ಸುಮಾರು

೧೬ ಕಿ.ಮೀಟರ್ ಕಾಲ್ನಾಡಿಗೆಯಲ್ಲಿ ಹೊಸನಗರ ಶಿಕ್ಷಣಾಧಿಕಾರಿಗಳ ಕಛೇರಿಗೆ ಆಗಮಿಸಿ ಇಲಾಖೆಯ ಮುಂದೆ ಖಾಯಂ ಶಿಕ್ಷಕರು ನೀಡುವವರೆವಿಗೆ ಧರಣಿ ನಡೆಸುತ್ತಿದ್ದಾರೆ.


ಈ ಶಾಲೆಯಲ್ಲಿ ೧ರಿಂದ ೫ನೇ ತರಗತಿಯವರೆವಿಗೆ ೧೫ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಶಿಕ್ಷಕರಿಲ್ಲದೇ ಮಕ್ಕಳಿಗೆ ಸರಿಯಾದ ಶಿಕ್ಷಣ ಸಿಗುತ್ತಿಲ್ಲ ಎಂದು ಆರೋಪಿಸುತ್ತಿದ್ದು ಇಂದೇ ಖಾಯಂ ಶಿಕ್ಷಕರನ್ನು ನೀಡುವವರೆವಿಗೆ ನಾವು ಕಛೇರಿಯ ಮುಂದೆ ದರಣಿ ನಡೆಸುವುದಾಗಿ ತಿಳಿಸಿದ್ದಾರೆ

By admin

ನಿಮ್ಮದೊಂದು ಉತ್ತರ

error: Content is protected !!