ಮಲೆನಾಡು ಪ್ರದೇಶದಲ್ಲಿ ಉದ್ಯಮಶೀ ಲತೆ ಹಾಗೂ ನಾವೀನ್ಯತೆಗೆ ಹೊಸ ಉತ್ತೇಜನ ನೀಡುವ ದೃಷ್ಟಿಯಿಂದ ಸಾಗರ ರಸ್ತೆಯಲ್ಲಿರುವ ಪಿಇಎಸ್ ಕ್ಯಾಂಪಸ್‌ನಲ್ಲಿ ಸೆ.೯ರ ಬೆಳಿಗ್ಗೆ ೧೦ ಗಂಟೆಗೆ ಅನ್ವೇಷಣಾ ಇನ್ನೋವೇಶನ್ ಮತ್ತು ಎಂಟ್ರೆಪ್ರೆನ್ಯೂರಿ ಯಲ್ ಫೋರಂ ಉದ್ಘಾಟನೆಗೊಳ್ಳಲಿದೆ ಎಂದು ಪಿಇಎಸ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಹಾಗೂ ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.
ಅವರು ಇಂದು ರಾಯಲ್ ಆರ್ಕೆಡ್‌ನ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗದಲ್ಲಿ ಉದ್ಯಮಶೀಲ ತೆಯ ದಿಗಂತದಲ್ಲಿ ಭರವಸೆಯ ಬೆಳಕು ಪ್ರಕಾಶಮಾನವಾಗಿ ಬೆಳಗುತ್ತಿರುವ ಈ ಹೊತ್ತಿನಲ್ಲಿ ಅನ್ವೇಷಣವು ಅಭಿವೃದ್ಧಿ ಹೊಂ ದುತ್ತಿರುವ ಸ್ಟಾರ್ಟ್‌ಅಪ್ ಸಂಸ್ಕೃತಿಯನ್ನು ಬೆಳೆಸುವ ಕಡೆಗೆ ತನ್ನ ಆರಂಭಿಕ ಹೆಜ್ಜೆ ಇಡು ತ್ತಿದೆ. ಅನ್ವೇಷಣಾ ಫೋರಂ ಉದ್ಯಮಿಗಳ ಬೆಳವಣಿಗೆಯನ್ನು ಉತ್ತೇಜಿಸುವ ಮೂಲಕ ಅವರು ಆ ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡಲು ನೆರವಾಗಲು ಅಗತ್ಯ ಬೆಂಬಲ ನೀಡುತ್ತದೆ ಎಂದರು.
ಹೊಸ ಉದ್ಯೋಗ ಅವಕಾಶ ಸೃಷ್ಟಿಸು ವುದು. ಸಮಸ್ಯೆಗಳಿಗೆ ನವೀನ ಪರಿಹಾರ ಒದಗಿಸುವುದು ಮತ್ತು ತಂತ್ರಜ್ಞಾನದ ಲಾಭವನ್ನು ಎಲ್ಲರೂ ಪಡೆಯುವಂತೆ ಮಾಡುವ ಗುರಿಯನ್ನು ಈ ಉಪಕ್ರಮವು ಹೊಂದಿದೆ. ಅನ್ವೇಷಣಾ ಲಾಭದ ಉದ್ದೇಶವಿಲ್ಲದ ತಂತ್ರಜ್ಞಾನ, ವ್ಯಾಪಾರದ ಇನ್ಕ್ಯುಬೇಟರ್ ಸಂಸ್ಥೆಯಾಗಿದ್ದು, ಮಲೆ ನಾಡು ಪ್ರದೇಶದಲ್ಲಿ ವಾಣಿಜ್ಯೋದ್ಯ ಮವನ್ನು ಪೋಷಿಸಲು ನೆರವಾಗಲಿದೆ. ಹೊಸದಾಗಿ ಉದ್ಯಮ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುವವ ರಿಗೆ ಹೊಸ ಶಕ್ತಿ ಮತ್ತು ಭರವಸೆ ತುಂಬಲಿದೆ ಎಂದರು.
ಅನ್ವೇಷಣಾ ಇನ್ನೋವೇಶನ್ ಮತ್ತು ಎಂಟ್ರೆಪ್ರೆನ್ಯೂರಿಯಲ್ ಫೋರಂನ ಮ್ಯಾನೇಜಿಂಗ್ ಡೈರೆಕ್ಟರ್ ಸಿ.ಎಂ. ಪಾಟೀಲ್ ಮಾತನಾಡಿ, ಅನ್ವೇಷಣಾ ಸಂಸ್ಥೆಯು ಇನ್ಕ್ಯು ಬೇಷನ್ ಸೆಂಟರ್ ಆಗಿದ್ದು, ಸ್ಟಾರ್ಟ್‌ಅಪ್ ಗಳು ಅಭಿವೃದ್ಧಿ ಹೊಂದಲು ಸೂಕ್ತವಾದ ವಾತಾವರಣ ನೀಡುತ್ತದೆ ಹಾಗೂ ಸ್ಟಾರ್ಟ್ ಅಪ್‌ಗಳಿಗೆ ಮಾರುಕಟ್ಟೆಗಳಿಗೆ ಪ್ರವೇಶ, ಹಣಕಾಸಿನ ಅವಕಾಶಗಳು ಮತ್ತು ಅತ್ಯಾಧು ನಿಕ ಸೌಲಭ್ಯ ಒದಗಿಸಲಿದೆ ಎಂದ ಅವರು, ಇಂದಿನ ಆಧುನಿಕ ಯುಗದಲ್ಲಿ ಜ್ಞಾನವು ಶ್ರೇಷ್ಠ ಶಕ್ತಿಯಾಗಿದೆ ಮತ್ತು ಯಶಸ್ಸಿಗೆ ಅಗತ್ಯವಿರುವ ಕೌಶಲ್ಯ, ಜ್ಞಾನ ಮತ್ತು ಸಾಧನೆಗಳೊಂದಿಗೆ ಉದ್ಯಮಿಗಳನ್ನು ಸಬಲೀಕರಣಗೊಳಿಸಲು ಅನ್ವೇಷಣಾ ಬದ್ಧವಾಗಿದೆ ಎಂದರು.
ಅನ್ವೇಷಣವು ಹೂಡಿಕೆದಾರರು, ಉದ್ದಿಮೆ ಬಂಡವಾಳಗಾರರು ಮತ್ತು ಧನ ಸಹಾಯ ಸಂಸ್ಥೆಗಳ ವೈವಿಧ್ಯಮಯ ನೆಟ್‌ವರ್ಕ್‌ನೊಂದಿಗೆ ಸಂಪರ್ಕವನ್ನು ಸುಲಭಗೊಳಿಸುತ್ತದೆ ಮತ್ತು ಸ್ಟಾರ್ಟ್ ಅಪ್‌ಗಳಿಗೆ ಅಗತ್ಯವಿರುವ ಹಣಕಾಸಿನ ಬೆಂಬಲ ಪಡೆಯಲು ಸಹಾಯ ಮಾಡುತ್ತದೆ. ಉದ್ಯಮಿಗಳು, (ಹೂಡಿಕೆದಾರರು, ನಾವೀನ್ಯತೆ ಮತ್ತು ಉದ್ಯಮಶೀಲತೆಯ ಶಕ್ತಿಯಲ್ಲಿ ನಂಬಿಕೆ ಇರುವ ಎಲ್ಲರೂ ಈ ಮಿಷನ್‌ಗೆ ಸೇರಲು ಆಹ್ವಾನವಿದೆ. ಹೆಚ್ಚಿನ ಮಾಹಿತಿಗಾಗಿ ತಿತಿತಿ.ಚಿಟಿvesಚಿಟಿಚಿ.ಛಿo.iಟಿ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಎಂದರು.
ಔಪಚಾರಿಕವಾಗಿ ನಡೆಯುವ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಬೆಳಗಾವಿಯ ವಿಟಿಯು ಕುಲಪತಿ ಡಾ. ವಿದ್ಯಾಶಂಕರ್, ರಾಜ್ಯ ಸರ್ಕಾರದ ಮಿಷನ್ ಗ್ರೂಪ್ ಆನ್ ಸ್ಟಾರ್ಟ್‌ಅಪ್‌ನ ಅಧ್ಯಕ್ಷ ಪ್ರಶಾಂತ್‌ಪ್ರಕಾಶ್, ಪಿಇಎಸ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಬಿ.ವೈ. ರಾಘ ವೇಂದ್ರ, ಖಜಾಂಚಿ, ಬಿ.ವೈ. ವಿಜಯೇಂದ್ರ ಇನ್ನಿತರರು ಭಾಗವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಫೋರಂನ ಡೈರೆಕ್ಟರ್ ಬಿ.ಆರ್. ಸುಭಾಶ್, ಪಿಇಎಸ್ ಟ್ರಸ್ಟ್‌ನ ಆಡಳಿತ ಮುಖ್ಯ ಸಂಯೋಜಕ ಡಾ.ಆರ್.ನಾಗರಾಜ್ ಉಪಸ್ಥಿತರಿದ್ದರು.