ಹೊಸನಗರ: ಹೊಸನಗರದ ಹಳೇ ಸಾಗರ ರಸ್ತೆಯಲ್ಲಿರುವ ಶ್ರೀರಾಘವೇಂದ್ರ ಸ್ವಾಮಿಗಳ ಬೃಂದಾವನದಲ್ಲಿ ಸೆಪ್ಟಂಬರ್ ೧ನೇ ಶುಕ್ರವಾರ ರಾಘವೇಂದ್ರ ಸ್ವಾಮಿಗಳವರ ೩೫೨ನೇ ಆರಾಧನಾ ಮಹೋತ್ಸವವನ್ನು ಅದ್ದೂರಿ ನಡೆಯಿತ್ತು.


ಶುಕ್ರವಾರ ಬೆಳಿಗ್ಗೆ ೬ಗಂಟೆಗೆ ಪೂಜಾ ಕಾರ್ಯಕ್ರಮಗಳು ಪ್ರಾರಂಭವಾಗಿದ್ದು ಅಷ್ಟೋತ್ತರ, ಪಂಚಾಮೃತಾಭಿಶೇಕ, ಅಲಂಕಾರ ಸೇವೆ, ಹಸ್ತೋದಕ, ಮಧ್ಯಾಹ್ನ ೧೨ಗಂಟೆಗೆ ಮಹಾ ಮಂಗಳಾರತಿ, ಮಧ್ಯಾಹ್ನ ೧ಗಂಟೆಗೆ ಸಾಮೂಹಿಕ ಅನ್ನ ಸಂತರ್ಪಣೆ, ಕಾರ್ಯಕ್ರಮವು ನಡೆಸಲಾಯಿತ್ತು.
ಪಾರ್ವತಿ ಗಣಪತಿ ಮಹೇಶ್ವರ ಸಮಿತಿಯ ಅಧ್ಯಕ್ಷರಾದ ಕನಕರಾಜುರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.


ರಾತ್ರಿ ೭ಗಂಟೆಗೆ ಪಲ್ಲಕ್ಕಿ ಉತ್ಸವ ನಂತರ ಮಂಗಳಾರತಿ ರಾತ್ರಿ ೮ಗಂಟೆಗೆ ತೀರ್ಥ ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ನಡೆಯಿತು.
ಶ್ರೀರಾಘವೇಂದ್ರ ಸ್ವಾಮಿಗಳ ಭಕ್ತಾರು ಹೊಸನಗರದ ಸಾರ್ವಜನಿಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಆರಾಧನಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಟ್ಟರು.


ದೇವಸ್ಥಾನದ ಆವರಣದಲ್ಲಿ ಹೂವಿನ ಅಲಂಕಾರ ಮಾಡಲಾಗಿದ್ದು ರಾಘವೇಂದ್ರ ಸ್ವಾಮಿಗಳಿಗೆ ಪ್ರಿಯವಾದ ತುಳಿಸಿ ಹಾರವನ್ನು ದೇವರ ಮೂರ್ತಿಗೆ ಹಾಕಲಾಗಿತ್ತು.


ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕಾರಣರಾದ ದೇವರ ಭಕ್ತಾರುಗಳಿಗೆ ಹಾಗೂ ಸಾರ್ವಜನಿಕರಿಗೆ ಬೃಂದಾವನ ಸಮಿತಿಯ ಅಧ್ಯಕ್ಷರಾದ ವಿಜೇಂದ್ರ ಶೇಟ್‌ರವರು ಅಭಿನಂದಿಸಿದರು.

ರಾಘವೇಂದ್ರ ಸ್ವಾಮಿಗಳವರ ಬೃಂದಾವನ ಸಮಿತಿಯ ಗೌರವಾಧ್ಯಕ್ಷರಾದ ಉಮೇಶ್ ಕಂಚುಗಾರ್, ಉಪಾಧ್ಯಕ್ಷರಾದ ಚಂದ್ರಶೇಖರ, ಕಾರ್ಯದರ್ಶಿ ರಾಧಕೃಷ್ಣ, ಸಹ ಕಾರ್ಯದರ್ಶಿ ರಂಗನಾಥ್, ಖಜಾಂಚಿಗಳಾದ ವಾಸುದೇವ ಪಿ, ನಿರ್ದೆಶಕರುಗಳಾದ ಜಿ. ವಾದಿರಾಜ್ ಭಟ್, ಹಿರಿಯರಾದ ಎನ್.ಆರ್. ದೇವಾನಚಿದ್, ಬಾಬುರಾವ್, ನವಶಕ್ತಿ ರಮೆಶ್, ಸದಾಶಿವ ಶ್ರೇಷ್ಠಿ, ಸುದೇಶ್ ಕಾಮತ್, ರವಿ ಶೇಟ್, ಗಣೇಶ ಶೇಟ್, ಹರೀಶ ಕೆ.ಆರ್, ಧನುಂಜಯ ಮಂಡಾಣಿ, ಪ್ರದೀಪ್‌ಕುಮಾರ್, ಹೆಚ್.ಎಂ ನಿತ್ಯಾನಂದ, ನಾಯಕ್, ಶ್ರೀಧರ ಮಂಡಾಣಿ, ಪ್ರದಾನ ಅರ್ಚಕರಾದ ಟಿ.ಆರ್ ಪ್ರಸನ್ನಭಟ್, ನಾಡ ಹಬ್ಬಗಳ ಸಮಿತಿಯ ಸದಸ್ಯರಾದ ಶ್ರೀಧರ ಉಡುಪ, ಶ್ರೀನಿವಾಸ್ ಕಾಮತ್, ರಾಜಮೂರ್ತಿ ಇನ್ನೂ ಮುಂತಾದವರು ಶ್ರೀ ರಾಗೌಏಂದ್ರ ಸ್ವಾಮಿಗಳವರ ಆರಾದನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!