ಶಿವಮೊಗ್ಗ, ಆ.೨೪: ನ್ಯಾಯಮೂರ್ತಿ ಹೆಚ್.ಎನ್ ನಾಗಮೋಹನ್ ದಾಸ್ ರವರ ಬಗ್ಗೆ ಬಿಜೆಪಿ ಮುಖಂಡ ಸಿ.ಟಿ. ರವಿಯವರು ಅವಹೇಳಕಾರಿಯಾಗಿ ಮಾತನಾಡಿರುವುದು ಖಂಡನೀಯ ಎಂದು ವಕೀಲರು ಮತ್ತು ಪೀಪಲ್ಸ್ ಲಾಯರ್ಸ್ ಗಿಲ್ಡ್ಕೆ.ಪಿ.ಶ್ರೀಪಾಲ ಹೇಳಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕರ್ನಾಟಕ ಉಚ್ಚನ್ಯಾಯಾಲಯದ ನ್ಯಾಯಾಮೂರ್ತಿಗಳಾಗಿ ಸೇವೆ ಸಲ್ಲಿಸಿ,

ನಂತರ ಭಾರತೀಯ ಸಂವಿಧಾನ ಕುರಿತು ಅವರು ಬರೆದ ಸಂವಿಧಾನ ಓದು ಪುಸ್ತಕ ದೇಶದ ಹಲವು ಭಾಷೆಗಳಿಗೆ ತರ್ಜಿಮೆ ಆಗುವುದರೊಂದಿಗೆ ಕೋಟ್ಯಾಂತರ ಜನರಿಗೆ ಭಾರತೀಯ ಸಂವಿಧಾನದ ಅರಿವು ಮೂಡಿಸುವ ಮೂಲಕ ಸಂವಿಧಾನದ ಆಶಯಗಳನ್ನು ಎತ್ತಿಹಿಡಿದ ಇವರು ದೇಶದಲ್ಲಿಯೆ ಅತಿ ಹೆಚ್ಚು ಅಯೋಗಗಳಿಗೆ ನೇಮಕವಾದ ನ್ಯಾಯಮೂರ್ತಿ

ಎಂಬುವ ಹೆಗ್ಗಳಿಕೆ ಹೊಂದಿದವರು.
ರಾಜ್ಯ ಸರ್ಕಾರ ಸನ್ಮಾನ್ಯ ನ್ಯಾಯಾಮೂರ್ತಿಗಳನ್ನು ಇತ್ತಿಚಿಗೆ ಕಳೆದ ಸರ್ಕಾರದಲ್ಲಿ ನಡೆದ ೪೦% ಹಗರದ ತನಿಖಾ ಆಯೋಗದ ಮುಖ್ಯಸ್ಥರನ್ನಾಗಿ ನೇಮಿಸಿದ್ದು ಇದನ್ನು ಕುರಿತು ಬಿಜೆಪಿ ಮುಖಂಡ ಸಿ ಟಿ ರವಿಯವರು ನ್ಯಾಯಾಮೂರ್ತಿ ನಾಗಮೋಹನ್ ದಾಸ್ ಕಾಂಗ್ರೆಸ್ ಟೂಲ್ ಕಿಟ್, ಇವರು ಸಿದ್ದರಾಮಯ್ಯ ರವರ ಅಗತ್ಯಕ್ಕೆ ತಕ್ಕಂತೆ ವರದಿ ನೀಡುತ್ತಾತೆ, ಇವರಿಂದ ನಿಷ್ಪಕ್ಷಪಾತ ವರದಿ ಸಿಗದು ಇವರು ಕಾಂಗ್ರೆಸ್ ಮರ್ಜಿಗೆ ತಕ್ಕಂತೆ ವರದಿ ನೀಡಿಕೊಂಡು ಬಂದಿದ್ದಾರೆ, ಎಂದು ಈ ರೀತಿ ನ್ಯಾಯಾಮೂರ್ತಿಗಳ ಗೌರವಕ್ಕೆ ದಕ್ಕೆ ಬರುವ ರೀತಿ ಹೇಳಿಕೆ ನೀಡಿದ್ದು ಇದು ಖಂಡನೀಯವಾಗಿದೆ.

ಸಿ.ಟಿ.ರವಿಯವರು ಈ ತರದ ಅವಿವೇಕತನದ ಹೇಳಿಕೆಗಳನ್ನು ನಿಲ್ಲಿಸಬೇಕು ಮತ್ತು ಬೇ ಷರತ್ತಾಗಿ ನ್ಯಾಯಾಮೂರ್ತಿಗಳ ಕ್ಷಮೆಯಾಚಿಸಬೇಕು.

ಒಂದೊಮ್ಮೆ ಸಿ.ಟಿ.ರವಿಯವರು ಕ್ಷಮೆಯಾಚಿಸದಿದ್ದಲ್ಲಿ ಅವರ ವಿರುದ್ದ ಕಾನೂನಿನ ಕ್ರಮ ಜರುಗಿಸಲಾಗುವುದು ಎಂದು ಈ ಮೂಲಕ ಎಚ್ಚರಿಸುತ್ತಿದ್ದೇವೆ ಎಂದು ಶ್ರೀಪಾಲ್ ಕಿಡಿಕಾರಿದ್ದಾರೆ.