ಶಿವಮೊಗ್ಗ: ಇಡೀ ಭಾರತ ಕಾತರದಿಂದ ಕಾಯುತ್ತಿದ್ದ ಇಸ್ರೋದ ಮಹತ್ವಾಕಾಂಕ್ಷೆಯ ಚಂದ್ರಯಾನ 3 ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ನೀರಿಕ್ಷೆಯಂತೆ ಯಶಸ್ವಿಯಾಗಿ ಸುರಕ್ಷಿತವಾಗಿ ಇಳಿಸಿರುವುದು ಭಾರತೀಯರಿಗೆ ಹೆಮ್ಮೆಯ ಸಂಗತಿ.
ಐತಿಹಾಸಿಕ ದಾಖಲೆ ನಿರ್ಮಿಸಿರುವ ಇಸ್ರೋ ತಂಡಕ್ಕೆ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಅಭಿನಂದನೆ ಸಲ್ಲಿಸಿದೆ.
ಚಂದ್ರಯಾನ 3 ಯಶಸ್ವಿಯಾಗಿಸುವ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ತರ ಮೈಲುಗಲ್ಲಾಗಿದೆ. ಇಸ್ರೋ ತಂಡದ ಪ್ರತಿಯೊಬ್ಬರಿಗೂ ಭಾರತೀಯರ ಪರವಾಗಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಶುಭಾಶಯ ತಿಳಿಸುತ್ತದೆ. ಚಂದ್ರಯಾನ 3 ಅಧ್ಯಯನ ದೃಷ್ಠಿಯಿಂದ ತುಂಬಾ ಅನುಕೂಲವಾಗಲಿದೆ.
ಚಂದ್ರನ ಮೇಲ್ಮೈ ಅಧ್ಯಯನದ ದೃಷ್ಠಿಯಿಂದ ಚಂದ್ರಯಾನ 3 ಯೋಜನೆಯು ಮಹತ್ತರ ಪಾತ್ರ ವಹಿಸಲಿದ್ದು, ಮುಂದಿನ ದಿನಗಳಲ್ಲಿ ಕೈಗೊಳ್ಳಲಿರುವ ಮಾನವ ರಹಿತ ಹಾರಾಟ ಪರೀಕ್ಷೆಯು ಯಶಸ್ವಿ ಆಗಬೇಕೆಂಬುದು ಎಲ್ಲರ ಹಾರೈಕೆ.
ಗಗನಯಾನ ಯೋಜನೆಗೂ ಭಾರತೀಯರ ಪ್ರಾರ್ಥನೆ ಇರಲಿದೆ. ಭಾರತ ದೇಶ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗೆ ಶುಭಾಶಯ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.