ಶಿವಮೊಗ್ಗ, ಆ.೧೯:
ಅರ್ಚಕವೃಂದ, ಸಂಸ್ಕೃತ ಭಾರತಿ, ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಸಂಸ್ಕೃತೋತ್ಸವ ಪ್ರಯುಕ್ತ ಆ.೨೨ ರಿಂದ ೩೧ರ ವರೆಗೆ ಹತ್ತು ದಿನಗಳ ಕಾಲ ಪ್ರತಿ ದಿನ ಸಂಜೆ ೬.೩೦ ರಿಂದ ೮ ಗಂಟೆಯವರೆಗೆ ರವೀಂದ್ರ ನಗರದಲ್ಲಿರುವ ಶ್ರೀ ಪ್ರಸನ್ನ ಬಲಮುರಿ ಗಣಪತಿ ದೇವಸ್ಥಾನದಲ್ಲಿ
ವಿದ್ವಾಂಸರಿಂದ ದಶೋಪನಿಷತ್ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊ ಳ್ಳಲಾಗಿದೆ ಎಂದು ಸಂಸ್ಕೃತ ಭಾರತಿ ಜಿಲ್ಲಾ ಸಂಯೋಜಕ ಹಾಗೂ ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯ ಅಧ್ಯಕ್ಷ ಟಿ.ವಿ.ನರಸಿಂಹ ಮೂರ್ತಿ ತಿಳಿಸಿದರು.
ಅವರು ಇಂದು ಮಥುರಾ ಪ್ಯಾರಡೈಸ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸನಾತನ ಹಿಂದೂ ಧರ್ಮವು ವೇದಗಳನ್ನು ಧರ್ಮಗ್ರಂಥವೆಂದು ಪರಿಗಣಿಸುತ್ತದೆ. ವೇದಗಳು ಅಪೌರುಷೇಯ, ವೇದಗಳನ್ನು ವೇದವ್ಯಾಸರು ನಾಲ್ಕು ವಿಭಾಗವಾಗಿ ಕೊಟ್ಟಿದ್ದಾರೆ. ಇಂತಹ ವೇದಗಳ ಕೊನೆಯ ಭಾಗವೇ ಉಪನಿಷತ್ತು ಎಂದರು.
ಉಪನಿಷತ್ತುಗಳಲ್ಲಿ ಮುಖ್ಯವಾಗಿ ಭಗವಂತನ ಸ್ವರೂಪದ ವಿಚಾರ, ಕರ್ಮಗಳು, ಧ್ಯಾನ ಇವುಗಳಿಗೆ ಒಂದಕ್ಕೊಂದು ಇರುವ ಸಂಬಂಧವನ್ನು ಇವೆರಡಕ್ಕೂ ಭಗವಂತನನ್ನು ತಿಳಿಸುವ ಜ್ಞಾನಕ್ಕೂ ಇರುವ ಸಂಬಂಧ ವನ್ನು ತಿಳಿಸುತ್ತದೆ. ಉಪನಿಷತ್ತು ಎಂದರೆ ರಹಸ್ಯವೆಂದು ಅರ್ಥ, ಮನುಷ್ಯನು ತಿಳಿದುಕೊಳ್ಳಲೇ ಬೇಕಾಗಿರುವ ರಹಸ್ಯವೆಂದರೆ ಅದು ಪರಮಾತ್ಮ ಈ ರಹಸ್ಯವನ್ನು ಅರಿತುಕೊಂಡರೆ ಮನುಷ್ಯ ಜನ್ಮ ಸಾರ್ಥಕ ಆದ್ದರಿಂದ ಉಪನಿಷತ್ತುಗಳಿಗೆ ರಹಸ್ಯವೆಂದು ಹೆಸರಿದೆ ಎಂದರು.
ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅ.ನಾ.ವಿಜಯೇಂದ್ರ ರಾವ್ ಮಾತನಾಡಿ, ಸಂಸ್ಥೆಯಿಂದ ಆ.೩ರಿಂದ ಸೆ. ೩ರವರೆಗೆ ನಗರದಲ್ಲಿ ಸಂಸ್ಕೃತ ಮಾಸೋತ್ಸವ ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ದಶಮಾನೋತ್ಸವ – ಕ್ರೀಡಾ- ಉಪನ್ಯಾಸ ವನ್ನು ನಗರದ ವಿವಿಧೆಡೆ ನಡೆಯುತ್ತಿದೆ ಎಂದರು.
ಪತ್ರಿಕಾಗೋಷ್ಥಿಯಲ್ಲಿ ಸಂಸ್ಕೃತ ಭಾರತಿ ಜಿಲ್ಲಾ ಅಧ್ಯಕ್ಷ ಎನ್.ವಿ.ಶಂಕರನಾರಾಯಣ, ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ಉಪಾಧ್ಯಕ್ಷ ಡಾ.ವಿಘ್ನೇಶ್ ಉಪಸ್ಥಿತರಿದ್ದರು.
ಆ.23 : ಐತೇರಿಯೋಪನಿಷತ್ ಉಪನ್ಯಾಸಕಾರರು: ವಿದ್ವಾನ್ ಮಹೀಪತಿ ಆ.೨೪: ಮಾಂಡಕ್ಯೋಪನಿಶತ್, ಉಪನ್ಯಾಸಕಾರರು: ವಿದ್ವಾನ್ ಹಂದಲಸು ರಾಘವೇಂದ್ರ ಭಟ್ಟ ಆ.೨೫: ಈಶಾವಾಸ್ಯ, ಉಪನ್ಯಾಸಕಾರರು: ವಿದ್ವಾನ್ ಹಂದಲಸು ವಾಸುದೇವ ಭಟ್ಟ ಆ.೨೬: ಕೇನೋಪನಿಷತ್, ಉಪನ್ಯಾಸಕರು ವಿದ್ವಾನ್ ಮಧುಸೂದನ ಆಡಿಗರು ಆ. ೨೭: ಪ್ರಶ್ನೋಪನಿಷತ್, ಉಪನ್ಯಾಸಕರು: ವಿದ್ವಾನ್ ಮಧುಸೂದನ ಆಡಿಗರು ಆ.೨೮: ಕಠೋಪನಿಷತ್, ಉಪನ್ಯಾಸಕರು: ವಿದ್ವಾನ್ ಹೆಚ್.ಆರ್.ವಾಸುದೇವ ಆ: ೨೯: ತೈತ್ತೀರಯಾ, ಉಪನ್ಯಾಸಕರು: ವಿನಾಯಕ ಎಮ್.ಎಸ್. ಆ.೩೦: ಛಾಂದೋಗ್ಯ, ಉಪನ್ಯಾಸಕರು: ವಿದ್ವಾನ್ ಅಚ್ಯುತ ಅವದಾನಿ ಆ.೩೧: ಮುಂಡಕೋಪನಿಷತ್, ಉಪನ್ಯಾಸಕರು: ವಿದ್ವಾನ್ ಡಾ.ಸನತ್ಕುಮಾರ: