ಹೊಳೆಹೊನ್ನೂರು : ಸಮೀಪದ ಆನವೇರಿಯ ಗ್ರಾಪಂಗೆ ಶುಕ್ರವಾರ ಅಧ್ಯಕ್ಷರಾಗಿ ಜಿ.ಹೆಚ್ ನಟರಾಜ್ ಗೌಡ, ಉಪಾಧ್ಯಕ್ಷರಾಗಿ ಸುಜಾತ ಅವಿರೋದ್ಧವಾಗಿ ಆಯ್ಕೆಯಾದರು.
ಗ್ರಾಮಾಭಿವೃದ್ದಿ ಅಧಿಕಾರಿ ಸೈಯದ್ ಸೀಮಾ, ನಂದೀಶ್, ಶ್ರೀನಿವಾಸ್ ಆರ್, ಮುರಾರಿ, ತಿಪ್ಪೇಶ್, ತೇಜಾವತಿ, ಮಮತ ರೇಣುಕಮ್ಮ, ಲಲಿತಮ್ಮ, ಶೋಭ. ಇತರರಿದ್ದರು. ಚುನಾವಣಾಧಿಕಾರಿಯಾಗಿ ಭದ್ರಾವತಿ ತಾಪಂ ಸಾಹಾಯಕ ನಿರ್ದೇಶಕ ಚೇತನ್ ಕರ್ತವ್ಯ ನಿರ್ವಹಿಸಿದರು.
ಜೆ.ಹೆಚ್ ನಟರಾಜಗೌಡ ಆನವೇರಿ ಗ್ರಾಪಂಗೆ ಮೂರನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಾರೆ. ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಸುಜಾತ ಎರಡು ಬಾರಿ ಅಧ್ಯಕ್ಷರಾಗಿ ಆಢಳಿತ ನಡೆಸಿ ಈ ಬಾರಿ ಮತ್ತೊಮ್ಮೆ ಉಪಾಧ್ಯಕ್ಷೆಯಾಗಿ ಅವಿರೋದ್ಧವಾಗಿ ಆಯ್ಕೆಯಾಗಿದ್ದಾರೆ.
ಆನವೇರಿಯ ಗ್ರಾಪಂ ಮುಂಭಾಗ ಅಕ್ಷರ ಸಹ ಹಬ್ಬದ ವಾತವರಣ ನಿರ್ಮಾಣವಾಗಿತ್ತು. ಗ್ರಾಪಂ ಸಂಪರ್ಕಿಸುವ ರಸ್ತೆಯುದ್ದಕ್ಕೂ ಬಾಳೆ ಕಂಬಗಳನ್ನು ಕಟ್ಟಲಾಗಿತ್ತು.
ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಆಯ್ಕೆ ಪ್ರಕ್ರಿಯೇ ಮುಗಿಯುತ್ತಿದಂತೆ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. 25 ಕ್ಕೂ ಹೆಚ್ಚು ಬಾಣಸಿಗರು ಸಿಹಿ ಅಡುಗೆ ಸಿದ್ದಪಡಿಸಿದರು. ಮದ್ಯಾಹ್ನದ ವೇಳೆಗೆ ಗ್ರಾಮಸ್ಥರಿಗೆ ಹೊಳಿಗೆ ಊಟ ಆಯೋಜಿಸಲಾಗಿತ್ತು. ಊಟಕ್ಕೆಂದು ಹೊಳಿಗೆ ತುಪ್ಪ, ರೊಟ್ಟಿ ಪಲ್ಯಾ, ಬೊಂಡಾ, ಚಿತ್ರನ್ನ, ಅನ್ನ ಸಂಬಾರ್, ಮೊಸರನ್ನ, ಮಜ್ಜಿಗೆ, ಬೀಡಾ ನೀಡಲಾಯಿತ್ತು. ಊಟೋಪಚಾರದ ವ್ಯವಸ್ಥೆಯನ್ನು ಆಯೋಜಕರು ಅಚ್ಚುಕಟ್ಟಾಗಿ ಆಯೋಜಿಸಿದು ಪ್ರಶಂಸೆಗೆ ಪಾತ್ರವಾಯಿತ್ತು.