ಶಿವಮೊಗ್ಗ, ಆ.08:
ಶಿವಮೊಗ್ಗ ಗ್ರಾಮಾಂತರ ಭಾಗದ ಹಳ್ಳಿಯೊಂದರಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರನ್ನು ಚಿರತೆ ಕಚ್ಚಿ ಕಚ್ಚಿ ತಿಂದು ಸಾಯಿಸಿರುವ ಘಟನೆ ಇಡೀ ಗ್ರಾಮಾಂತರ ಭಾಗದಲ್ಲಿ ಭಯವನ್ನು ಹುಟ್ಟಿಸಿದೆ.
ಹೊಲದಲ್ಲಿ ಕಳೆ ತೆಗೆಯುವ ವೇಳೆ‌ ಮಹಿಳೆಯ ಮೇಲೆ ಚಿರತೆ ದಾಳಿ ನಡೆಸಿ. ಅವರನ್ನ ಎಳೆದುಕೊಂಡು ಹೋಗಿ ಅರ್ಧಂಬರ್ಧ ತಿಂದಿರುವ ಬಗ್ಗೆ ಇಡೀ ಆ ಭಾಗದ ರೈತರು ಆತಂಕದಲ್ಲಿ ಮುಳುಗಿದ್ದಾರೆ.


ಸಮೀಪದ ಬಿಕ್ಕೋನ ಹಳ್ಳಿಯ ಹೊಲದಲ್ಲಿ ಯಶೋದಮ್ಮ ಎಂಬ 42 ವರ್ಷದ ಮಹಿಳೆ ಹೊಲದಲ್ಲಿ ಕಳೆ ತೆಗೆಯುವಾಗ ದಾಳಿ ನಡೆಸಿದೆ. ಚಿರತೆಯ ದಾಳಿಗೆ ಯಶೋದಮ್ಮ ಬಲಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಮೊದಲ ಬಾರಿಗೆ ಚಿರತೆಯ ದಾಳಿಗೆ ಮನುಷ್ಯ ಇಲ್ಲಿ ಬಲಿಯಾಗಿದ್ದಾರೆ. ಇದುವರೆಗೂ ಯಾವ ಬಲಿ ನಡೆದಿರಲಿಲ್ಲ. ಮೊದಲ ಬಾರಿಗೆ ಚಿರತೆ ದಾಳಿ ನಡೆದಿದೆ. ಶಿವಮೊಗ್ಗದ ಬಿಕ್ಕೋನ ಹಳ್ಳಿ ಸರ್ವೆ ನಂಬರ್ 9 ರಲ್ಲಿ ಈ ದಾಳಿ ನಡೆದಿದೆ.
ಅರಣ್ಯ ಇಲಾಖೆಯ ಅಧಿಕಾರಿಗಳ ಮಾಹಿತಿಯ ಪ್ರಕಾರ ಈ ದಾಳಿ ಕಾಡು ಪ್ರಾಣಿಗಳ ದಾಳಿ ನಡೆದಿರುವುದು ಖಚಿತವಾಗಿದ್ದು ಮೇಲ್ನೋಟಕ್ಕೆ ಚಿರತೆಯ ದಾಳಿ ಎನಿಸುತ್ತಿದೆ. ಕುತ್ತಿಗೆ ಭಾಗವೂ ಗಾಗೊಂಡಿದ್ದು ಹಿಂಭಾಗದಲ್ಲಿ ತೀವ್ರದರವಾದ ದಾಳಿಗೆ ಒಳಗಾಗಿದೆ.

ಮರಣೋತ್ತರ ಪರೀಕ್ಷೆಯ ನಂತರ ಈ ದಾಳಿಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯುವುದಾಗಿ ಹೇಳಿದ್ದಾರೆ. ಒಟ್ಟಾರೆ ಜನ ಆತಂಕದಲ್ಲಿ ದಿನದೂಡುವ ಪರಿಸ್ಥಿತಿಯಲ್ಲಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!