
ಹೊಳಲೂರಿನ ಕೆನರಾ ತರಬೇತಿ ಕೇಂದ್ರದಿಂದ ಸ್ವಲ್ಪ ಮುಂದೆ ಹೊನ್ನಾಳಿ ರಸ್ತೆ ಬದಿ ಸುಮಾರು 65 ವರ್ಷ ವಯಸ್ಸಿನ ಅಪರಿಚಿತ ಮಹಿಳೆಗೆ ಲಾರಿಯೊಂದು ಅತಿ ವೇಗ ಮತ್ತು ಅಜಾಗರೂಕತೆಯಿಂದ ಡಿಕ್ಕಿ ಹೊಡೆದ ಕಾರಣ ಬಲವಾದ ಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ.

ಮೃತಳ ವಿಳಾಸ ತಿಳಿದಿರುವುದಿಲ್ಲ. ಸುಮಾರು 5.4 ಅಡಿ ಎತ್ತರ, ತೆಳುವಾದ ಮೈಕಟ್ಟು, ದುಂಡು ಮುಖ, ಎಣ್ಣೆಕಪ್ಪು ಮೈಬಣ್ಣ ಹೊಂದಿದ್ದು ತಲೆಯಲ್ಲಿ 5 ಇಂಚು ಉದ್ದದ ಬಿಳಿ ಮಿಶ್ರಿತ ಕಪ್ಪು ಕೂದಲಿರುತ್ತದೆ. ಬಂಗಾರದ ಬಣ್ಣದ ಡಿಸೈನ್ ಇರುವ ಹಸಿರು ಬಣ್ಣದ ಸೀರೆ, ಕಪ್ಪು

ಬಣ್ಣದ ಜಾಕೀಟು, ತಿಳಿ ಹಸಿರು ಬಣ್ಣದ ಒಳಲಂಗ, ಕಂದು ಬಣ್ಣದ ತುಂಬು ತೋಳಿನ ಸ್ವೆಟರ್ ಧರಿಸಿರುತ್ತಾರೆ. ಮೃತಳ ವಾರಸುದಾರರು ಯಾರಾದರೂ
ಇದ್ದಲ್ಲಿ ಸಿಪಿಐ ಗ್ರಾಮಾಂತರ


ಪೊಲೀಸ್ ಠಾಣೆ ಶಿವಮೊಗ್ಗ ಅಥವಾ ಪೊಲೀಸ್ ಕಂಟ್ರೋಲ್ ರೂಂ ಶಿವಮೊಗ್ಗ ದೂ.ಸಂ: 100, 08182-261418, 261410, 261410, 261422, 9480803331, 9480803350 ನ್ನು ಸಂಪರ್ಕಿಸಬಹುದೆಂದು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.