ರಾಕೇಶ್ ಸೋಮಿನಕೊಪ್ಪ

ಶಿವಮೊಗ್ಗ, ಆ.೦೩:
ಶಿವಮೊಗ್ಗ ನಗರದಲ್ಲಿ ಕಳೆದ ಒಂದು ವಾರದ ಹಿಂದೆ ಹಾಫ್ ಹೆಲ್ಮೆಟ್ ಹಾಕಿಕೊಂಡು ವಾಹನ ಚಲಾಯಿಸುತ್ತಿದ್ದ ವಾಹನ ಸವಾರರಿಗೆ ಸಂಚಾರಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಸಂತೋಷ್ ಕುಮಾರ್ ನೇತೃತ್ವದ ಸಿಬ್ಬಂದಿಗಳ ತಂಡ ನಗರದ ವಿವಿಧೆಡೆ ದಿಢೀರ್ ಕಾರ್ಯಚರಣೆ ನಡೆಸಿ ಅರ್ಧ ಹೆಲ್ಮೆಟ್‌ಗಳನ್ನು ವಶಕ್ಕೆ ಪಡೆಯುವುದರ ಮೂಲಕ ಸವಾರರಿಗೆ ಫುಲ್ ಶಾಕ್ ನೀಡಿದ್ದರು.


ಪೊಲೀಸ್ ಇಲಾಖೆಯಿಂದ ಕಡ್ಡಾ ಯವಾಗಿ ಬೈಕ್ ಸವಾರರು ಐಎಸ್‌ಐ ಮಾರ್ಕ್‌ನ ಗುಣಮಟ್ಟದ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸುತ್ತಿ ದ್ದಂತೆಯೇ ನಗರದಲ್ಲಿ ಹೆಲ್ಮೆಟ್ ಖರೀ ದಿಗೆ ಗ್ರಾಹಕರು ಮುಗಿಬಿದ್ದಿರುವ ಕಾರಣದಿಂದ ಹೆಲ್ಮೆಟ್‌ಗಳಿಗೆ ಬೇಡಿಕೆ ಹೆಚ್ಚಿದೆ.


ಪೊಲೀಸರು ಕಳೆದೊಂದು ವಾರ ದಿಂದ ಬೈಕ್ ಸವಾರರಲ್ಲಿ ಹೆಲ್ಮೆಟ್ ಕುರಿತಾಗಿ ಜಾಗೃತಿ ಮೂಡಿಸುವ ಜೊತೆಗೆ ಬೈಕ್ ಸವಾರರು ಕಳಪೆ ಗುಣಮಟ್ಟದ ಇಲ್ಲವೇ ಅರ್ಧ ಹೆಲ್ಮೆಟ್ ಬಳಸಬೇಡಿ. ಬಳಸಿದರೆ ದಂಡ ಕಟ್ಟಬೇಕು ಎಂದು ಸೂಚನೆ ನೀಡಿದರು.


ಶಿವಮೊಗ್ಗ – ಭದ್ರಾವತಿಯಲ್ಲಿ ಹಾಫ್ ಹೆಲ್ಮೆಟ್‌ಗಳನ್ನು ಪೊಲೀಸರು ವಶಪಡಿಸಿಕೊಳ್ಳುತ್ತಿದ್ದಂತೆಯೇ ಬೈಕ್ ಸವಾರರು ಐಎಸ್‌ಐ ಮಾರ್ಕ್‌ನ ಗುಣ ಮಟ್ಟದ ಹೆಲ್ಮೆಟ್ ಖರೀದಿಸಲು ಮುಗಿಬಿದ್ದಿದ್ದು, ಫುಲ್ ಹೆಲ್ಮೆಟ್‌ಗಳ ಬೆಲೆ ೩೮೦ರಿಂದ ೧೦೦೦, ೨೦೦೦ದವರೆಗೂ ಇವೆ.


ನಗರದಲ್ಲಿ ಹಾಫ್ ಹೆಲ್ಮೆಟ್ ನಿಷೇಧಕ್ಕೂ ಮುನ್ನ ಅಲ್ಲಲ್ಲಿ ಕಾಣಸಿಗು ತ್ತಿದ್ದ ಹೆಲ್ಮೆಟ್ ಮಾರಾಟಗಾರರು ಈಗ ರಸ್ತೆ ಬದಿಯಲ್ಲೂ ಕಾಣ ಸಿಗುತ್ತಾರೆ. ಆಧುನಿಕ ಹೆಲೈಟ್ ಮಾದರಿಯಗಳನ್ನು ಮಾರಾಟಕ್ಕೆ ಇಟ್ಟು ದ್ವಿಚಕ್ರ ವಾಹನ ಸವಾರರ ಗಮನ ಸೆಳೆಯತೊಡಗಿದ್ದಾರೆ. ಐಎಸ್‌ಐ ಸಂಕೇತವಿರುವ, ಅಲ್ಲದೇ ನಾನಾ ಕಂಪೆನಿಗಳ ಹೆಲೈಟ್ ಖರೀ ದಿಗೂ ಮುನ್ನ ದ್ವಿಚಕ್ರ ವಾಹನ ಸವಾರರು ಅದರ ಕುರಿತು ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.

ಮುಲಾಜಿಲ್ಲದೇ ಕ್ರಮ: ಡಿವೈಎಸ್‌ಪಿ

ಐಎಸ್‌ಐ ಮಾರ್ಕ್ ಇರುವಂತಹ ಸದೃಢವಾದಂತಹ ಹೆಲ್ಮೆಟ್‌ಗಳನ್ನು ಮಾತ್ರ ಬಳಸಿ, ಹೆಲ್ಮೆಟ್ ರಹಿತವಾದ ಓಡಾಟ ತುಂಬಾ ಅಪಾಯಕಾರಿ ಹಾಗೂ ಕಾನೂನು ಬಾಹಿರ. ಹೆಲ್ಮೆಟ್ ಹಾಕಿಕೊಂಡು ಯಾವುದೇ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವುದು ಅತ್ಯಂತ ಅಗತ್ಯ. ಐಎಸ್‌ಐ ಮಾರ್ಕ್‌ವುಳ್ಳ ಹೆಲ್ಮೆಟ್ ಬಳಕೆಯಿಂದ ಸುರಕ್ಷತೆ, ಜೀವ ವನ್ನು ಕಾಪಾಡುವುದರ ಜೊತೆಗೆ ಕಾನೂನು ಪಾಲನೆ ತುಂಬಾ ಅಗತ್ಯ. ಇದರಲ್ಲಿ ಯಾವುದೇ ಮುಲಾಜುಗಳಿಲ್ಲದೇ ಪೊಲೀಸ್ ಇಲಾಖೆ ಕ್ರಮಕೈಗೊಳ್ಳುವುದು. ಐಎಸ್‌ಐ ಮಾರ್ಕ್ ಇರುವಂತಹ ಫುಲ್ ಹೆಲ್ಮೆಟ್‌ಗಳನ್ನು ಮಾತ್ರ ಬಳಸಿ ನಿಮ್ಮ ಜೀವವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಕಾನೂನನ್ನು ಗೌರವಿಸಿ, ಪಾಲಿಸುವುದನ್ನು ಎಲ್ಲರೂ ಕಲಿಯಬೇಕಿದೆ.
-ಬಾಲರಾಜ್, ಡಿವೈಎಸ್‌ಪಿ, ಶಿವಮೊಗ್ಗ

By admin

ನಿಮ್ಮದೊಂದು ಉತ್ತರ

You missed

error: Content is protected !!