ಇಂದು ನಿವೃತ್ತಿ ಆಗಲಿರುವ ತಮಗೆ ಸೇವೆ ಮಾಡಿದ ತೃಪ್ತಿ ಇದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ರಘುರಾಮ ದೇವಾಡಿಗ ಹೇಳಿದರು.


ಅವರು ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿ, ನನ್ನ ಉದ್ಯೋಗ ಬದುಕಿನ ಪಯಣ ಇಂದಿಗೆ ಮುಗಿಯು ತ್ತಿದೆ. ಸರ್ಕಾರಿ ನೌಕರರ ಸಂಘದಲ್ಲಿ ಕಾರ್ಯದರ್ಶಿ ಯಾಗಿ, ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ನೌಕರರ ಶ್ರೇಯೋಭಿವೃದ್ಧಿಗಾಗಿ ಹಲವು ಕಾರ್ಯಕ್ರಮ ಗಳನ್ನು ನೀಡಿದ್ದೇನೆ. ಮುಖ್ಯವಾಗಿ ಸಂಘಕ್ಕೆ ನಿವೇಶನ ಮಂಜೂರು ಮಾಡಿದ್ದು, ಅದು ಈಗ ಭವ್ಯ ನೌಕರರ ನಿರ್ಮಾಣವಾಗಿದೆ ೨೦೦೮ರಲ್ಲಿ ರಾಜ್ಯಮಟ್ಟದ ಸರ್ಕಾರಿ ನೌಕರರ ಐತಿಹಾಸಿಕ ಸಮ್ಮೇಳನ ಕೂಡ ಆಯೋಜಿಸಿದ್ದೆ ಎಂದರು.


ನಿವೃತ್ತಿ ಆಗಲಿರುವ ನನಗೆ ನಾಡಿನ ಮಠಾಧೀಶರು ಜನಪ್ರತಿನಿಧಿಗಳು, ಅಧಿಕಾರಿಗಳು ಹಾರೈಸಿದ್ದಾರೆ. ಹಾಗೂ ನನ್ನಸೇವೆಯಲ್ಲಿ ಸಹಕರಿಸಿದ್ದಾರೆ. ಅವರೆಲ್ಲ ರಿಗೂ ಕೃತಜ್ಞತೆಗಳು . ನಿವೃತ್ತಿ ಆದರೂ ಪ್ರವೃತ್ತಿಯಿಂದ ಸಮಾಜದ ಸಂಪರ್ಕದಲ್ಲಿ ಇರುತ್ತೇನೆ ಎಂದರು.


ಪರಿಚಯ: ದೇವಾಡಿಗ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನವರು. ತಂದೆ ಕೆ. ನಾರಾಯಣ. ತಾಯಿ ವೆಂಕಮ್ಮ ಎನ್. ಪತ್ನಿ ಆರ್. ಸುಚಿತ್ರ. ಮಕ್ಕಳು ಸ್ಕಂದ ಮತ್ತು ಸ್ಫೂರ್ತಿ. ಪ್ರಾಥಮಿಕ ಶಿಕ್ಷಣವನ್ನು ಆಲೂರಿನಲ್ಲಿ ನಂತರ ಕುಂದಾ ಪುರದಲ್ಲಿ ಬಿ.ಕಾಂ ಪದವಿ. ೧೯೯೧ರಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯಲ್ಲಿ ಕೆಲಸ. ನಂತರ ವನ್ಯಜೀವಿ ವಿಭಾಗದಲ್ಲಿ ಅಧ್ಯಕ್ಷರಾಗಿ ೨೦೧೬ರಲ್ಲಿ ಪತ್ರಾಂಕಿತ ವ್ಯವಸ್ಥಾಪಕರಾಗಿ ಕೆಲಸ ನಿರ್ವಹಿಸಿದ್ದಾರೆ. ೨೦೦೧ರಿಂದ ೨೦೦೫ರವರಗೆ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿಯಾಗಿ ೨೦೦೫ರಲ್ಲಿ ಅಧ್ಯಕ್ಷರಾಗಿ, ೨೦೦೮ರಲ್ಲಿ ಮತ್ತೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.


ಇದಲ್ಲದೆ ರೋಟರಿ ಕ್ಲಬ್ ಸೇರಿದಂತೆ ಹಲವು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ದುಬೈ ಸಂಘದಿಂದ ಇವರಿಗೆ ದೇವಾಡಿಗ ಮಿತ್ರ ಪ್ರಶಸ್ತಿ ಲಭಿಸಿದ್ದು, ಸಂಘ ಸಂಸ್ಥೆಗಳಿಂದ ಹಲವು ಬಾರಿ ಸನ್ಮಾನ ಪಡೆದಿದ್ದಾರೆ. ಸರ್ಕಾರಿ ನೌಕರರ ಸಂಘದ ಏಳಿಗೆಗಾಗಿ ಶ್ರಮಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

You missed

error: Content is protected !!