ಶಿವಮೊಗ್ಗ,ನ.05:

ನಗರದ ಶ್ರೀನಿಧಿ ಟೆಕ್ಸ್ ಟೈಲ್ಸ್ ವಲ್ರ್ಡ್ , ನ.6ರಂದು ಅತ್ಯಾಧುನಿಕ ತಂತ್ರಜ್ಞಾನದ ಫ್ಯಾಬ್ರಿಕ್ ಸ್ಪಾ (ಶುದ್ದೀಕರಣ) ವಿಭಾಗವನ್ನು ಆರಂಭಿಸಲಿದೆ ಎಂದು ಶ್ರೀನಿಧಿ ಸ್ಪಾ ಸಂಸ್ಥೆಯ ಮುಖ್ಯಸ್ಥ ವಿ.ಚೇತನ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಇದೇ ಮೊದಲ ಬಾರಿಗೆ ಪ್ರತಿಷ್ಠಿತ ಜ್ಯೋತಿ ಲ್ಯಾಬ್ಸ್ ಅವರ ಫ್ಯಾಬ್ರಿಕೇರ್ ಸರ್ವೀಸಸ್‍ನ ಸಹಯೋಗದಲ್ಲಿ ಫ್ಯಾಬ್ರಿಕ್ ಸ್ಪಾ ವಿಭಾಗವನ್ನು ಶ್ರೀನಿಧಿ ಯಲ್ಲಿ ಆರಂಭಿಸಲಾಗುತ್ತದೆ. ಇದರ ಉದ್ಘಾಟನೆಯನ್ನು ಶಾಸಕ ಕೆ.ಬಿ.ಅಶೋಕ್ ನಾಯ್ಕ ಅವರು ನಾಳೆ ಬೆಳಿಗ್ಗೆ 10.30ಕ್ಕೆ ಶ್ರೀನಿಧಿ ಟೆಕ್ಸ್‍ಟೈಲ್ಸ್ ವಲ್ಡ್‍ನಲ್ಲಿ ನೆರವೇರಿಸಲಿದ್ದಾರೆ ಎಂದರು.
ಇದೊಂದು ಹೊಸ ತಂತ್ರಜ್ಞಾನವಾಗಿದೆ. ಬೆಂಗಳೂರಿನಲ್ಲಿ ಸ್ಥಾಪಿತವಾಗಿರುವ ಈ ಫ್ಯಾಬ್ರಿಕ್ ಸ್ಪಾ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ್ದು, ಬಟ್ಟೆಗಳ ಶುದ್ದೀಕರಣ ಘಟಕವಾಗಿದೆ. ಕಾರ್ಪೆಟ್‍ಗಳ ಕ್ಲಿನಿಂಗ್, ಸೊಫಾ ಮ್ಯಾಟ್ರಸ್ ಕ್ಲೀನಿಂಗ್, ಡಾರ್ನಿಂಗ್, ಪಾಲೀಷಿಂಗ್, ಸ್ಟೀಮ್ ಐರನ್, ಸಣ್ಣಪುಟ್ಟ ರಿಪೇರಿ, ಬ್ಲಿಚಿಂಗ್, ವೈಟನಿಂಗ್, ಪರದೆಗಳ ಕ್ಲೀನಿಂಗ್ ಹೀಗೆ ಹಲವುಬಟ್ಟೆಗಳನ್ನು ಶುದ್ದೀಕರಿಸಿ ಹೊಚ್ಚ ಹೊಸತರಂತೆ ನೀಡಲಾಗುತ್ತದೆ. ಇದೊಂದು ಹೊಸ ತಂತ್ರಜ್ಞಾನವಾಗಿದ್ದು, ಮೊದಲ ಬಾರಿಗೆ ಶಿವಮೊಗ್ಗದಲ್ಲಿ ಕಲುಷಿತ ಬಟ್ಟೆಗಳ ಶುದ್ದೀಕರಣ ಘಟಕದ ಕೌಂಟರನ್ನು ನಮ್ಮಲ್ಲಿ ತೆರೆಯಲಾಗುತ್ತಿದೆ ಎಂದರು.
ಫ್ಯಾಬ್ರಿಕ್ ಸ್ಪಾ ದ ವಿಭಾಗೀಯ ಉಸ್ತುವಾರಿ ಜಿ.ಮುನಿಕುಮಾರ್ ಮಾತನಾಡಿ, ವಿಶೇಷವಾಗಿ ಒಂದು ದೂರವಾಣಿ ಕರೆ ಮಾಡಿದರೆ ಸಾಕು ನಾವೇ ನಿಮ್ಮ ಮನೆಗೆ ಬಂದು ಬಟ್ಟೆಗಳನ್ನು ಸಂಗ್ರಹಿಸಿ ಪುನಃ ಮನೆಗೆ ತಲುಪಿಸುವ ವ್ಯವಸ್ಥೆ ಕೂಡ ಇದರಲ್ಲಿದೆ. ನಮ್ಮ ಜ್ಯೋತಿ ಲ್ಯಾಬ್ ಸಂಸ್ಥೆ ಭಾರತದಲ್ಲಿಯೇ ವಿಶ್ವಾಸಾರ್ಹ ಸಂಸ್ಥೆಯಾಗಿದೆ. ಇದೇ ಮೊದಲ ಬಾರಿಗೆ ಮಲೆನಾಡಿನಲ್ಲಿ ತೆರೆಯಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀನಿಧಿಯ ಅಶ್ವಥ್ ನಾರಾಯಣ ಶೆಟ್ಟಿ, ವಿ.ಚೇತನ್ ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!