night police car lights in city - close-up with selective focus and bokeh background blur
ಸಾಗರ : ಸಮೀಪದ ಗುಡ್ಡೆಕೌತಿ ಗ್ರಾಮದಲ್ಲಿ ಅಕ್ರಮವಾಗಿ ದನದ ಮಾಂಸ ಸಾಗಾಣಿಕೆ ಮಾಡುತ್ತಿದ್ದ ಇಮ್ತಿಯಾಜ್ ಎಂಬಾತನನ್ನು ಗ್ರಾಮಾಂತರ ಠಾಣೆ ಪೊಲೀಸರು ಬುಧವಾರ ಸಂಜೆ ವಶಕ್ಕೆ ಪಡೆದಿದ್ದಾರೆ.

ಸಾಗರ ನಗರದ ಸುಭಾಷ್ ನಗರ ನಿವಾಸಿ ಇಮ್ತಿಯಾಜ್ ಎಂಬಾತ ರಾಣೆಬೆನ್ನೂರಿನಿಂದ ಕೆ.ಎಸ್.ಆರ್.ಟಿ.ಸಿ. ಬಸ್‌ನಲ್ಲಿ ಸುಮಾರು ೪೦ ಕೆ.ಜಿ. ದನದ ಮಾಂಸವನ್ನು ಸಾಗರಕ್ಕೆ ತೆಗೆದುಕೊಂಡು ಬಂದು ಗುಡ್ಡ ಕೌತಿ ಹತ್ತಿರ ಇಳಿಸಿ

ತಮ್ಮ ಸ್ಕೂಟಿಯಲ್ಲಿ ಸಾಗಿಸುತ್ತಿದ್ದಾಗ ಖಚಿತ ಮಾಹಿತಿ ಮೇಲೆ ಗ್ರಾಮಾಂತರ ಠಾಣೆ ಪೊಲೀಸರು ದಾಳಿ ನಡೆಸಿ ಮಾಲುಸಹಿತ ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.


ಕರ್ನಾಟಕ ಫ್ರಿವೆಂನ್ಸನ್ ಆಫ್ ಸ್ಲಾಟರ್ ಎಂಡು ಪ್ರಿವೆನ್ಸನ್ ಆಫ್ ಕ್ಯಾಟಲ್ಸ್ ಆಕ್ಟ್ ೨೦೨೦ರ ಅಡಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.