ಶಿವಮೊಗ್ಗ,ಜೂ.23:
ಶಿವಮೊಗ್ಗ ನಗರದ ವಿಧಾನಸಭಾ ಸದಸ್ಯರು ಅಂದರೆ ಈಗಲೂ ಕೆಬಿ ಪ್ರಸನ್ನ ಕುಮಾರ್ ಎಂದರೆ ಆಶ್ಚರ್ಯ ಪಡಬೇಕಿಲ್ಲ. ಶಿವಮೊಗ್ಗ ಬಿಬಿ ರಸ್ತೆಯ ಸಂಸ್ಕೃತ ಭವನದ ಪಕ್ಕದ ತಿರುವಿನಲ್ಲಿರುವ ಶಿವಮೊಗ್ಗ ಮಹಾನಗರ ಪಾಲಿಕೆ ಈಗಲೂ ಕೆಬಿ ಪ್ರಸನ್ನ ಕುಮಾರ್ ಅವರನ್ನು ಶಾಸಕರನ್ನಾಗಿ ಉಳಿಸಿಕೊಂಡಿದೆ.


ಸೀಗೆಹಟ್ಟಿ ವಾರ್ಡಿಗೆ ಸೇರಿದ ಈ ಜಾಗದಲ್ಲಿ ಈಗಲೂ ಅಲ್ಲಿನ ಮಹಾನಗರ ಪಾಲಿಕೆ ಸದಸ್ಯರಾಗಿ ಎಸ್ ಕೆ ಮರಿಯಪ್ಪ ಅವರು ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಕಳೆದ ಹತ್ತು ವರ್ಷದ ಹಿಂದಿನ ಅವಧಿಯಲ್ಲಿ ಅಂದಿನ ಶಾಸಕರಾಗಿದ್ದ ಕೆ.ಬಿ. ಪ್ರಸನ್ನ ಕುಮಾರ್ ಅವರು ಹಾಗೂ ಅವತ್ತಿನ ಶಿವಮೊಗ್ಗ ಮಹಾನಗರ ಪಾಲಿಕೆಯ ಅಧ್ಯಕ್ಷರಾಗಿದ್ದ ಎಸ್ ಕೆ ಮರಿಯಪ್ಪ ಅವರ ಅವಧಿಯಲ್ಲಿ ನಗರದ ಪ್ರತಿ ತಿರುಉಗಳನ್ನು ಸಾರ್ವಜನಿಕವಾಗಿ ಹೇಳುವಂತಹ ಹಿನ್ನೆಲೆಯಲ್ಲಿ ಪ್ರತಿ ತಿರುವಿಗಳ ಬದಿಯಲ್ಲಿ ವಾರ್ಡ್ ಸಂಖ್ಯೆ , ಈ ರಸ್ತೆಗಳ ಮಾಹಿತಿಯನ್ನು ಹೊತ್ತು ಹಾಕುತ್ತಿದ್ದ ಬೋರ್ಡ್ ವಿಚಾರದಲ್ಲಿ ಶಿವಮೊಗ್ಗಕ್ಕೆ ಹೊರವಲಯದಿಂದ ಬಂದ ಜನರಲ್ಲಿ ಅತ್ಯಂತ ಸುಲಭವಾಗಿ ತಾವು ತಲುಪಬಹುದಾದ ಸ್ಥಳಕ್ಕೆ ಹೋಗುತ್ತಿದ್ದರು.


ಈ ಬೋರ್ಡ್ ಗಳು ಈಗ ಎಷ್ಟೋ ಬಿದ್ದು ಹೋಗಿವೆ ಆದರೆ ಕೆಲಬೋರ್ಡ್ ಗಳು ಈಗಲೂ ಹಳೆಯದಾಗಿ ಉಳಿದುಕೊಂಡಿವೆ. ದುರಂತವೆಂದರೆ ಕೆಬಿ ಪ್ರಸನ್ನ ಕುಮಾರ್ ನಂತರ ಕೆಎಸ್ ಈಶ್ವರಪ್ಪ ಶಿವಮೊಗ್ಗದ ಶಾಸಕರಾದರು. ಈಗ ಪ್ರಸ್ತುತ ಚನ್ನಬಸಪ್ಪ ಅವರು ಶಾಸಕರಾಗಿದ್ದಾರೆ. ಆದರೆ ಈಗಲೂ ಕೆಬಿ ಪ್ರಸನ್ನ ಕುಮಾರ್ ಅವರ ಹೆಸರು ಬಿಬಿ ರಸ್ತೆಯ ಈ ತಿರುವಿನಲ್ಲಿ ಕಾಣಿಸುತ್ತಿದೆ. ಜೊತೆಗೆ ಎಸ್ ಕೆ ಮರಿಯಪ್ಪ ಅವರನ್ನು ಹೀಗೆ ಹಟ್ಟಿಯಲ್ಲಿ ಉಳಿಸಿಕೊಂಡಿದೆ ಜೈ ಎನ್ನಬೇಕು. ನಮ್ ಶಿವಮೊಗ್ಗ ಅಂದ್ರೆ ಹಂಗೇ…!
ಚಿತ್ರ : ನಮ್ ಸಾಹಸೀ ವೀರ, ಪದವಿ ಓದುತ್ತಿರುವ ಯುವಕ

ಬರಹ: ನಿಮ್ ಸ್ಬಾಮಿ

By admin

ನಿಮ್ಮದೊಂದು ಉತ್ತರ

error: Content is protected !!