ನಗರದ ಸಮಗ್ರ ಅಭಿವೃದ್ಧಿಗಾಗಿ ಎಲ್ಲಾ ೩೭ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮನ್ವಯತೆಯನ್ನು ಸಾಧಿಸಲಾಗುವುದು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.

.


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ. ಎಲ್ಲಾ ೩೭ ಇಲಾಖೆಗಳ ಪೂರ್ವಭಾವಿ ಪರಿ ಚಯ ಮಾಡಿಕೊಂಡಿದ್ದೇನೆ. ಮತ್ತು ಎಲ್ಲಾ ಇಲಾಖೆಗಳ ಸಮನ್ವಯತೆಯಿಂದ ಮಾತ್ರ ನಗರದ ಅಭಿವೃದ್ಧಿ ಸಾದ್ಯವಾಗುತ್ತದೆ. ಹಾಗಾಗಿ ಇಲಾಖೆ ಅಧಿಕರಿಗಳ ಜೊತೆ ಮಾತನಾಡಿದ್ದೇನೆ. ಮುಂದಿನ ದಿನಗಳಲ್ಲಿ ಎಲ್ಲಾ ಇಲಾಖೆಗಳ ಅಧಿ ಕಾರಿಗಳೊಂದಿಗೆ ಪ್ರತ್ಯೇಕವಾಗಿ ಚರ್ಚಿಸಿ ಸಮಸ್ಯೆ ಗಳ ಬಗ್ಗೆ ಗಮನಹರಿಸಲಾಗುವುದು ಎಂದರು.


ಅಧಿಕಾರಿಗಳು ಸಾರ್ವಜನಿಕರಿಗೆ ಸ್ಪಂದಿಸ ಬೇಕು. ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಬಂದಾಗ ಕಾರಣ ಹೇಳದೆ ಪರಿಹಾರ ನೀಡಬೇಕು. ಮತ್ತು ಒಂದು ಇಲಾಖೆಗೆ ಹಾಗೂ ಮತ್ತೊಂದು ಇಲಾಖೆ ನಡುವ ಸಮನ್ವಯತೆ ಇರಬೇಕು. ಮುಂದಿನ ದಿನಗಳಲ್ಲಿ ಈ ಬಗ್ಗೆ ಅಗತ್ಯ ಕ್ರಮ ತೆಗೆದುಕೊಂಡು ಒಟ್ಟಾಗಿ ಯೋಚನೆ ಮಾಡಲಾಗುವುದು. ಎಲ್ಲಾ ಇಲಾಖೆಗಳ ಹಿಂದಿನ ಮಾಹಿತಿ ಇಂದಿನ ಮಾಹಿತಿ ಹಾಗೂ ಮುಂದೆ ತೆಗೆದುಕೊಳ್ಳಬೇಕಾದ ನಿರ್ಧಾರಗಳ ಬಗ್ಗೆ ಗಮನಹರಿಸಲಾಗುವುದು ಎಂದರು.


ಸ್ಮಾರ್ಟ್ ಸಿಟಿಗೆ ಸಂಬಂಧಿಸಿದಂತೆ ಅನೇಕ ದೂರುಗಳು ಬಂದಿವೆ. ಹಲವು ಕಡೆ ಸಮಸ್ಯೆ ಇರುವುದೂ ನಿಜ. ಮಳೆಯ ನೀರು ಚರಂಡಿಗೆ ಹೋಗಲಾಗದೆ ಇರುವುದು, ರಾಜಕಾಲುವೆಗಳ ಒತ್ತುವರಿ ಸೇರಿದಂತೆ ಇತರ ಸiಸ್ಯೆಗಳು ಸೇರಿಕೊಂಡು ಸಣ್ಣ ಮಳೆಯಾದರೆ ಸಾಕು ತಗ್ಗು ಪ್ರದೇಶಗಳಿಗೆ ನೀರು ನುಗ್ಗುತ್ತದೆ. ಮೊದಲು ಕುಂಬಾರಗುಂಡಿ ಮತ್ತು

ಇಮಾಂಬಾಡಾದಲ್ಲಿ ಮಾತ್ರ ಈ ಸiಸ್ಯೆ ಇತ್ತು. ಈಗ ನಗರದ ಎಲ್ಲಾ ಬಡಾವಣೆಗಳಲ್ಲೂ ಈ ಸiಸ್ಯೆ ಇದೆ. ಇದನ್ನು ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.ಸ್ಮಾರ್ಟ್ ಸಿಟಿಗೆ ಸಂಬಂಧಿಸಿದಂತೆ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಕೇವಲ ಸ್ಮಾರ್ಟ್ ಸಿಟಿ ಕಾಮಗಾರಿಗಳ ಬಡಾವಣೆಗಳಲ್ಲಿ ಮಾತ್ರವಲ್ಲ ಇತರ ಎಲ್ಲಾ ಬಡಾವಣೆಗಳಲ್ಲೂ ಇದೇ ರೀತಿ ನೀರು ನುಗ್ಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಇಂದು ಸ್ಮಾರ್ಟ್‌ಸಿಟಿ ಕಚೇರಿಗೆ ತೆರಳಿ ಅಗತ್ಯ ಮಾಹಿತಿ ಸಂಗ್ರಹಿಸಲಾ ಗುವುದು. ತುರ್ತು ಸಭೆ ಕರೆಯಲಾಗುವುದು ಎಂದರು.

By admin

ನಿಮ್ಮದೊಂದು ಉತ್ತರ

error: Content is protected !!