ಶಿವಮೊಗ್ಗ,ಜೂ. 13:
ಯಾರು ಏನೇ ಹೇಳಿದರೂ ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಸಂಸದ ಬಿ ವೈ ರಾಘವೇಂದ್ರ ಅವರ ವಿಶೇಷವಾದ ಕ್ರಮ ಹಾಗೂ ಶ್ರಮ ಎರಡೂ ಜನಮೆಚ್ವುಗೆಗೆ ಪಾತ್ರವಾಗಿದೆ. ಈ ನಿಟ್ಟಿನಲ್ಲಿ ಸಂಸದರ ತಾಳ್ಮೆಯ ಅರ್ಥಗರ್ಬಿತ ಕಾರ್ಯ ಇತರೆ ರಾಜಕಾರಣಿಗಳಿಗೆ ಮಾದರಿಯಾದುದಾಗಿದೆ.
ರಾಜಕೀಯ ಪಕ್ಷಗಳ ವಿಷಯ ಸ್ವಂತಿಕೆಯ ವಿಷಯವಾಗಿದ್ದು, ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದಂತೆ ಸಂಸದ ಬಿ.ವೈ. ರಾಘವೇಂದ್ರ ಅವರು ನಿನ್ನೆ ರಾಜಧಾನಿಯಲ್ಲಿ ಜಿಲ್ಲೆಯ ಅಭಿವೃದ್ಧಿ ವಿಚಾರಕ್ಕೆ ಪೂರಕವಾಗಿ ಮುಖ್ಯಮಂತ್ರಿಗಳನ್ನು, ಉಪಮುಖ್ಯಮಂತ್ರಿಗಳನ್ನು ಹಾಗೂ ಸಚಿವರಾದ ಮಧು ಬಂಗಾರಪ್ಪ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಭೇಟಿ ಮಾಡಿ ಅವರಿಗೆ ಅಭಿನಂದಿಸುವ ಜೊತೆಗೆ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ಒಂದಿಷ್ಟು ಕಾರ್ಯಗಳ ಮಾಹಿತಿಯನ್ನು ಅವರ ಮುಂದೆ ನೀಡಿ ಸಹಕರಿಸಲು ವಿನಂತಿಸಿದರು.
ರಾಜಕೀಯ ಪಕ್ಷ ಎಂಬುದು ಚುನಾವಣೆಗೆ ಮಾತ್ರ ಸೀಮಿತವಾಗಿರಬೇಕು. ಯಾವುದೇ ಕಾರಣಕ್ಕೂ ಪಕ್ಷದ ಚೌಕಟ್ಟು ಅಭಿವೃದ್ಧಿಯ ವಿಚಾರದಲ್ಲಿ ಕಾಣಿಸಿಕೊಳ್ಳಬಾರದು ಎಂಬ ಮಹತ್ತರ ಉದ್ದೇಶ ಸಾರುವ ಸಂಸದ ಬಿ ವೈ ರಾಘವೇಂದ್ರ ಅವರ ಪ್ರಯತ್ನ ಶ್ಲಾಘನೀಯ ಹಾಗೂ ಇತರ ಎಲ್ಲ ರಾಜಕಾರಣಿಗಳಿಗೆ ಮಾದರಿಯಾದುದು.
ಇಂತಹ ನಿಟ್ಟಿನಲ್ಲಿ ಬೆಳೆದು ನಮ್ಮ ನಡುವೆ ಗುರುತಿಸಿಕೊಂಡು ಸ್ವಕ್ಷೇತ್ರಗಳನ್ನು ಹಾಗೂ ರಾಜ್ಯವನ್ನು ಅಭಿವೃದ್ಧಿಯತ್ತ ತೆಗೆದುಕೊಂಡು ಹೋದ ಕೀರ್ತಿ ನಿಕಟ ಪೂರ್ವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೂ ಸಹ ಸಲ್ಲುತ್ತದೆ. ಅವರ ಪುತ್ರ ಬಿ.ವೈ. ರಾಘವೇಂದ್ರ ಅವರ ಕಾರ್ಯ ಜನ ಮೆಚ್ಚುಗೆಗೆ ಪಾತ್ರವಾಗಿದೆ. ರಿಯಲಿ ಗ್ರೇಟ್
ವಿವರ
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ.ವೈ.ರಾಘವೇಂದ್ರರವರು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳಾದ ಶ್ ಸಿದ್ದರಾಮಯ್ಯನವರನ್ನ,
ಉಪ ಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರನ್ನ, ಸಚಿವರುಗಳಾದ ಮಧುಬಂಗಾರಪ್ಪ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ರವರುಗಳನ್ನ ಬೇಟಿ ಮಾಡಿ ಶುಭಕೋರಿ ಹಾಗೂ ಶಿವಮೊಗ್ಗ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಬಗ್ಗೆ ಚರ್ಚಿಸಿ ಸಹಕಾರ ಕೋರಿದರು.