ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯಒಂದು ವಾರಗಳ ವಾರ್ಷಿಕ ವಿಶೇಷ ಶಿಬಿರವು ಭದ್ರಾವತಿ ತಾಲೂಕು ಅರಬಿಳಚಿ ಗ್ರಾಮದಲ್ಲಿ ಆರಂಭಗೊಂಡಿತು.
ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಕುವೆಂಪು ವಿಶ್ವ ವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕರಾದ ಡಾ ಪರಿಸರ ನಾಗರಾಜ, ತಮ್ಮ ಉದ್ಘಾಟನಾ ನುಡಿಯಲ್ಲಿ ”
ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಕಸಗಳ ವಿಲೇವಾರಿಯ ಸೂಕ್ಶ್ಮ ಪ್ರಜ್ಞೆ ಇಂದು ಗ್ರಾಮಾಂತರ ಪ್ರದೇಶಗಳಲ್ಲಿ ಈ ಅರಿವು ಮುಖ್ಯವಾಗಿದೆ.. ರಾಷ್ಟ್ರೀಯ ಸೇವಾ ಯೋಜನೆ ಶ್ರಮದಾನದ ಮೂಲಕ ಜನ ಜಾಗೃತಿ ಮದುವೆ ಶ್ಲಾಘನೀಯ ಕಾರ್ಯ ಮಾಡುತ್ತಿದೆ. ಯುವ ಶಕ್ತಿ ಈ ದೇಶದ ಸಂಪತ್ತು. ಅವರನ್ನು ಸರಿಯಾದ ದಾರಿಯಲ್ಲಿ ಮುನ್ನಡೆಯುವಂತೆ ಪ್ರೋತ್ಸಾಹಿಸುವುದು ನಮ್ಮೆಲರ ಕರ್ತವ್ಯವಾಗಿದೆ. ಎನ್ ಎಸ್ ಎಸ್ ಜೊತೆ ಊರಿನ ಗ್ರಾಮಸ್ಥರು ಕೈ ಜೋಡಿಸಿದರೆ ಉತ್ತಮ ಬದಲಾವಣೆ ತರಲು ಸಾಧ್ಯ.” ಎಂದರು.
ಅರಬಿಳಚಿ ಗ್ರಾಮ ಪಂಚಾಯತ್ ಅಧ್ಯಕ್ಷ ಸದಾಶಿವಪ್ಪ ಎಚ್ ಎಂ ಅವರು ಅಧ್ಯಕ್ಷತೆ ವಹುಸಿದ್ದರು.
” ಗ್ರಾಮೀಣ ಭಾಗಗಳಲ್ಲಿ ಅರಿವು ಮೂಡಿಸುವ ಅತ್ಯಂತ ಕ್ರಿಯಾಶೀಲ ಚಟುವಟಿಕೆಗಳನ್ನು ಎನ್ ಎಸ್ ಎಸ್ ಇಂತಹ ಶಿಬಿರಗಳ ಮೂಲಕ ಮಾಡುತ್ತಿರುವುದು ಸಂತೋಷದ ಸಂಗತಿ. ಸ್ವಚ್ಛತೆ,
ಮೂಢನಂಬಿಕೆಗಳ ವಿರುದ್ಧ ಗ್ರಾಮಸ್ಥರು ಹೆಚ್ಚಿನ ತಿಳುವಳಿಕೆ ಪಡೆಯಲು ಉಪಯುಕ್ತ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ಮಾಡುತ್ತಿದ್ದಾರೆ ಎಂದರು
ಗ್ರಾಮಪಂಚಾಯತ್ ನ ಉಪಾಧ್ಯಕ್ಷರಾದ ನಸೀಮಾ ಬಷೀರ್ ಅವರು ಹಾಗೂ ಸದಸ್ಯ ಕಿರಣ್, ಕಾರ್ಯಕ್ರಮಾಧಿಕಾರಿ ಪರಶುರಾಮ್, ದೇವೇಂದ್ರ, ದಿನೇಶ್ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮಾ ಧಿಕಾರಿ ಡಾ. ಶುಭಾ ಮರವಂತೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಲತೇಶ್ ಎಚ್ ಸ್ವಾಗತಿಸಿದರು. ಕು. ಕಸ್ತೂರಿ ಹಾಗೂ ಕು. ಸ್ನೇಹ ನಿರೂಪಿಸಿದರು.