shimoga/jun.6:

ವಿಶ್ವದಾದ್ಯಂತ ನೆಲೆಸಿರುವ ಶ್ರೀ ಶ್ರೀ ರೋಜಾ ಷಣ್ಮುಗಂ ಗುರೂಜಿಯವರ ಶಿಷ್ಯವೃಂದವು ವಿಶ್ವ ಪರಿಸರ ದಿನವಾದ ಜೂನ್ 5ರಂದು ನಾನ ಕಡೆಗಳಲ್ಲಿ ಪರಿಸರ ರಕ್ಷಣೆಗಾಗಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ದಿಸೆಯಲ್ಲಿ ಚೆನ್ನೈನಲ್ಲಿರುವ ಶ್ರೀ ಶ್ರೀ ರೋಜಾ ಷಣ್ಮುಗಂ ಗುರೂಜಿ ಶಿಷ್ಯ ವೃಂದವು ವಿಶೇಷವಾಗಿ ವಿಶ್ವ ಪರಿಸರ ದಿನವನ್ನು ಆಚರಿಸಿತು. ಇದರಲ್ಲಿ ಶ್ರೀ ಶಬರೀಶ್ ಷಣ್ಮುಗಂ ಸ್ವಾಮಿಯವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಿದರು. ಪರಿಸರದ ಬಗ್ಗೆ ಮೊದಲಿನಿಂದಲೂ ವಿಶೇಷ ಕಾಳಜಿ ಇರುವ ಶ್ರೀ ಶಬರೀಶ್ ಷಣ್ಮುಗಂ ಸ್ವಾಮಿ ತಮ್ಮ ಹುಟ್ಟಿದ ಹಬ್ಬದ ದಿನದಂದು ವಿಶೇಷವಾಗಿ ಗಿಡ ನೆಡುವ ಮೂಲಕ ಆಚರಿಸುತ್ತಾರೆ.

 ಈ ಕಾರ್ಯಕ್ರಮದಲ್ಲಿ ವಿದೇಶದ  ಗಣ್ಯರು ಹಾಗೂ ಚೆನ್ನೈ ಶಿಷ್ಯ ವೃಂದದಿಂದ ಮುಖ್ಯಸ್ಥರಾದ ಸುರೇಶ್ ಸ್ವಾಮಿ, ಜಯಶ್ರೀ, ಅಶೋಕ್, ಮುತ್ತಮಿಳ್, ಎಲವಳಗನ್, ಸೆಲ್ವಾ ಹಾಗೂ ಮುಂತಾದವರು ಸಾಮಾಜಿಕ ಒಳಿತಿಗಾಗಿ ಸೇವೆಯಲ್ಲಿ ಪಾಲ್ಗೊಂಡಿದ್ದರು.

ಮುಂದಿನ ದಿನಗಳಲ್ಲಿ ಗುರೂಜಿ ಶಿಷ್ಯ ವೃಂದದಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಈ ಸಂದರ್ಭದಲ್ಲಿ ತಿಳಿಸಲಾಯಿತು. ಪರಿಸರದ ಪ್ರಾಮುಖ್ಯತೆಯನ್ನು ಶಬರೀಶ್ ಗುರುಸ್ವಾಮಿಯವರು ನೆರೆದಿದ್ದ ಎಲ್ಲರಿಗೂ ವಿವರಿಸಿದರು.

By admin

ನಿಮ್ಮದೊಂದು ಉತ್ತರ

error: Content is protected !!