ಸಮರ್ಥ ಮತ್ತು ಬಲಿಷ್ಠ ಸಮಾಜದ ನಿರ್ಮಾಣದಲ್ಲಿ ಮಹಿಳಾ ಸಂಘಟನೆಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ಶಾಸಕ ಎಸ್. ಎನ್. ಚನ್ನಬಸಪ್ಪ (ಚನ್ನಿ ) ಅಭಿಪ್ರಾಯಪಟ್ಟರು.

ರವೀಂದ್ರ ನಗರದ ಪ್ರೇರಣಾ ಮಹಿಳಾ ಸಂಘದ ವತಿಯಿಂದ ಏರ್ಪಟ್ಟ ಶಾರದಾ ಪೂಜೆ ಹಾಗೂ 2023-24 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ದೀಪಬೆಳಗಿಸುವ ಮೂಲಕ ಉದ್ಘಾಟಸಿ ಅವರು ಮಾತನಾಡಿ, ಮಹಿಳಾ ಶಕ್ತಿ ಗಟ್ಟಿಯಾಗಿ ನಿಂತರೆ ಎಲ್ಲಾ ಬಗೆಯ ಪ್ರತಿರೋದವನ್ನು ಎದುರಿಸಿ ಆದರ್ಶ ಯುತವಾದ, ಸಮ ಸಮಾಜವನ್ನು ನಿರ್ಮಿಸಲು ಸಾಧ್ಯ, ಅಂತಹ ವಿಶಿಷ್ಟ ಸಾಮರ್ಥ್ಯ ಮಹಿಳಾ ಸಂಘಟನೆಗಳ ಜಾಗೃತಿಯ ಕಾರ್ಯದಿಂದ ಸಾಧ್ಯವಿದೆ ಎಂದು ಅವರು ನುಡಿದರು.

ಮಹಿಳಾ ಸಬಲೀಕರಣದ ಹಲವು ಕಾರ್ಯಗಳು ಇಂದು ಬೆಳದಿದೆ, ಎಲ್ಲಾ ರಂಗದಲ್ಲೂ ಮಾತೆಯರಿಗೆ ಪ್ರಾತಿನಿಧ್ಯ, ಅವಕಾಶಗಳು ದೊರಕುತಿದ್ದು, ಸಮಾಜದಲ್ಲಿಂದು ಮಹಿಳಾ ಸಮುದಾಯಕ್ಕೆ ಮತ್ತಷ್ಟು ಶಕ್ತಿ ಸಾಮರ್ಥ್ಯವನ್ನು ನೀಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಇಡೀ ಸಮಾಜವು ಆತ್ಮವಾಲೋಕನದೊಂದಿಗೆ ಸ್ತ್ರೀ ಶಕ್ತಿ ಯ ಉನ್ನತಿ, ಜಾಗೃತಿಗೆ ಬೆಂಬಲವಾಗಿ ನಿಲ್ಲಬೇಕಿದೆ ಆ ಮೂಲಕ ಸದೃಢ ಸಮಾಜದ ಬೆಳವಣಿಗೆಗೆ ಸಹಕರಿಸಬೇಕಿದೆ ಎಂದು ಹೇಳಿದರು

ಇದೇ ಸಂದರ್ಭದಲ್ಲಿ ಪ್ರೇರಣಾ ಸಂಘದ ವತಿಯಿಂದ ನೂತನ ಶಾಸಕರಾದ ಚೆನ್ನಿ ಅವರಿಗೆ ಅಭಿನಂದಿಸಿ ಗೌರವಿಸಲಾಯಿತು. ಸಂಘದ ಅಧ್ಯಕ್ಷೆ ಗಾಯತ್ರಿ ರಾಮಮೂರ್ತಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ನಗರಸಭಾ ಅಧ್ಯಕ್ಷ ಎಂ. ಶಂಕರ್ ಅವರು ಈ ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿ, ಪ್ರೇರಣಾ ಮಹಿಳಾ ಸಂಘದ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿದರು.

ಮಹಿಳಾ ಜಾಗೃತಿಯ ಹಲವು ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಲು ಸಂಘದ ನೂತನ ಪದಾಧಿಕಾರಿಗಳು ನಿರ್ಧರಿಸಿದರು. ಚಂದ್ರಿಕಾ ಎಂ ಎ ನಿರೂಪಿಸಿ ಸ್ವಾಗತಿಸಿದರು, ಪಾರ್ವತಿ ಉಮಾಶಂಕರ್ ಮತ್ತು ಮಾಲಿನಿ ರಘುನಾಥ್ ಅತಿಥಿಗಳನ್ನು ಪರಿಚಯಯಿಸಿ ಪ್ರಾಸ್ತವಿಕಾ ಮಾತನಾಡಿದರು ತೇಜಸ್ವಿನಿ ಸುರೇಶ್ ಸರ್ವರನ್ನು ವಂದಿಸಿದರು.

By admin

ನಿಮ್ಮದೊಂದು ಉತ್ತರ

error: Content is protected !!