ಶಿವಮೊಗ್ಗ,ಮೇ.29:

“ಋತುಚಕ್ರ”ದ ಕುರಿತು ಅರಿವು ಮೂಡಿಸಿದ ಶಿವಮೊಗ್ಗದ ಜೆಸಿಐ ಬಳಗ, ಕಾರ್ಯಕ್ರಮದ ಉದ್ಘಾಟನೆಯ ವೀಡಿಯೋ ನೋಡಿ- tungataranga. com

ಜ್ಯೂನಿಯರ್ ಛೆಂಬರ್ ಆಫ್ ಇಂಟರ್ ನ್ಯಾಷನಲ್ ಸಂಸ್ಥೆಯ ವತಿಯಿಂದ ಮಹಿಳೆಯರ ಋತುಚಕ್ರದ ಆರೋಗ್ಯಕ್ಕೆ ಸಂಬಂಧಿಸಿದಂತೆ ಪ್ರಯಾಸ ಎಂಬ ಕಾರ್ಯಕ್ರಮದಲ್ಲಿ ಸಮಾಜದ ಎಲ್ಲ ಪುರುಷ ಮಹಿಳೆಯರಿಗೆ ಅರಿವು ಮೂಡಿಸಲು ವಾಕ್ತಾನ್ ಎಂಬ ಕಾರ್ಯಕ್ರಮವನ್ನು ಶಿವಪ್ಪ ನಾಯಕ ವೃತ್ತದಿಂದ ಬಸ್ಟ್ಯಾಂಡ್ ವರೆಗೂ ಹಮ್ಮಿಕೊಳ್ಳಲಾಗಿತ್ತು .

ಶಿವಮೊಗ್ಗ ದಲ್ಲಿರುವ ಜೆ ಸಿ ಐ ಸಂಸ್ಥೆಯ ಎಲ್ಲಾ ಅಧ್ಯಕ್ಷರುಗಳಾದ ಜೆಸಿ ಪೂರ್ಣಿಮಾ ಸುನಿಲ್, ಜೆಸಿ ಸುಷ್ಮಾ, ಜೆ ಸಿ ಕಿರಣ್, ಜೆಸಿ ಶ್ರೀಧರ್ ಹೆಗಡೆ, ಜೆ ಸಿ ಶೋಭಾ ಸತೀಶ್
ಜೆ ಸಿ ಅಶ್ವಿನಿ ಹಾಗೂ ಕೋ ಆರ್ಡಿನೇಟರ್ ಆದಂತಹ ಜೆ ಸಿ ದಿವ್ಯ ವಲಯ ಅಧ್ಯಕ್ಷರಾದ ಜೆಸಿ ಅನುಷ್ ಗೌಡ, ಜೆಸಿ ಸತೀಶ್ ಚಂದ್ರ. ವೀರೇಶ್, ರೋಟರಿ ಮಾಜಿ ಸಹಾಯಕ ಗವರ್ನರ್ ಜಿ ವಿಜಯಕುಮಾರ್, ಫಾಸ್ಟ್ ಜೋನ್ ಆಫೀಸರ್ ಪ್ರತಿಮಾ ಡಾಕಪ್ಪಗೌಡ, ಜೆಸಿ ನರಸಿಂಹ ಶೆಟ್ಟಿ, ಶಾರದಾ ಶೇಷಗಿರಿ. ಡಾ. ಅಖಿಲ, ಡಾ. ಲಲಿತಾ ಭರತ್, ಪ್ರಮುಖರಾದ ಗೌರೀಶ್ ಭಾರ್ಗವ್, ಪ್ರಮೋದ್, ಸಂತೋಷ್ ವಾಣಿ, ಜಗದೀಶ್ ಹಾಗೂ ಎಲ್ಲಾ ಆಡಳಿತ ಮಂಡಳಿ ವರ್ಗದವರು ಬಂಧು ಮಿತ್ರರು ಪಾಲ್ಗೊಂಡಿದ್ದರು.

ಈ ಋತುಚಕ್ರದ ಜಾಗೃತಿ ಜಾಥವು ಬಿ ಎಚ್ ರಸ್ತೆಯ ಶಿವಪ್ಪ ನಾಯಕ ಪ್ರತಿಮೆಯಿಂದ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಖಾಸಗಿ ಬಸ್ ನಿಲ್ದಾಣದಲ್ಲಿ ಅಂತ್ಯಗೊಂಡಿತು.

ಕಾರ್ಯಕ್ರಮವನ್ನು ಡಾ. ಶೀಲಾ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ಬಲೂನ್ ಹಾರಿಸುವುದರ ಮುಖಾಂತರ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು. ಋತುಚಕ್ರದ ಬಗ್ಗೆ ಮಹಿಳೆಯರು ಅನುಸರಿಸಬೇಕಾದ ಕ್ರಮಗಳನ್ನು ತಿಳಿಸಿದರು.

ಈ ಜಾಗೃತಿ ಜಾತಕದಲ್ಲಿ 10 ಜೆಸಿಐ ಕ್ಲಬ್ಬಿನ ಅಧ್ಯಕ್ಷರು, ಪದಾಧಿಕಾರಿಗಳು ಸದಸ್ಯರು ಕರಪತ್ರ ಪ್ಲೇ ಕಾರ್ಡುಗಳನ್ನು ಹಿಡಿದುಕೊಂಡು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

By admin

ನಿಮ್ಮದೊಂದು ಉತ್ತರ

error: Content is protected !!