ಶಿವಮೊಗ್ಗ, ಅ.17:
ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿತರ ಬಂಧನ ಹಾಗೂ 2 ಕೆ.ಜಿ 550 ಗ್ರಾಂ ತೂಕದ ಮಾದಕ ವಸ್ತು ಗಾಂಜಾ, ಅಂದಾಜು ಮೌಲ್ಯ ರೂ 80,000/- (ರೂಪಾಯಿ ಎಂಬತ್ತು ಸಾವಿರ), 02 ಮೊಬೈಲ್ ಫೋನ್ ಗಳು ಹಾಗೂ ಸ್ವಿಫ್ಟ್ ಕಾರು ವಶ ಪಡಿಸಿಕೊಂಡು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ NDPS ಕಾಯ್ದೆ ರೀತ್ಯ ಪ್ರಕರಣ ದಾಖಲಿಸಿದೆ.
ದಿನಾಂಕ:16-10-2020 ರಂದು ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಇಲಿಯಾಸ್ ನಗರದಲ್ಲಿ ಆರೋಪಿತರು ಕಾರನ್ನು ನಿಲ್ಲಿಸಿಕೊಂಡು, ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಬಾತ್ಮಿಯ ಮೇರೆಗೆ ಉಮೇಶ್ ಈಶ್ವರ್ ನಾಯಕ್, ಡಿವೈಎಸ್.ಪಿ, ಶಿವಮೊಗ್ಗ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ವಸಂತ್ ಕುಮಾರ್ ಪೊಲೀಸ್ ನಿರೀಕ್ಷಕರು, ದೊಡ್ಡಪೇಟೆ ವೃತ್ತ ನೇತೃತ್ವದಲ್ಲಿ
ಶಂಕರಮೂರ್ತಿ, ಪಿಎಸ್ಐ, ದೊಡ್ಡಪೇಟೆ ಪೊಲೀಸ್ ಠಾಣೆ ಹಾಗೂ
ಸಿಬ್ಬಂದಿಗಳನ್ನೊಳಗೊಂಡ ತಂಡವು ಕಾರ್ಯಾಚರಣೆ ನಡೆಸಿದೆ.
ಆರೋಪಿತರಾದ ಸೈಫುಲ್ಲಾ ಖಾನ್ 24 ವರ್ಷ, ವಾಸ ಆಜಾದ್ ನಗರ ಶಿವಮೊಗ್ಗ ಮತ್ತು
ಮಹಮದ್ ಖಲೀಲ್ 23 ವರ್ಷ, ವಾಸ ಆಜಾದ್ ನಗರ ಶಿವಮೊಗ್ಗ ಅವರನ್ನು ವಶಕ್ಕೆ ಪಡೆದಿದ್ದು, ಸದರಿ ಆರೋಪಿತರ ವಶದಿಂದ 2 ಕೆ.ಜಿ 550 ಗ್ರಾಂ ತೂಕದ ಮಾದಕ ವಸ್ತು ಗಾಂಜಾ, ಅಂದಾಜು ಮೌಲ್ಯ ರೂ 80,000/- (ರೂಪಾಯಿ ಎಂಬತ್ತು ಸಾವಿರ),
02 ಮೊಬೈಲ್ ಫೋನ್ ಗಳು, ರೂ 805/- (ರೂಪಾಯಿ ಎಂಟು ನೂರ ಐದು) ನಗದು ಹಾಗೂ 01 ಸ್ವಿಫ್ಟ್ ಕಾರು ವಶ ಪಡಿಸಿಕೊಂಡು,
ಸದರಿ ಆರೋಪಿತರ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ NDPS ಕಾಯ್ದೆ ರೀತ್ಯ ಪ್ರಕರಣ ದಾಖಲಿಸಿದೆ.
ಮಾಹಿತಿ ನೀಡಲು ಮನವಿ
ಮಾದಕ ವಸ್ತು ಗಾಂಜಾ ಮಾರಾಟದ ಬಗ್ಗೆ ಸಾರ್ವಜನಿಕರು ಶಿವಮೊಗ್ಗ ಜಿಲ್ಲಾ ಪೊಲೀಸ್ ದೂರವಾಣಿ ಸಂಖ್ಯೆ 9480803301 ಗೆ ಕರೆ ಮಾಡಿ ಮಾಹಿತಿಯನ್ನು ನೀಡಬಹುದು. ಮಾಹಿತಿಯನ್ನು ನೀಡಿದವರ ವಿವರವನ್ನು ಗೌಪ್ಯವಾಗಿಡಲಾಗುವುದು.
-ಪೊಲೀಸ್ ಅಧೀಕ್ಷಕರು
ಶಿವಮೊಗ್ಗ ಜಿಲ್ಲೆ