ಹೊಸನಗರ: ಮೇಲಿನ ಅದಿಕಾರಿಗಳ ಆದೇಶಧಂತೆ ಖಚಿತ ವರ್ತಮಾನದ ಮೇರೆಗೆ ಕರ್ನಾಟಕ ರಾಜ್ಯ ವಿದಾನಸಭೆ ಚುನಾವಣೆ ಘೋಷಣೆಯಾದ ದಿನದಿಂದ ಇಂದಿನವರೆವಿಗೆ ಹೊಸನಗರ ತಾಲ್ಲೂಕು ಅಬಕಾರಿ ಇಲಾಖೆ ಹೊಸನಗರ ತಾಲ್ಲೂಕಿನಲ್ಲಿ ದಾಳಿ ನಡೆಸಲಾಗಿದ್ದು ಅಕ್ರಮವಾಗಿ ಸಂಗ್ರಹಿಸಿರುವ ೪೪೮ಲೀಟರ್ ಅಕ್ರಮ ಮದ್ಯ ೩೬.೨೪೦ ಬಿಯರ್‌ಗಳನ್ನು ವಶ ಪಡಿಸಿಕೊಳ್ಳಲಾಗಿದ್ದು ಅಕ್ರಮ ಮದ್ಯೆ ಸಾಗಿಸಲು ಬಳಸಿದ ೫ವಾಹನಗಳನ್ನು ವಶ ಪಡಿಸಿಕೊಳ್ಳಲಾಗಿದ್ದು ಸುಮಾರು ಅಂದಾಜು ಮೌಲ್ಯ ೬ಲಕ್ಷದ ೯೫ಸಾವಿರದ ೨೫೩ರೂಪಾಯಿಯಷ್ಟು ಹಣವನ್ನು ಸರ್ಕಾರದ ಬಕ್ಕಸಕ್ಕೆ ಬರುವಂತೆ ಮಾಡಿದ್ದಾರೆ.


೧೮೧ಕೇಸು ದಾಖಲು: ನೀತಿ ಸಂಹಿತೆ ಜಾರಿಯಾದ ಮೇಲೆ ಅಕ್ರಮ ಮದ್ಯ ಮಾರಾಟ ಮತ್ತು ಸಾಗಣಿಕೆ ನಡೆಸುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ೧೮೧ ಪ್ರಕರಣಗಳಲ್ಲಿ ೧೫ ಘೋರ ಪ್ರಕರಣಗಳು ಕಲಂ ೧೫(ಎ) ಕೇಸು ದಾಖಲಿಸಲಾಗಿದ್ದು ಕಲಂ(ಎ) ಅಡಿಯಲ್ಲಿ ೧೫೭ಪ್ರಕರಣಗಳನ್ನು ಹಾಗೂ ಎನ್‌ಡಿಆರ್‌ಎಸ್ ಕಾಯ್ದೆ ಅಡಿ ೨ಪ್ರಕರಣಗಳು ಒಟ್ಟು ೧೮೧ಕೇಸುಗಳನ್ನು ದಾಖಲಿಸಿಕೊಳ್ಳಲಾಗಿದೆ.


ಈ ದಾಳಿಯ ಕಾರ್ಯ ಹಗಲು ರಾತ್ರಿ ಎನ್ನದೇ ಹೊಸನಗರ ತಾಲ್ಲೂಕಿನ ಗ್ರಾಮ-ಗ್ರಾಮಗಳಿಗೆ ಅಬಕಾರಿ ಇಲಾಖೆಯ ಸಿಬ್ಬಂದಿಗಳು ಸುತ್ತಿ ಈ ದಾಳಿ ನಡೆಸಲಾಗಿದೆ. ಎಂದು ಹೇಳಲಾಗಿದೆ.


ಚಿತ್ರ: ಹೊಸನಗರ ತಾಲ್ಲೂಕಿನಲ್ಲಿ ಅಕ್ರಮ ದಸ್ತಾನು ಮಾಡಿರುವ ಮದ್ಯವನ್ನು ವಶ ಪಡಿಸಿಕೊಂಡಿರುವುದು

By admin

ನಿಮ್ಮದೊಂದು ಉತ್ತರ

error: Content is protected !!