ಶಿವಮೊಗ್ಗ,ಏ.29:

ನಗರದ ಓಸಿ ಬಿಡ್ಡರ್ ಸಂದೀಪ್ ಗೆ ಕೇಡುಗಾಲ ಆರಂಭವಾಗಿದೆ. ಬಹಳ ದಿನಗಳ ನಂತರ ಇಂದು ಜೈಲುಪಾಲಾದ್ದಾನೆ. ಶಿವಮೊಗ್ಗ ಡಿವೈಎಸ್ಪಿ ಬಾಲರಾಜ್ ಆತನ ಹೆಡೆಮುರಿ ಕಟ್ಟಿದ್ದಾರೆ.

ನಗರದಾದ್ಯಂತ ಓಸಿ ಆಟ ಕೆಲ ಬಿಡ್ಡರ ಕೈಯಲ್ಲಿತ್ತು. ಸಂದೀಪ್ ಆ ಕೆಲ ಬಿಡ್ಡರ್ ಗಳಲ್ಲಿ ಒಬ್ಬನಾಗಿದ್ದ.
ಓಸಿ ಪ್ರಕರಣ ಮತ್ತು ಚೀಟಿಂಗ್ ಪ್ರಕರಣದಲ್ಲಿ ಸಂದೀಪನನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ. ಪೊಲೀಸ್ ಠಾಣೆಗಳಲ್ಲಿ ಬಹಳ ಬೇಕಾಗಿದ್ದ ಸಂದೀಪ್ ಬಂಧನವೇ ಆಗಿರಲಿಲ್ಲ.
ಈ ಹಿಂದೆ ಡಿವೈಎಸ್ಪಿ ಪ್ರಶಾಂತ್ ಮುನ್ಬೋಳಿ ಹಲವು ಓಸಿಗಳ ಮೇಲೆ ದಾಳಿ ನಡೆಸಿ ಎಫ್ಐಆರ್ ದಾಖಲಿಸಿದ್ದರು. ಆದರೆ ಈಗಿನ ಡಿವೈಎಸ್ಪಿ ಬಾಲರಾಜ್ ಹೆಡಮುರಿಕಟ್ಟಿ ನ್ಯಾಯಾಂಗ ಬಂಧನಕ್ಕೊಳ ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.‌
ವೆಂಕಟೇಶ್ ನಗರದಲ್ಲಿರುವ ಸಂದೀಪ್ ನ ಮನೆಯ ಮೇಲೂ ದಾಳಿ ನಡೆಸಲಾಗಿದೆ.

ಆತನ ಮನೆಯಲ್ಲಿ 21 ವಿದೇಶಿ ಬ್ರ್ಯಾಂಡ್ ನ ಮದ್ಯಗಳು ಪತ್ತೆಯಾಗಿವೆ. ಈತನ ಮೇಲೆ ಡಕಾಯಿತಿ ಪ್ರಕರಣಗಳು ಇದ್ದು ಈ ಪ್ರಕರಣವೂ ಸಹ ಆತನಿಗೆ ಉರುಳಾಗಲಿದೆ ಎಂದು ತಿಳಿದುಬಂದಿದೆ.
ಸಧ್ಯಕ್ಕೆ ಮಾಹಿತಿ ಪ್ರಕಾರ ಸಿಇಎನ್ ಠಾಣೆ ಪೊಲೀಸರು ಸಂದೀಪ್ ನನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ. ಸಧ್ಯಕ್ಕೆ ವಂಚನೆ ಪ್ರಕರಣದಲ್ಲಿ ಸಂದೀಪ ಅಂದರ್ ಆಗಿದ್ದಾನೆ.


ಇಷ್ಟುದಿನ ಸೈಲೆಂಟ್ ಇದ್ದ ಪೊಲೀಸರು ಭರ್ಜರಿಯ ಭೇಟೆಯಾಡಿದ್ದಾರೆ. ಮೂರು ದಿನಗಳ ಹಿಂದೆನೇ ತುಂತುರುವಿನಲ್ಲಿದ್ದ ಸಂದೀಪನ ಬಗ್ಗೆ ಮಾಹಿತಿ ಪಡೆದ ಬಾಲರಾಜ್ ನೇತೃತ್ವದ ಪೊಲೀಸ್ ತಂಡ ಇಂದು ಬರ್ಜರಿ ಬೇಟೆಯಾಡಿದೆ ಎನ್ನಲಾಗಿದೆ
.

By admin

ನಿಮ್ಮದೊಂದು ಉತ್ತರ

error: Content is protected !!