ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಶಿವಮೊಗ್ಗ ಜಿಲ್ಲೆ ಶೇ. ೮೩.೧೩ ಫಲಿತಾಂಶ ಪಡೆಯುವ ಮೂಲಕ ರಾಜ್ಯದಲ್ಲಿ ೮ನೇ ಸ್ಥಾನ ಪಡೆದಿದೆ. ಜಿಲ್ಲೆಯ ಇಬ್ಬರು ವಿದ್ಯಾರ್ಥಿನಿಯರು ಅತಿ ಹೆಚ್ಚು ಅಂಕ ಪಡೆದವರ ಸಾಲಿನಲ್ಲಿದ್ದಾರೆ.
ರೈತನ ಮಗಳು ರಾಜ್ಯಕ್ಕೆ ಸೆಕೆಂಡ್ ರ್ಯಾಂಕ್: ಶಿವಮೊಗ್ಗದ ವಿಕಾಸ ಪಿಯುಸಿ ಕಾಂಪೊಸಿಟ್ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ಅನ್ವಿತಾ ಡಿ.ಎನ್. ಅವರು ೬೦೦ಕ್ಕೆ ೫೯೬ ಅಂಕಗಳನ್ನು ಗಳಿಸಿ, ರಾಜ್ಯಕ್ಕೆ ಎರಡನೆ ರಾಂಕ್ ಪಡೆದಿದ್ದಾರೆ. ರಾಜ್ಯದಲ್ಲಿ ಒಂಭತ್ತು ವಿದ್ಯಾರ್ಥಿಗಳು ೫೯೬ ಅಂಕಗಳನ್ನು ಗಳಿಸಿದ್ದಾರೆ.
ಅನ್ವಿತಾ.ಡಿ.ಎ. ಅವರು ತೀರ್ಥಹಳ್ಳಿ ತಾಲೂಕು ಮಲ್ಲೇಸರ ಗ್ರಾಮದವರು. ತಂದೆ ನಾಗರಾಜ ಅವರು ಕೃಷಿಕರು. ತಾಯಿ ಅನುಸೂಯ. ಮಗಳು ರ್ಯಾಂಕ್ ಪಡೆದ ವಿಚಾರ ತಿಳಿದು ಖುಷಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಅನ್ವಿತಾ.ಡಿ.ಎನ್. ಮಾತನಾಡಿ, ಕಾಲೇಜಿನ ಉಪನ್ಯಾಸಕರು ಬೆಂಬಲವಾಗಿದ್ದರು. ಯಾವುದೆ ಸಂದೇಹಗಳಿದ್ದರೂ ಕೇಳಿದಾಗಲೆ ಅದನ್ನು ಬಗೆಹರಿಸುತ್ತಿದ್ದರು ಎಂದರು.
ಆಯಾ ದಿನದ ಪಾಠಗಳನ್ನು ಅಂದೇ ವರ್ಕ್ ಮಾಡುತ್ತಿದ್ದೆ. ಊರಿನಿಂದ ಓಡಾಡುವುದು ಕ?. ಹಾಗಾಗಿ ವಿಕಾಸ ಕಾಲೇಜಿನ ಹಾಸ್ಟೆಲ್ನಲ್ಲಿದ್ದೆ. ಅಲ್ಲಿಯೂ ಓದುವ ವಾತಾವರಣ ಇದೆ. ಹಾಗಾಗಿ ಓದಲು ತುಂಬಾ ಅನುಕೂಲವಾಯಿತು. ಹೆಚ್ಚು ಅಂಕ ಪಡೆದ ವಿಚಾರ ತಿಳಿದು ಅಪ್ಪ, ಅಮ್ಮ ತುಂಬಾ ಖುಷಿಯಾಗಿದ್ದಾರೆ. ಮುಂದೆ ಯುಪಿಎಸ್ಸಿ ಪರೀಕ್ಷೆ ತೆಗೆದುಕೊಳ್ಳಬೇಕು ಎಂಬ ಯೋಚನೆ ಇದೆ ಎಂದು ತಿಳಿಸಿದರು.
ನಗರದ ಆದಿಚುಂಚನಗಿರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಸ್ಫೂರ್ತಿ ಎಂ.ಎಸ್. ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಪಡೆದಿದ್ದು, ರಾಜ್ಯಕ್ಕೆ ೭ನೇ ರ್ಯಾಂಕ್ ಪಡೆದಿದ್ದಾರೆ. ಇವರು ಹೊಳೆಹಟ್ಟಿಯ ಸುರೇಶ್ ಆರ್. ಸುಜಾತ ಕೆ. ಇವರ ಪುತ್ರಿ.
ಶಿವಮೊಗ್ಗದ ಕುವೆಂಪು ನಗರದ ಎಸ್.ವಿ.ಇ.ಟಿ. ಸ್ವತಂತ್ರ ಪಿಯು ಕಾಲೇಜಿನ ನೇಹಶ್ರೀ ಅವರು ೬೦೦ ಅಂಕಗಳಿಗೆ ೫೯೫ ಅಂಕ ಗಳಿಸಿದ್ದಾರೆ. ರಾಜ್ಯಕ್ಕೆ ಮೂರನೇ ರಾಂಕ್ ಪಡೆದಿದ್ದಾರೆ. ರಾಜ್ಯದಲ್ಲಿ ಒಟ್ಟು ೧೩ ವಿದ್ಯಾರ್ಥಿಗಳು ಈ ೫೯೫ ಅಂಕ ಗಳಿಸಿದ್ದಾರೆ. ವಿ?ಯ ತಿಳಿಯುತ್ತಿದ್ದಂತೆ ಎಸ್.ವಿ.ಇ.ಟಿ ಸ್ವತಂತ್ರ ಪಿಯು ಕಾಲೇಜಿನಲ್ಲಿ ಉಪನ್ಯಾಸಕರು, ಸಿಬ್ಬಂದಿ ನೇಹಶ್ರೀ ಅವರಿಗೆ ಅಭಿನಂದನೆ ಸಲ್ಲಿಸಿದರು.
ನೇಹಶ್ರೀ ಅವರ ತಂದೆ ಜಯಂತ್ಕುಮಾರ್ ಅವರು ಬಿ.ಆರ್.ಪಿಯ ರಾಷ್ಟ್ರೀಯ ಪಿಯು ಕಾಲೇಜಿನ ಎಸ್ಡಿಎ ಆಗಿದ್ದಾರೆ. ತಾಯಿ ಚಂದನಾ.ಎಸ್.ಬಿ.
ನೇಹಶ್ರೀ ಅವರ ತಂದೆ ಜಯಂತ್ಕುಮಾರ್ ಮಾತನಾಡಿ, ನೇಹಶ್ರೀ ಯಾವುದೇ ಒತ್ತಡವಿಲ್ಲದೆ ನಿತ್ಯ ಓದುತ್ತಿದ್ದಳು. ಅವರ ಶಿಕ್ಷಕರಿಗೆ ಮೊದಲು ಧನ್ಯವಾದ ತಿಳಿಸುತ್ತೇನೆ. ಮುಂದೆ ಸಿಎ ಓದಬೇಕು ಅಂದುಕೊಂಡಿದ್ದಾಳೆ ಎಂದರು.