, ಏ.೦೫:
ತಾಲ್ಲೂಕಿನ ಉಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಗೋಮಾಳ ಸೇರಿದಂತೆ ಬೇರೆಬೇರೆ ಸರ್ಕಾರಿ ಜಮೀನಿನ ಒತ್ತುವರಿ ನಡೆಯುತ್ತಿದ್ದು, ಜಿಲ್ಲಾಧಿಕಾರಿಗಳು, ಕಂದಾಯ ಇಲಾಖೆ ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಒತ್ತುವರಿ ತಡೆದು ಗೋಮಾಳವನ್ನು ಗ್ರಾಮಕ್ಕೆ ಉಳಿಸಿ ಕೊಡಬೇಕು ಎಂದು ಗ್ರಾಮಸ್ಥರಾದ ರಾಜು ಗೌಡ ಸಿರಗುಪ್ಪೆ ಒತ್ತಾಯಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಿರಗುಪ್ಪೆ ಗ್ರಾಮದ ಸ.ನಂ. ೧೩ರಲ್ಲಿ ೪೦ಎಕರೆಗೂ ಅಧಿಕ ಗೋಮಾಳವಿದೆ. ಗೋಮಾಳದಲ್ಲಿ ೬.೧೮ ಎಕರೆ ಮಂಜೂರಾಗಿದ್ದು ಬಿಟ್ಟರೆ ಉಳಿದ ಜಾಗವನ್ನು ಗ್ರಾಮಸ್ಥರು ಜೋಪಾನ ಮಾಡಿಕೊಂಡು ಬಂದಿದ್ದಾರೆ ಎಂದು ಹೇಳಿದರು.
ಸರ್ವೇ ನಂ. ೧೩ರಲ್ಲಿರುವ ಜಾಗದಲ್ಲಿ ಮಂಜಪ್ಪ ಮತ್ತು ಗಣಪತಿ ಎಂಬುವವರು ಒತ್ತುವರಿ ಪ್ರಯತ್ನ ನಡೆಸುತ್ತಿದ್ದು, ಜಾಗವನ್ನು ಸಮತಟ್ಟು ಮಾಡಿ ಬೇಲಿ ಹಾಕುವ ಪ್ರಯತ್ನ ನಡೆಸಿದ್ದಾರೆ. ಇದರ ಜೊತೆಗೆ ವೆಂಕಟೇಶ್ ಮತ್ತು ಈಶ್ವರ ಎಂಬುವವರು ಸಹ ಒತ್ತುವರಿಗೆ ಮುಂದಾಗಿದ್ದಾರೆ. ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ಒತ್ತುವರಿಯನ್ನು ತಡೆದಿದ್ದೇವೆ ಎಂದರು.
ಖಾಲಿ ಇರುವ ಜಮೀನಿಗೆ ಬೇಲಿ ಹಾಕುವವರ ಸಂಖ್ಯೆ ಹೆಚ್ಚುತ್ತಿದೆ. ಆದ್ದರಿಂದ ಸರ್ವೇ ನಂ. ೧೩ ಮತ್ತು ೬೨ರ ಗೋಮಾಳ ಮತ್ತು ಜಂಜರು ಜಮೀನನ್ನು ಯಾವುದೇ ಕಾರಣಕ್ಕೂ ಬಗರ್‌ಹುಕುಂ ಅಡಿ ಬೇರೆಯವರ ಹೆಸರಿಗೆ ಸಕ್ರಮಗೊಳಿಸಬಾರದು ಎಂದು ಒತ್ತಾಯಿಸಿದರು.