ಪರಿಶಿಷ್ಟ ಜಾತಿ, ಪಂಗಡಗಳಿಗೆ ಒಳಮೀಸಲಾತಿಯನ್ನು ಹೆಚ್ಚಿಸುವ ಬಗ್ಗೆ ರಾಜ್ಯ ಸರ್ಕಾರ ಕೈಗೊಂಡಿರುವ ನಿರ್ಧಾರವನ್ನು ಖಂಡಿಸಿ ಬಂಜಾರ ಸಮುದಾಯದವರು ಬುಧವಾರವೂ ಪ್ರತಿಭಟನೆ ನಡೆಸಿದರು. ಶಿವಮೊಗ್ಗದ ಗಾಡಿಕೊಪ್ಪದ ಬಂಜಾರ ಸಮುದಾಯದವರು ರಸ್ತೆ ತಡೆ ನಡೆಸಿ ಧರಣಿ ನಡೆಸಿದರು ಪ್ರತಿಭಟನಾಕಾರರು ಟಯರ್‌ಗಳಿಗೆ ಬೆಂಕಿ ಹಚ್ಚಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಶಿವಮೊಗ್ಗ-ಸಾಗರ ರಾ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ ರಸ್ತೆ ಮಧ್ಯೆ ಟಯರ್‌ಗೆ ಬೆಂಕಿ ಹಚ್ಚಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅಷ್ಟೇ ಅಲ್ಲದೆ  ಬಂಜಾರ ಜನಾಂಗದ ಶಾಸಕರು ಹಾಗೂ ಸಂಸದರ ಅಣುಕು ಶವ ಪ್ರದರ್ಶನವನ್ನು ಮಾಡಿ. ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಬಂಜಾರರ ಆಕ್ರೋಶಕ್ಕೆ ಕಾರಣವೇನು.?

15% ಇದ್ದ ಎಸ್ಸಿ ಮೀಸಲನ್ನು 17 ಕ್ಕೆ ಹೆಚ್ಚಿಸಿದೆ. ಸರ್ಕಾರ 17% ಇದರಿ೦ದ ಎಲ್ಲ ಎಸ್ಸಿಗಳಿಗೂ 17% ಮೀಸಲು ಸಿಗಬೇ ಕಿತ್ತು. ಆದರೆ ಒಳ ಮೀಸಲಾತಿ ಕಲ್ಪಿಸಿದ್ದರಿಂದ ಬಂಜಾರರಿಗೆ 17% ಬದಲು ಕೇವಲ 4.5% ಮೀಸಲಾತಿ ಸಿಗುತ್ತದೆ. ಇದು ಆ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಗಾಡಿಕೊಪ್ಪ ತಾಂಡದ ಗ್ರಾಮಸ್ಥರು ಸರ್ಕಾರದ ವಿರುದ್ಧ  ಆಕ್ರೋಶ ಹೊರಹಾಕಿದ್ದಾರೆ. ಹಾಗೂ  ಒಳ ಮೀಸಲಾತಿ ಹಿಂಪಡೆಯುವವರೆಗೂ  ತಾಂಡಗಳಲ್ಲಿ ಎಲ್ಲಾ ಪಕ್ಷದ ರಾಜಕೀಯ ನಾಯಕರಿಗೆ ಪ್ರವೇಶ ನಿಷೇಧಿಸಲಾಗಿದೆ.

ತಾಂಡಾದಲ್ಲಿ ಯಾವ ಪಕ್ಷದ ಎಮ್​.ಎಲ್.​ಎ ಹಾಗೂ ನಾಯಕರನ್ನು ಒಳಗೆ ಬಿಡುವುದಿಲ್ಲ. ಬಿಜೆಪಿ ಸರಕಾರ ಲಂಬಾಣಿ ಸಮುದಾಯದವರಿಗೆ ಅನ್ಯಾಯ ಮಾಡಿದೆ. ಚುನಾವಣೆಯಲ್ಲಿ ತಕ್ಕ ಪಾಠ ಕಲಿಸೋದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

 ಈ ಸಂದರ್ಭದಲ್ಲಿ  ಗಾಡಿಕೊಪ್ಪ ತಾಂಡದ ನಾಯಕ್, ಡಾವ್, ಕಾರ್ ಭಾರಿ, ಮತ್ತು ತಾಂಡಾದ ಗ್ರಾಮಸ್ಥರು ಮಹಿಳೆಯರು ಮಕ್ಕಳು ಉಪಸ್ಥಿತರಿದ್ದರು

By admin

ನಿಮ್ಮದೊಂದು ಉತ್ತರ

You missed

error: Content is protected !!