
ಹುಡುಕಾಟದ ವರದಿ: ಸ್ವಾಮಿ
ಶಿಕಾರಿಪುರ,ಮಾ.28:
ಶಿಕಾರಿಪುರದಲ್ಲಿ ನಿನ್ನೆ ನಡೆದ ನಿಕಟಪೂರ್ವ ಮುಖ್ಯಮಂತ್ರಿ, ಬಿಎಸ್ ಯಡಿಯೂರಪ್ಪ ಅವರ ಮನೆಯ ಮೇಲಿನ ಕಲ್ಲುತೂರಾಟ ಹಾಗೂ ಬಂಜಾರ ಸಮಿತಿ ಸಂಘಟನೆಗಳು ನಡೆಸುತ್ತಿರುವ ರಾಜ್ಯವ್ಯಾಪಿ ಹೋರಾಟಗಳಿಂದ ಭಾರತೀಯ ಜನತಾ ಪಕ್ಷಕ್ಕೆ ಈ ಬಾರಿ ಚುನಾವಣೆಯಲ್ಲಿ ಬಲವಾದ ಪೆಟ್ಟು ಬೀಳಲಿದೆಯೇ ಎಂಬ ಪ್ರಶ್ನೆಗಳು ಕೇಳಿಬಂದಿವೆ.

ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಯಡಿಯೂರಪ್ಪ ಅವರದೇ ಸರಹದ್ದಿನ ಹಾಗೂ ಅವರೇ ಸೂಕ್ತರೆಂಬ ಆಯ್ಕೆಯ ಸಾಕಷ್ಟು ನಿದರ್ಶನಗಳು ಇದ್ದು ಪ್ರಸಕ್ತ ವರ್ಷ ನಾನು ಚುನಾವಣೆಗೆ ನಿಲ್ಲುವುದಿಲ್ಲ. ನನ್ನ ಪುತ್ರ ಬಿ ವೈ ವಿಜಯೇಂದ್ರ ಅವರು ಇಲ್ಲಿ ಸ್ಪರ್ಧಿಸುತ್ತಾರೆ ಎಂದು ಹೇಳಿದ್ದರು.
ಪ್ರಸಕ್ತ ಈ ಚುನಾವಣೆಯಲ್ಲಿ ಬಂಜಾರ ಸಮಾಜದ ಆಕ್ರೋಶ ಚುನಾವಣಾ ಮತ ಗಳಿಕೆಯ ಹಂತದಲ್ಲಿ ಭಾರಿ ದೊಡ್ಡ ಅಂತರವನ್ನು ತರುವ ಸಾಧ್ಯತೆಗಳಿವೆ ಎಂಬ ಆತಂಕ ಬಿಜೆಪಿ ಹಾಗೂ ಯಡಿಯೂರಪ್ಪ ಅವರ ಕಡೆ ಕಾಣುತ್ತಿದೆ ಎನ್ನಲಾಗಿದೆ.
ಶಿಕಾರಿಪುರ ಹಾಗೂ ಶಿವಮೊಗ್ಗ ಗ್ರಾಮಾಂತರದಲ್ಲಿ ಹೆಚ್ಚಾಗಿ ಬಂಜಾರರು ವಾಸವಾಗಿದ್ದಾರೆ.

ಶಿಕಾರಿಪುರದಲ್ಲಿ ಸುಮಾರು 27 ಸಾವಿರದಷ್ಟು ಬಂಜಾರ ಮತದಾರರು ಇದ್ದು ಈ ಬಾರಿಯ ಚುನಾವಣೆಯಲ್ಲಿ ಹೈಯೆಸ್ಟ್ ಲೀಡ್ ಗಳ ಲೆಕ್ಕಾಚಾರ ಸೋಲುವುದೇ..? ಹಾಗೆ ಹೆಚ್ಚು ಮತಗಳು ಇಲ್ಲಿದ್ದರೂ ಸಹ ಲಿಂಗಾಯಿತ ಸಮುದಾಯದ ಉಪ ಪಂಗಡದ ಲೆಕ್ಕಗಳಲ್ಲಿ ಯಡಿಯೂರಪ್ಪ ಅವರ ಜನಾಂಗದ ಮತಗಳ ಸಂಖ್ಯೆ ಅತ್ಯಂತ ಕಡಿಮೆ ಎನ್ನಲಾಗುತ್ತದೆ.
ಹಾಗಾಗಿಯೇ ಇರಬೇಕು ಕಲ್ಲು ತೂರಾಟಕ್ಲೆ ವಿಷಾದ ವ್ಯಕ್ತಪಡಿಸಿದ ಯಡಿಯೂರಪ್ಪ ಯಾವ ಕೇಸೂ ಬೇಡ. ನಾ ಬಂದು ಮಾತಾಡುತ್ತೇನೆ ಅಂದ್ರು. ಸಚಿವ ಆರಗ ಜ್ಞಾನೇಂದ್ರ ಅವರು ಪೊಲೀಸರಿಗೆ ಹಲ್ಲೆ ಮಾಡಿದ್ರೆ ಬಿಡೊಲ್ಲ ಅಂದ್ರು. ಒಟ್ಟಾರೆ ಬಹುದೊಡ್ಡ ಕಾಂಪ್ಲಿಕೇಟೆಡ್ ವಿಷಯ ಇದು

ಇಡೀ ಲಿಂಗಾಯಿತ ಸಮುದಾಯವನ್ನು ಒಗ್ಗೂಡಿಸಬಹುದು ಎಂಬ ಹಿರಿಮೆ ಯಡಿಯೂರಪ್ಪ ಅವರ ಕಡೆಯಿಂದ ಇದ್ದರೂ ಸಹ ಅದನ್ನು ಸಂಪೂರ್ಣವಾಗಿ ನಂಬಲು ಸಾಧ್ಯವಿಲ್ಲ. ಏಕೆಂದರೆ ಲಿಂಗಾಯಿತ ಉಪ ಸಮುದಾಯದ ಪ್ರಬಲ ಜನಾಂಗದ ವ್ಯಕ್ತಿ ಇಲ್ಲಿ ಸ್ಪರ್ಧಿಸಿದರೆ ಲಿಂಗಾಯತ ಸಮುದಾಯದ ಮತಗಳು ಸಹ ಇಲ್ಲಿ ಕೈ ಕೊಡುವ ಸಾಧ್ಯತೆಗಳಿವೆ.
ಅಂದಹಾಗೆ ಕಾಂಗ್ರೆಸ್ ಪಕ್ಷದ ಅತ್ಯಂತ ಸನಿಹದ ಮತಗಳೆಂದರೆ ಅಲ್ಪಸಂಖ್ಯಾತರು, ದಲಿತರು ಹಾಗೂ ಹಿಂದುಳಿದ ವರ್ಗದವರು ಎನ್ನಲಾಗುತ್ತದೆ. ಆದರೆ, ಈ ಎಲ್ಲಾ ಮತಗಳನ್ನು ಶಿಕಾರಿಪುರದಲ್ಲಿ ಯಡಿಯೂರಪ್ಪ ಪಡೆಯುವಲ್ಲಿ ಸಫಲರಾಗಿದ್ದರು. ಅದು ಈ ಬಾರೀ ಆಗುತ್ತಾ?

ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಇಂತಹ ನಿರ್ಧಾರ ಕೈಗೊಂಡಿರುವುದು ಈಗ ಮೀಸಲಾತಿಯನ್ನು ಕಡಿಮೆ ಮಾಡಿರುವುದು ಈ ಬಹುದೊಡ್ಡ ಆತಂಕಕ್ಕೆ ಕಾರಣವಾಗಿದೆ.
ಇದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ವಿಧಾನಸಭಾ ಚುನಾವಣೆಯ ಈ ಹೊತ್ತಿನಲ್ಲಿ ಎತ್ತರಮಟ್ಟಿಗೆ ಭಾರತೀಯ ಜನತಾ ಪಕ್ಷಕ್ಕೆ ಲಾಭವಾಗಬಹುದು ಎಂಬ ಪ್ರಶ್ನೆ ಸಾರ್ವಜನಿಕವಾಗಿ ಸಾರ್ವಜನಿಕವಾಗಿ ಕೇಳಿಬಂದಿದೆ.
ಹಾಗಾಗಿಯೇ ಇರಬೇಕು ಕಲ್ಲು ತೂರಾಟಕ್ಲೆ ವಿಷಾದ ವ್ಯಕ್ತಪಡಿಸಿದ ಯಡಿಯೂರಪ್ಪ ಯಾವ ಕೇಸೂ ಬೇಡ. ನಾ ಬಂದು ಮಾತಾಡುತ್ತೇನೆ ಅಂದ್ರು. ಸಚಿವ ಆರಗ ಜ್ಞಾನೇಂದ್ರ ಅವರು ಪೊಲೀಸರಿಗೆ ಹಲ್ಲೆ ಮಾಡಿದ್ರೆ ಬಿಡೊಲ್ಲ ಅಂದ್ರು. ಒಟ್ಟಾರೆ ಬಹುದೊಡ್ಡ ಕಾಂಪ್ಲಿಕೇಟೆಡ್ ವಿಷಯ ಇದು
