ಪ್ರತಿಭಾನ್ವಿತರಿಗೆ, ಕೊರೊನಾ ವಾರಿಯರ್ಸ್ ಗೆ ಸನ್ಮಾನ
ಶಿವಮೊಗ್ಗ, ಅ.02:
ಅಹಿಂಸೆ ಮೂಲಕ ನಾಡಿಗೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮರ ಅಹಿಂಸಾ ತತ್ವ ಈಗ ಎಲ್ಲಿ ಉಳಿದಿದೆ. ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರ, ಹಿಂಸಾಚಾರದಂತಹ ದೃಶ್ಯಗಳು ಸರ್ವೇ ಸಾಮಾನ್ಯವಾಗಿವೆ. ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ತತ್ವ ಆದರ್ಶಗಳನ್ನು ಇಂದಿನ ಮಕ್ಕಳು ಮೈಗೂಡಿಸಿಕೊಳ್ಳುವ ಅಗತ್ಯವಿದೆ. ಮಕ್ಕಳೇ ಮುಂದಿನ ಪ್ರಜೆಗಳಾಗುವುದರಿಂದ ಅಂದಿನ ದಿನದಲ್ಲಾದರೂ ಅಹಿಂಸಾ ಪಾಲನೆ ಅಳವಡಿಕೆಯಾಗಲಿ ಎಂದು ಚುಂಚಾದ್ರಿ ಮಹಿಳಾ ವಿವಿದ್ದೊದ್ದೇಶ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷೆ ಶಾರದಾ ಶೇಷಗಿರಿ ಗೌಡ ತಿಳಿಸಿದರು.
ಅವರು ಇಂದು ಶಿವಮೊಗ್ಗ ಗಾರ್ಡನ್ ಏರಿಯಾ ಮೂರನೇ ತಿರುವಿನ ಸಹಕಾರ ಸಂಘ ಕಛೇರಿಯಲ್ಲಿ ರಾಷ್ಟ್ರ ಪಿಿತ ಮಹಾತ್ಮಾ ಗಾಂಧೀ ಹಾಗೂ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜನುಮದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾನವಹಕ್ಕುಗಳ ಕಮಿಟಿ ರಾಜ್ಯಾಧ್ಯಕ್ಷ ಕೆ. ನಾಗರಾಜ್ ಅವರು ಗಾಂಧೀಜಿ ಹಾಗೂ ಶಾಸ್ತ್ರೀ ಅವರ ಭಾವಚಿತ್ರಕ್ಕೆ ಪುಷ್ಷ ಸಮರ್ಪಿಸುವ ಮೂಲಕ ಕಾರ್ಯಕ್ರಮನ್ನು ಉದ್ಘಾಟಿಸಿದರು.

ಉದ್ಘಾಟನೆ ಕ್ಷಣ


ಕಾರ್ಯಕ್ರಮದಲ್ಲಿ ಪ್ರಕಾಶ್ ಕುಶನ್ಸ್ ಮಾಲಿಕ ಪೂಸ್ವಾಮಿ, ಪತ್ರಕರ್ತ ಎಸ್.ಕೆ. ಗಜೇಂದ್ರಸ್ವಾಮಿ, ಉಪಾಧ್ಯಕ್ಷೆ ಗಿರಿಜಾ ಕುಮಾರ್, ಸಿಇಓ ಅನಿತಾ, ನಿರ್ದೇಶಕರಾದ ಸುಜಾತ ,ನರಸಮ್ಮ, ಆಶಾ ,ಹೇಮಾ, ಉದಯ ಕುಮಾರಿ ಹಾಗೂ ಇತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿಶೇಷವಾಗಿ ಸ್ಯಾನ್ ಜೋಸೆಫ್ ಅಕ್ಷರ ಧಾಮ ವಿದ್ಯಾರ್ಥಿನಿ ಎಸ್ ಎಸ್ ಎಲ್ ಸಿಯಲ್ಲಿ ಜಿಲ್ಲೆಗೆ 2 ಸ್ಥಾನ ಪಡೆದ ಸಹಕಾರಿ ಸದಸ್ಯೆ ವಿಜಯ ಶಿವಕುಮಾರ್ ಪುತ್ರಿ ಅನ್ನಪೂರ್ಣ ಹಾಗೂ ಆದಿಚುಂಚನಗಿರಿ ದ್ವಿತೀಯ ಪಿಯುದಲ್ಲಿ ಶೇ. 96.1%ಪಡೆದ ಸದಸ್ಯೆ ಶ್ಯಾಮಲಾ ಸುದೀಶ್ ಅವರ ಪುತ್ರಿ ಯೋಗಿತಾ. ಎಸ್. ಗೌಡ, ಮೆಗ್ಗಾನ್ ಆಸ್ಪತ್ರೆಯಲ್ಲಿನ ಕೊರೋನ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ನೇತ್ರ ಗೌಡ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ನಂತರ ಅಗಸವಳ್ಳಿ ಗ್ರಾಮದ ಸದಸ್ಯರಿಗೆ ಕೊರೊನಾ ಕುರಿತು ಮಾಹಿತಿ ಹಾಗೂ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.ಈಗಾಗಲೆ ಶಾಂತಿಪುರ ,ಅನುಪಿನಕಟ್ಟೆ, ಗುಡ್ಡದ ಹರಕೆರೆ ,ತ್ಯಾವರೆಕೊಪ್ಪ, ಬಿರ್ಪಿನ್ ಕೊಪ್ಪ ,ಸಿದ್ಲಿಪುರ ,ಆಲೂರು ಅನುಪಿನಕಟ್ಟೆ, ಗ್ರಾಮದ ಸ್ವಸಹಾಯ ಸಂಘಗಳ ಗುಂಪುಗಳಿಗೆ ಕೋವಿಡ್ 19 ರ ಬಗ್ಗೆ ಮಾಹಿತಿ ನೀಡಲಾಯಿತು.. ಸಹಕಾರಿಯ ಅಧ್ಯಕ್ಷರು, ನಿರ್ದೇಶಕರುಗಳು ಭಾಗವಹಿಸಿದ್ದರು.

ಗಣ್ಯರಿಗೆ ಸನ್ಮಾನ

By admin

ನಿಮ್ಮದೊಂದು ಉತ್ತರ

error: Content is protected !!