ಶಿವಮೊಗ್ಗ,ಮಾ.19:

ನಗರದಲ್ಲಿ ನಿನ್ನೆ ಸಂಜೆ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಹಾಗೂ ರೋಡ್ ಶೋ ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಚಾಲನೆ ನೀಡಿದರು.
ಶಿವಮೊಗ್ಗದ ರಾಮಣ್ಣ ಶ್ರೇಷ್ಠಿ ಪಾರ್ಕ್ ನ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಜೋಶಿ ಮತ್ತು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ರೋಡ್ ಶೋ ಆರಂಭಿಸಿದರು.


ರಾಮಣ್ಣ ಶ್ರೇಷ್ಟಿ ಪಾರ್ಕ್ ನಿಂದ ಫ್ರೀಡಂ ಪಾರ್ಕ್ ವರೆಗೆ ಸಾಗಲಿರೋ ರೋಡ್ ಶೋ ನಲ್ಲಿ ರೋಡ್ ಶೋನಲ್ಲಿ ಕೀಲು ಗೊಂಬೆ, ಚಂಡೆ ಹಾಗೂ ಡೊಳ್ಳು ತಂಡಗಳು ಭಾಗಿದ್ದವು. ರೋಡ್ ಶೋ ನಲ್ಲಿ ಬಿಜೆಪಿ ಮುಖಂಡರು, ಸಾವಿರಾರು ಕಾರ್ಯಕರ್ತರು ಭಾಗಿದ್ದರು.
ಜೋಶಿ ಹೇಳಿಕೆ
ಎಲ್ಲೆಡೆ ಯಾತ್ರೆಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಜನ ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂದು ಬಯಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಮಾಧ್ಯಮದೊಂದಿಗೆ ಮಾತನಾಡಿ, ಸಂಸತ್ ಕಲಾಪ ನಡೆಯಲು ಕಾಂಗ್ರೆಸ್‌ ಬಿಡುತ್ತಿಲ್ಲ. ರಾಹುಲ್ ಗಾಂಧಿ ವಿದೇಶದಲ್ಲಿ ಭಾರತದ ಮರ್ಯಾದೆಯನ್ನು ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ. ಸದನದ ಗೌರವಾನ್ವಿತ ಪೀಠಾಸೀನಾಧಿಕಾರಿಯಾದ ಸ್ಪೀಕರ್ ರೊಂದಿಗೆ ಕಲಹಕ್ಕೆ ನಿಲ್ಲುತ್ತಾರೆ ಎಂದು ದೂರಿದರು.
ಅವರು ಮಾತನಾಡುವಾಗ ಮೈಕ್ ಆಫ್ ಆಗುತ್ತದೆ ಎಂಬುದು ಸುಳ್ಳು, ಯಾರು ಮಾತನಾಡುತ್ತಾರೋ ಆಗ ಮೈಕ್ ಆನ್ ಆಗೇ ಇರುತ್ತದೆ. ಇದು ನಾವು ಮಾಡಿದ ವ್ಯವಸ್ಥೆಯಲ್ಲ. ಅವರೇ ಮಾಡಿದ್ದ ಪದ್ಧತಿ. ಅವರು ಕಳೆದ 10 ವರ್ಷದಿಂದ ಅಧಿಕಾರವಿಲ್ಲದೆ ಆತಂಕಗೊಂಡಿದ್ದಾರೆ ಎಂದು ದೂರಿದರು.


ಹೀಗಾಗಿ ಸದನದ ಕಲಾಪದಲ್ಲಿ ಅನಗತ್ಯವಾಗಿ ಗೊಂದಲ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ದೇಶದ ಜನತೆ ಇದನ್ನು ಗಮನಿಸುತ್ತಿದ್ದಾರೆ ಎಂದು ಜೋಶಿ ಹೇಳಿದರು.

ಈ ಸಂದರ್ಭದಲ್ಲಿ ಶಾಸಕ ಡಿಎಸ್ ಅರುಣ್, ಚನ್ನಚಸಪ್ಪ ಹಾಗೂ ಇತರರಿದ್ದರು

ಅತ್ತ ಮಾಜಿ ಸಿಎಂ ಯಡಿಯೂರಪ್ಪ, ಸಂಸದ ರಾಘವೇಂದ್ರ ಅವರು ಒಂದು ಸರ್ಕಾರಿ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿಜಿಯಾಗಿದ್ದರೆ, ಇತ್ತ ಈಶ್ವರಪ್ಪ ಹಾಗೂ ಅವರ ಪುತ್ರ ಕಾಂತೇಶ್ ಬಿಜಿಯಾಗಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!