ಶಿವಮೊಗ್ಗ,ಮಾ.18:
ನಗರದ ಸಾರಿಗೆ ಸಂಚಾರಿ ಬಸ್ ಗಳಲ್ಲಿ ಕೆಲ ಕಿಡಿಗೇಡಿ ಮಹಿಳಾಮಣಿಗಳು ಮಹಿಳೆಯರ ವ್ಯಾನಿಟಿ ಬ್ಯಾಗ್ ನಲ್ಲಿರುವ ಮೊಬೈಲ್ ಸೇರಿದಂತೆ ಹಲವು ವಸ್ತುಗಳನ್ನು ಕಳ್ಳತನ ಮಾಡುತ್ತಿರುವ ಆರೋಪ ವ್ಯಾಪಕವಾಗಿ ಕೇಳಿ ಬಂದಿದೆ.
ಶಿವಮೊಗ್ಗದ ನಗರ ಸಾರಿಗೆ ಬಸ್ ಗಳ ಈ ಆರೋಪಕ್ಕೆ ಕಾರಣ ಅಲ್ಲಿನ ಸಿಬ್ಬಂದಿಗಳೇ ಆಗಿದ್ದಾರೆ ಎಂಬುದು ಇಲ್ಲಿ ವಿಶೇಷ ಏಕೆಂದರೆ ಮೊನ್ನೆಯಷ್ಟೇ ನಡೆದ ಘಟನೆ ಒಂದರ ಬಗ್ಗೆ ನಗರ ಸಾರಿಗೆ ಬಸ್ ಚಾಲಕರು ಹಾಗೂ ನಿರ್ವಾಹಕರುಗಳೊಂದಿಗೆ “ತುಂಗಾತರಂಗ” ಪತ್ರಿಕೆ ಮಾತನಾಡಿದಾಗ ಇಂತಹ ವ್ಯವಹಾರ ಕಳ್ಳದಂದೆ ಸಾಕಷ್ಟು ದಿನಗಳಿಂದ ನಡೆಯುತ್ತಿದೆ ಜನ ಅವರವರ ವಸ್ತುಗಳನ್ನು ಸರಿಯಾಗಿ ನೋಡಿಕೊಳ್ಳಬೇಕು ಬಸ್ ಗಳು ತುಂಬಿದಾಗ ಇಂತಹ ದಂಧೆ ನಡಿಯುತ್ತಿದ್ದು ಹೆಣ್ಣು ಮಕ್ಕಳು ಇರುವ ಕಡೆ ಇಂತಹ ಕಳ್ಳತನ ಹೆಚ್ಚಾಗುತ್ತಿರುವುದನ್ನು ಗಮನಿಸಿದರೆ ಇದು ಕೆಳ ಹೆಣ್ಣು ಮಕ್ಕಳ ಕಿತಾಪತಿಯೇ ಹೌದು ಎಂದು ಹೇಳುತ್ತಾರೆ.
ಮೊನ್ನೆ ಶಿಕ್ಷಕರು ವಿನೋಬನಗರದಿಂದ ಬಸ್ ನಿಲ್ದಾಣಕ್ಕೆ ಬರುವಷ್ಟರಲ್ಲಿ ಅವರ ಬ್ಯಾಂಕ್ ನಲ್ಲಿದ್ದ ನಗಧಿನ ಪರ್ಸನ್ನು ದೋಚಲಾಗಿತ್ತು. ಈ ವಿಚಾರವಾಗಿ ಚರ್ಚಿಸಿದಾಗ ಮಹಿಳಾಮಣಿಯರ ಕೈವಾಡ ಹೆಚ್ಚಾಗಿರುವುದು ಸ್ಪಷ್ಟವಾಗಿ ಅರ್ಥವಾಗುತ್ತಿದೆ ಸಾಕಷ್ಟು ಜನ ಶಿವಮೊಗ್ಗ ಜಯನಗರ ದೊಡ್ಡಪೇಟೆ ಠಾಣೆಗೆ ಇಂತಹ ಆರೋಪವನ್ನು ಮಾಡುತ್ತಿದ್ದಾರೆ ಆದರೆ ಇಲ್ಲಿ ದೂರುಗಳನ್ನು ನೀಡುತ್ತಿಲ್ಲ. ಏಕೆಂದರೆ ಆರೋಪಿಯನ್ನು ಆರೋಪಿಗಳನ್ನು ಪತ್ತೆ ಹಚ್ಚುವುದು ಅಷ್ಟೊಂದು ಸುಲಭವಲ್ಲ ಸಿಟಿ ಬಸ್ಗಳಲ್ಲಿ ಸಂಚರಿಸುವವರು ಜಾಗೃತರಾಗಿರುವುದು ಅತ್ಯಗತ್ಯ. ಅಂತಹ ಆರೋಪದ ಕಳ್ಳರು ಸಿಕ್ಕಿ ಬಿದ್ದರೆ ಕೂಡಲೇ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಎಂದು ಇಲಾಖೆ ತಿಳಿಸಿದೆ.
ಒಟ್ಟಾರೆ ಸಿಟಿ ಬಸ್ಗಳಲ್ಲಿ ಹೆಚ್ಚಿರುವ ಈ ಕಳ್ಳ ದಂದೆಯನ್ನು ನಿಲ್ಲಿಸಲು ಬಸ್ಗಳಲ್ಲಿ ಸಂಚರಿಸುವವರು ಜಾಗೃತರಾಗಿ ಕಳ್ಳರನ್ನು ಹಿಡಿದು ಬಡಿಸುವ ಕೆಲಸಕ್ಕೆ ಮುಂದಾಗಬೇಕಿದೆ ಅಲ್ಲವೇ