ಕುವೆಂಪು ವಿವಿ ಪ್ರಥಮ ಸೆಮಿಸ್ಟರ್ ಫಲಿತಾಂಶದ ಗೊಂದಲ- ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳು ಬರಿಗೈಯಲ್ಲಿ ವಾಪಸ್


ಶಿವಮೊಗ್ಗ,ಮಾ.13:

ಕುವೆಂಪು ವಿಶ್ವವಿದ್ಯಾಲಯದ ಪದವಿ ಪ್ರಥಮ ಸೆಮಿಸ್ಟರ್ ನ ರಿಪೀಟರ್ಸ್ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಬಂದಾಗ ಅವಕಾಶ ಸಿಗದೆ ವಾಪಸ್ ಹೋದ ಘಟನೆ ನಿನ್ನೆ ವಿವಿ ವ್ಯಾಪ್ತಿಯ ಕಾಲೇಜುಗಳಲ್ಲಿ ನಡೆದಿದೆ.


ಪ್ರಥಮ ಸೆಮಿಸ್ಟರ್ ನ ಡಿಜಿಟಲ್ ಫ್ಲ್ಯೂಯೆನ್ಸಿ ( 10961), ಫೈನಾನ್ಸಿಯಲ್ ಅಕೌಂಟಿಂಗ್ (32121), ಫಂಡಾಮೆಂಟಲ್ ಆಫ್ ಬ್ಯುಸಿನೆಸ್ ಅಕೌಂಟಿಂಗ್ (33122) ವಿಷಯಗಳ ಪರೀಕ್ಷೆ ಇತ್ತು.

ರಿಪಿಟರ್ಸ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಿದ್ಧರಾಗಿ ಬಂದಿದ್ದರು. ಪರೀಕ್ಷಾ ಕೊಠಡಿಗೆ ತೆರಳಿ ಉತ್ತರ ಪತ್ರಿಕೆಯಲ್ಲಿ ತಮ್ಮ ಹೆಸರು, ನೋಂದಣಿ ಸಂಖ್ಯೆ, ಇತ್ಯಾದಿ ಮಾಹಿತಿಗಳನ್ನೆಲ್ಲ ತುಂಬಿದ್ದಲ್ಲದೆ ಪ್ರಶ್ನೆ ಪತ್ರಿಕೆಯನ್ನೂ ಪಡೆದು ಇನ್ನೇನು ಉತ್ತರ ಬರೆಯಬೇಕು ಎನ್ನುವಷ್ಟರಲ್ಲಿ ಹಿಂದಿನ ಮೌಲ್ಯ ಮಾಪನದ ಫಲಿತಾಂಶದಲ್ಲಿ ತಾಂತ್ರಿಕ ತೊಡಕು ಬಂದಿದ್ದರಿಂದ ಆ ಫಲಿತಾಂಶವನ್ನು ವಾಪಸ್ ಪಡೆಯಲಾಗಿದೆ.


ತಿದ್ದುಪಡಿಗಳ ನಂತರ ಫಲಿತಾಂಶ ಪ್ರಕಟಿಸಲಾಗುವುದು.
ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸಲಾಗುವುದು ಎಂದು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವರ ಸುತ್ತೋಲೆಯ ಮಾಹಿತಿ ಈ ರಿಪೀಟರ್ಸ್ ವಿದ್ಯಾಥಿಗಳಿಗೆ ಸರಿಯಾಗಿ ತಲುಪದೇ ಹೋದ ಕಾರಣಕ್ಕಾಗಿ ಈ ಗೊಂದಲ ನಿರ್ಮಾಣವಾಗಿತ್ತು ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

By admin

ನಿಮ್ಮದೊಂದು ಉತ್ತರ

error: Content is protected !!