ಶಿವಮೊಗ್ಗ,ಮಾ.08:
ಭಾರತೀಯ ನೆಲದಲ್ಲಿ ಅನೇಕ ಸವಾಲುಗಳನ್ನು ಎದುರಿಸಿ ನಮಗೆಲ್ಲ ಮಾರ್ಗದರ್ಶಕರಾದ ಅಕ್ಕಮಹಾದೇವಿ, ಎಲ್ಲಾ ಹೆಣ್ಣು ಮಕ್ಕಳಿಗೆ ಮಾದರಿಯಾದ ಸಾವಿತ್ರಿ ಬಾಯಿ ಪುಲೆ, ಸಾಹಿತಿ ಲೇಖಕಿ ಸಾರಾ ಅಬೂಬಕ್ಕರ್ ಇಂತಹ ಅನೇಕರ ತ್ಯಾಗ ಬಲಿದಾನ ನಾವು ಯಾವತ್ತೂ ಮರೆಯಬಾರದು ಎಂದು ಸಹ್ಯಾದ್ರಿ ವಿಜ್ಞಾನ ಕಾಲೇಜ್ ನಲ್ಲಿ ಕನ್ನಡ ವಿಭಾಗದ ಉಪನ್ಯಾಸಕಿ ಡಾ. ಪ್ರೇಮ ಜೆ.ಕೆ ಹೇಳಿದರು.
ಅವರು ಇಂದು ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಾತನಾಡುತ್ತ
ಈ ನಾಡಿನಲ್ಲಿ ಮಹಿಳೆಯರು ಅನೇಕ ಸಾಮಾಜಿಕ ಸೆವಾ ಕಾರ್ಯಕ್ರಮದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಅದು ಪರಿಸರ ವಿರಬಹುದು, ಆರೋಗ್ಯ ವಿರಬಹುದು, ಅನೇಕ ಶೋಷಣೆಗೆ ಒಳಗಾಗಿರುವ ಮಹಿಳೆಯರ ಪೋಷಣೆ ಪಾಲನೆ ಮಾಡುತ್ತಿರುವ ಮಹಿಳೆಯರನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.
ಮಹಿಳೆಯರ ಅಭ್ಯುದಯಲ್ಲಿ ಸಹಕರಿಸುತ್ತಿರುವ ಪತಿ ಇರಬಹುದು, ಅಣ್ಣ ಇರಬಹುದು, ನಮ್ಮ ತಂದೆ ಇರಬಹುದು ಅವರ ಸಹಕಾರ ಎಂದಿಗೂ ನಾವು ಮರೆಯಬಾರದೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಬಿ.ಧನಂಜಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಮಾಜಕಾರ್ಯ ಉಪನ್ಯಾಸಕಿ ಡಾ.ಕೃಪಾಲಿನಿ, ಸಂಸ್ಕೃತ ವಿಭಾಗದ ಅಧ್ಯಕ್ಷೆ ಡಾ.ಶೃತಕೀರ್ತಿ, ನಾರಾಯಣರಾವ್, ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ಡಾ.ಪೂರ್ವಾಚಾರ್, ಗಾಯತ್ರಿ ಮುಂತಾದವರು ಉಪಸ್ಥಿತರಿದ್ದರು.
ಆಂಗ್ಲ ವಿಭಾಗದ ಉಪನ್ಯಾಸಕಿ ಸುಷ್ಮಿತ ಪ್ರಾರ್ಥಿಸಿದರು.
ಅರ್ಥಶಾಸ್ತ್ರ ಉಪನ್ಯಾಸಕಿ ಸಂಗೀತ ಸ್ವಾಗತಿಸಿದರು.
ಕನ್ನಡ ಉಪನ್ಯಾಸಕಿ ಡಾ.ಹಾಲಮ್ಮ ಪ್ರಾಸ್ತಾವಿಕ ಭಾಷಣ ಮಾಡಿದರು.
ಹಿಂದಿ ವಿಭಾಗದ ಉಪನ್ಯಾಸಕಿ ಡಾ.ಛಾಯಾಕುಮಾರಿ ವಂದಿಸಿದರು.
ಸಮಾಜಕಾರ್ಯ ಉಪನ್ಯಾಸಕಿ ಶ್ರಿಂಚನ ಕಾರ್ಯಕ್ರಮ ನಿರೂಪಿಸಿದರು.