ಬಿಜೆಪಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಪುತ್ರನ ಮನೆ ಮೇಲೆ ಲೋಕಾಯುಕ್ತ ದಾಳಿ ವಿಚಾರ ಕುರಿತಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು ಈಗಲೇ ಯಾವುದೂ ಹೇಳಲು ಆಗದು ಎಂದಿದ್ದಾರೆ.


ಲೋಕಾಯುಕ್ತ ದಾಳಿ ಕುರಿತು ಮಾದ್ಯಮಗಳ ಮೂಲಕ ನನಗೆ ತಿಳಿದಿದೆ. ಈ ವಿಚಾರ ಈಗ ವಿಚಾರಣೆ ಹಂತದಲ್ಲಿದೆ. ಈ ಬಗ್ಗೆ ನಾನು ಈಗಲೇ ಪ್ರತಿಕ್ರಿಯಿಸುವುದಿಲ್ಲ. ನಾಲ್ಕೈದು ಜನರನ್ನು ಅರೆಸ್ಟ್ ಮಾಡಿದ್ದಾರೆ ಎಂದಿದ್ದಾರೆ.


ಯಾವ ಹಣ ಅವರು ಇಟ್ಟುಕೊಂಡಿದ್ದರು ಎಂದು ತಿಳಿದಿಲ್ಲ. ವಿಚಾರಣೆ ಬಳಿಕ ಈ ಬಗ್ಗೆ ತಿಳಿಯಲಿದೆ ಎಂದರು. ನಿನ್ಬೆ ಮಾಡಾಳ್ ವಿರೂಪಾಕ್ಷಪ್ಪನವರ ದ್ವಿತೀಯ ಪುತ್ರ ಪ್ರಶಾಂತ್ ಮಾಡಾಳ್ ರಾಸಾಯನಿಕ ಟೆಂಡರ್ ವಿಚಾರದಲ್ಲಿ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲು ೪೦ ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ದಾಳಿ ನಡೆದಿದೆ.


ಈ ವಿಚಾರದಲ್ಲಿ ಲೋಕಾಯುಕ್ತರಿಗೆ ೪೦ ಲಕ್ಷಕ್ಕೂ ಅಧಿಕ ಹಣ ಪತ್ತೆಯಾಗಿದೆ. ಪುತ್ರ ಪ್ರಶಾಂತ್ ಲೋಕಾಯುಕ್ತ ಸೆರೆಯಾಗಿದೆ. ಈ ವಿ?ಯದ ಕುರಿತು ಗೃಹಸಚಿವರು ಸಂಪೂರ್ಣವಾಗಿ ಪ್ರತಿಕ್ರಿಯಿಸಲು ಜಾಣ್ಮೆಯ ನಡೆಯನ್ನಿಟ್ಟಿದ್ದಾರೆ.


ಸಿದ್ಧರಾಮಯ್ಯನವರು ೫೦೦ ರೂ.ನೋಟು ನೀಡುವ ಹೇಳಿಕೆ ವೈರಲ್ ವಿಡಿಯೋ ವಿಚಾರದ ಕುರಿತು ಗೃಹ ಸಚಿವರು ಪ್ರತಿಕ್ರಿಯಿಸಿದ್ದು, ಕೆಲವೊಮ್ಮೆ ಸಿದ್ಧರಾಮಯ್ಯನವರು ಸತ್ಯ ಹೇಳುತ್ತಾರೆ. ಕಾಂಗ್ರೆಸ್‌ನ ಸಮಾವೇಶಕ್ಕೆ ಜನರನ್ನು ಹಣ ನೀಡಿ ಕರೆದುಕೊಂಡು ಬರುವುದು ದುರಂತ ಎಂದರು. ಕೊನೆಗೂ ಸಿದ್ಧರಾಮಯ್ಯ ಹಣ ನೀಡಿ ಸಭೆಗಳಿಗೆ ಜನರನ್ನು ಕರೆಯುತ್ತಿರುವುದನ್ನು ಒಪ್ಪಿಕೊಂಡಂತಾಗಿದೆ. ರಾಜ್ಯದ ಜನರಿಗೆ ಸತ್ಯ ಗೊತ್ತಾಗಿದೆ ಎಂದರು.

By admin

ನಿಮ್ಮದೊಂದು ಉತ್ತರ

error: Content is protected !!