ಶಿವಮೊಗ್ಗ :- ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನೇತೃತ್ವದಲ್ಲಿ ನಗರಕ್ಕೆ ಸಮೀಪದ ಯಲವಟ್ಟಿ ಗ್ರಾಮದಲ್ಲಿರುವ ಶ್ರೀ ಪಾರ್ವತಿ ಪರಮೇಶ್ವರ ದೇವಸ್ಥಾನ ಆವರಣದಲ್ಲಿ ಫೆ.28 ರಂದು ಮಂಗಳವಾರ ಸಂಜೆ ‌ 06:00 ಕ್ಕೆ ಸಾಹಿತ್ಯ ಸಂಜೆ ಮತ್ತು ದತ್ತಿ ನಿಧಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶ್ರೀ ಬೆಕ್ಕಿನಕಲ್ಮಠದ ಶ್ರೀ ಶ್ರೀ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ದಿವ್ಯಸಾನಿಧ್ಯ ವಹಿಸಲಿದ್ದಾರೆ. ಶ್ರೀ ಆನಂದಪುರಂ ಜಗದ್ಗುರುಗಳಾಗಿದ್ದ ಶ್ರೀ ಗುರುಬಸವ ಮಹಾಸ್ವಾಮಿಗಳ ದತ್ತಿಯನ್ನು ಮಲೆನಾಡು ವೀರಶೈವ ಅಧ್ಯಯನ ಸಂಸ್ಥೆಯ ನೀಡಿರುವ ದತ್ತಿಯ ಅಂಗವಾಗಿ ಕೆಳದಿ ಸಂಸ್ಥಾನದ ಧರ್ಮ ಸಮನ್ವಯ ವಿಚಾರವಾಗಿ ಡಿ.ವಿ.ಎಸ್. ಹಿರಿಯ ಕಾಲೇಜು ಇತಿಹಾಸ ಉಪನ್ಯಾಸಕರಾದ ಡಾ. ಕೆ.ಜಿ. ವೆಂಕಟೇಶ್ ಮಾತನಾಡಲಿದ್ದಾರೆ.

ಡಾ. ಶರಶ್ಚಂದ್ರ ರಾನಡೆ ಅವರು ನೀಡಿರುವ ಡಾ. ದ.ರಾ. ಬೇಂದ್ರೆ ಸ್ಮಾರಕ ದತ್ತಿ ಆಶಯದಂತೆ ಸಾಹಿತಿಗಳು, ಉಪನ್ಯಾಸಕರಾದ ಡಾ. ಬಿದರಗೋಡು ನಾಗೇಶ್  ಅವರು ಬೇಂದ್ರೆ ಸಾಹಿತ್ಯ ಚಿಂತನೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಶ್ರೀ ಪಾರ್ವತಿ ಪರಮೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಉಮಾಶಂಕರ್,  ಕಸಾಪ ತಾಲ್ಲೂಕು ಅಧ್ಯಕ್ಷರಾದ ಮಹಾದೇವಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಹೂವಪ್ಪ, ಖಜಾಂಚಿ ಪ್ರದೀಪ್ ಸೇರಿದಂತೆ ಗ್ರಾಮದ ಮುಖಂಡರು, ಹಿರಿಯರು, ಸುತ್ತಲಿನ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಲು ಕಸಾಪ ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಮನವಿ ಮಾಡಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!