ಸೋಮಿನಕೊಪ್ಪದಲ್ಲಿರುವ ನಗರದ ಬೃಹತ್ ಕೆರೆ ಉಳಿಸಲು ಆಗ್ರಹ


ಕೆರೆ ಸಂರಕ್ಷಣೆ ವಿಶೇಷ ವರದಿ ಭಾಗ-೧
ಶಿವಮೊಗ್ಗ, ಫೆ೨೦.
ಶಿವಮೊಗ್ಗ ಹೊರವಲಯದಲ್ಲಿರುವ ಸೋಮಿನಕೊಪ್ಪದಲ್ಲಿರುವ ಬೃಹತ್ ಅಂದರೆ ನಗರದಲ್ಲಿ ಉಳಿದಿರುವ ಬಹುದೊಡ್ಡ ಕೆರೆಯ ಮಣ್ಣನ್ನು ನಿರಂತರವಾಗಿ ದೋಚಿ ಖಾಸಗಿ ಲೇ-ಔಟ್‌ಗಳನ್ನು ಉದ್ಧಾರ ಮಾಡಿಕೊಳ್ಳುತ್ತಿದ್ದವರಿಗೆ ನಿನ್ನೆ ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಅಪರ ಜಿಲ್ಲಾಧಿಕಾರಿ ಬಿರದಾರ ಅವರು ಕೈಗೊಂಡ ಶಿಸ್ತು ಕ್ರಮದ ಹಿನ್ನೆಲೆಯಲ್ಲಿ ಬ್ರೇಕ್ ಬಿದಿದೆ.


ಇದು ‘ತುಂಗಾ ತರಂಗ’ ವರದಿಯ ಫಲ ಶೃತಿ, ‘ತುಂಗಾ ತರಂಗ.ಕಾಂ’ ವೆಬ್ ನ್ಯೂಸ್‌ನ ಮೂಲಕ ಅಲ್ಲಿನ ಸ್ಥಳೀಯರು ನೀಡಿದ ಮಾಹಿತಿ ಆಧಾರದಲ್ಲಿ ಪತ್ರಿಕೆ, ಹಲವರನ್ನು ಭೇಟಿ ಮಾಡಿದ್ದು, ಅಂತಿಮವಾಗಿ ಜಿಲ್ಲಾಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು ಕೈಗೊಂಡ ಕ್ರಮದಿಂದಾಗಿ ಕೆರೆ ಉಳಿಯುವ ಹಂತಕ್ಕೆ ಬಂದಿದೆ.

ಇತ್ತೀಚೆಗಷ್ಟೆ ಇಲ್ಲಿನ ಸೋಮಿನಕೊಪ್ಪ ಭೋವಿ ಕಾಲೋನಿಯ ಇಬ್ಬರ ಪುಟ್ಟ ಮಕ್ಕಳು (ಅಕ್ಕ ತಮ್ಮ) ಈ ಗುಂಡಿಗಳಲ್ಲಿ ಮುಳುಗಿ ಸಾವು ಕಂಡಿದ್ದನ್ನು ಆಗಲೇ ಮರೆತಿರುವ ಖಾಸಗಿ ಲೇ-ಔಟ್ ಮಾಲೀಕರುಗಳು ಮತ್ತೆ ಇನ್ನೊಂದಿಷ್ಟು ಗುಂಡಿ ಮಾಡಲು ಕೆರೆಯ ಮಣ್ಣನ್ನು ಲೂಟಿ ಮಾಡಲು ಸಿದ್ದತೆ ಮಾಡಿಕೊಂಡಿದ್ದರು. ನಿನ್ನೆ ಬೆಳಗ್ಗೆಯಿಂದ ಸರಿ ಸುಮಾರು ೨ ಜೆಸಿಬಿ, ಏಳೆಂಟು ಟ್ರ್ಯಾಕ್ಟರ್‌ಗಳ ಮೂಲಕ ೫೦೦ಕ್ಕೂ ಹೆಚ್ಚು ಲೋಡ್ ಮಣ್ಣನ್ನು ದೋಚಲಾಗಿತ್ತು ಎಂದು ಆಕ್ಷೇಪ ಕೇಳಿ ಬಂದಿತ್ತು. ಪತ್ರಿಕೆಗಳ ಮೂಲಗಳಿಗೆ ಮಾಹಿತಿಯಾನುಸಾರ ಯಾವ ಮುಲಾಜನ್ನು ತೋರಿಸದೇ ಸುದ್ದಿಯನ್ನು ಬಿತ್ತರಿಸಿತ್ತು. ಜಿಲ್ಲಾಡಳಿತ ದಿವ್ಯ ಮೌನ ವಹಿಸಿದೇ ಎಂದೇ ವರದಿ ಬರೆಯಲು ಕಾರಣ ಇತ್ತೀಚೆಗಷ್ಟೆ ಸುಮಾರು ೩ ಕೋಟಿ ಹಣವನ್ನು ಕೆರೆಯ ಅಭಿವೃದ್ಧಿ ಹೆಸರಿನಲ್ಲಿ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ ಕೆಲಸ ಮಾಡುತ್ತಿದೆ. ಆದರೆ ಕೆರೆಗೂ ನಮಗೂ ಸಂಬಂಧವಿಲ್ಲ ಎಂದು ಅಲ್ಲಿನ ಅಧಿಕಾರಿ ತಿಳಿಸಿದ ಹಿನ್ನೆಲೆಯಲ್ಲಿ ಕೆರೆಯ ಜವಾಬ್ದಾರಿಯನ್ನು ನೋಡಿಕೊಳ್ಳುವವರು ಯಾರು ಎಂಬ ಕಾರಣ ಹಿಡಿದು ಜಿಲ್ಲಾಡಳಿತವನ್ನೇ ಪ್ರಶ್ನಿಸಬೇಕಾದ ಅನಿವಾರ್ಯತೆ ಬಂದಿತ್ತು.


ಸೂಡಾ ಹೇಳುವ ಪ್ರಕಾರ ಇದು ಅವರ ಜವಾಬ್ದಾರಿಯ ಜಾಗವಲ್ಲವಂತೆ. ಬೃಹತ್ ನೀರಾವರಿ ಇಲಾಖೆಯ ಜಾಗ ಎನ್ನುತ್ತಿದ್ದಾರೆ. ಈಗ ಇದೇ ಖಾಸಗಿ ಲೇ-ಔಟ್ ಮಾಲೀಕರಿಗೆ ನೀವು ಅಲ್ಲಿಂದ ಅನುಮತಿ ತೆಗೆದುಕೊಂಡು ಬಂದು ಮಣ್ಣು ತೆಗೆಯಿರಿ ಎಂದು ಸೂಕ್ತ ಸಲಹೆಯನ್ನು ನೀಡಿದ್ದಾರೆ. ಕನಿಷ್ಟ ಕೆರೆಯನ್ನು ಇರುವ ಹಂತದಲ್ಲೇ ಉಳಿಸಬೇಕೆಂಬ ಕಾಳಜಿ ಬಹಳಷ್ಟು ಅಧಿಕಾರಿಗಳಿಗೆ ಇದ್ದಂತಿಲ್ಲ.
ಹಿಂದೆ ಸರ್ಕಾರವೇ ಆಯಾ ಉಪವಿಭಾಗಾಧಿಕಾರಿಗಳ ಮೂಲಕ ಕೆರೆಯ ಒತ್ತುವರಿಯನ್ನು ತೆರವುಗೊಳಿಸಲು ಕಟ್ಟು-ನಿಟ್ಟಿನ ಕ್ರಮಕೈಗೊಳ್ಳಲು ಆದೇಶ ನೀಡಿತ್ತು. ಆಗ ಸಾಕಷ್ಟು ಕೆರೆಗಳು ಹಾಗೂ ಗೋಮಾಳದ ಜಾಗಗಳು ಉಳಿದಿದ್ದವು. ಈ ಕೆರೆಯ ಒತ್ತುವರಿ ವಿಷಯ ಕಂಡು ಬರುತ್ತಿಲ್ಲ. ಆದರೆ ಕೆರೆಯ ಮಣ್ಣನ್ನೆ ಲೂಟಿ ಹೊಡೆಯುತ್ತಿರುವುದು. ಹಾಗೂ ತಮಗಿಷ್ಟ ಬಂದಂತೆ ಕರೆಯಲ್ಲಿ ಬಾವಿಗಳನ್ನು ತೋಡುವಂತೆ ಮಣ್ಣು ತೆಗೆದರೆ ಕೆರೆ ಹೇಗೆ ತಾನೆ ಉಳಿಯಲು ಸಾಧ್ಯ. ಅಲ್ಲಿ ಅಮಾಯಕರು ಬಂದು ಸಾಯಬೇಕೆ..?
ಇದೇ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೆರೆಯ ಮಣ್ಣೊಳಗಿರುವ ಮರಳನ್ನು ಸಾಣಿಸಿಕೊಂಡು ತೆಗೆದುಕೊಂಡು ಹೋಗುವವರ ಆದೇಷ್ಟೋ ಜನರ ಮೇಲೆ ದೂರು ದಾಖಲಿಸಿ ಸಾಕಷ್ಟು ಯಂತ್ರಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಮರಳಿನ ವಿಷಯಕ್ಕೆ ಹಾಗೇ ಆದರೆ ಮಣ್ಣಿನ ವಿಷಯದಲ್ಲಿ ಹಗಲಿರುಳು ಲೂಟಿ ಹೊಡೆದ ಸಂಗತಿ ಈ ಪೊಲೀಸರಿಗೆ ಹಾಗೂ ಅಧಿಕಾರಿಗಳಿಗೆ ತಿಳಿದು ಬರಲಿಲ್ಲವೇ..? ಗೊತ್ತಿದ್ದು, ಗೊತ್ತಿಲ್ಲದಂತೆ ಸುಮ್ಮನಿದ್ದರೆ..?


ಒಟ್ಟಾರೆ ಶಿವಮೊಗ್ಗ ಬಹುತೇಕ ಖಾಸಗಿ ಲೇ-ಔಟ್‌ಗಳು ಮಾಡುತ್ತಿರುವ ನಾನಾ ಅವಾಂತರಗಳನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತಿದ್ದಾರೆ ಏನಿಸದೇ ಇರದು. ಇಲ್ಲಿ ಜಿಲ್ಲಾಧಿಕಾರಿಗಳು ಮಾಹಿತಿ ಸಿಕ್ಕಾಕ್ಷಣ ಇಡೀ ಶಿವಮೊಗ್ಗದ ಆ ವ್ಯಾಪ್ತಿಯ ಅಧಿಕಾರಿಗಳನ್ನು ಎಚ್ಚರಿಸಿದ್ದಾರೆ. ಕಂದಾಯ ಇಲಾಖೆಯ ಅಧಿಕಾರಿಗಳು ಸಹ ಹೋಗಿ ಕೆಲಸ ನಿಲ್ಲಿಸಿ ಬಂದಿದ್ದಾರೆ. ಯಾಕೆ ಅವರ ಮೇಲೆ ಪ್ರಕರಣ ದಾಖಲಾಗಲಿಲ್ಲ. ಅಲ್ಲಿನ ಯಂತ್ರಗಳು ಯಾಕೆ ವಶಕ್ಕೆ ಪಡೆದುಕೊಂಡಿಲ್ಲ. ದೊಡ್ಡವರು ತಪ್ಪು ಮಾಡಿದರೆ ಅದನ್ನು ಮುಚ್ಚಿ ಬಿಡಬಹುದೇ..? ದೀಪಾವಳಿ ಹೊತ್ತಿನಲ್ಲಿ ಒಂದೆರಡು ಪುಟ್ಟಿ ಮಣ್ಣನ್ನು ಮನೆಯ ಬಾಗಿಲಿಗೆ ಹಾಕಿಕೊಳ್ಳಲು ತಂದರೆ ಅವರಿಗೆ ಗದರಿಸುವ ನಮ್ಮ ನಡುವಿನ ವ್ಯವಸ್ಥೆ ದೊಡ್ಡವರ ಪಾಲಿಗೆ ಮೌನವಾಗಿದ್ದೇಕೆ..? ಏನೇ ಆಗಲಿ ಈ ವಿಚಾರದಲ್ಲಿ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿಗಳು ಕೈಗೊಂಡ ಕ್ರಮಕ್ಕೆ ಅಭಿನಂದನೆಗಳು

By admin

ನಿಮ್ಮದೊಂದು ಉತ್ತರ

error: Content is protected !!