ಶಿವಮೊಗ್ಗ, ಫೆ.19:
ಶಿವಮೊಗ್ಗ ಜಿಲ್ಲೆಯ ಅದರಲ್ಲೂ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿರುವ ಸೋಮಿನಕೊಪ್ಪ ಬೋವಿ ಕಾಲೋನಿಯ ಅತಿ ದೊಡ್ಡ ಕೆರೆ ಸೂಡಾ ಕಾಮಗಾರಿಯ ಮೂಲಕ ಬದಲಾವಣೆ ಆಗುತ್ತದೆ ಎಂದು ಕನಸು ಕಂಡವರಿಗೆ ಆಗಿದ್ದ ಶಾಕ್ ಸಹಿಸಿಕೊಳ್ಳುವ ಮುನ್ನವೇ ಮತ್ತೆ ಅಲ್ಲಿ ಮಣ್ಣಿನ ಕಳ್ಳ ಸಾಗಾಣಿಕೆ ನಡೆಯುತ್ತಿರುವ ಆತಂಕಕಾರಿ ಸಂಗತಿ ಕಂಡು ಬೆಚ್ಚಿಬಿದ್ದಿದ್ದಾರೆ.
ಇಂದು ಬೆಳಗ್ಗೆಯಿಂದ ಬೋವಿ ಕಾಲೋನಿಯ ಈ ಕೆರೆಯ ಮಣ್ಣನ್ನು ಎರಡು ಇಟಾಚಿ ಹಾಗೂ ಸುಮಾರು ಏಳೆಂಟು ಟ್ರ್ಯಾಕ್ಟರ್ ಗಳ ಸಹಿತ ದೊಡ್ಡ ಉದ್ಯಮಿ ತನ್ನ ಪರ್ಸನಲ್ ಲೇಔಟ್ ಗೆ ಅದರಲ್ಲೂ ಇನ್ನೂ ಅಧಿಕೃತವಾದ ಅನುಮತಿ ಪಡೆಯದೆ ನಿರ್ಮಾಣವಾಗುತ್ತಿರುವ ಲೇಔಟ್ ಗೆ ಸಾಗಿಸುತ್ತಿರುವ ಬಗ್ಗೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸೂಡ ತನ್ನ ಕೆಲಸ ಮುಗಿಯಿತು ಎಂದು ಕೈ ತೊಳೆದುಕೊಂಡಿದೆ. ನಗರ ಪಾಲಿಕೆ ನನಗಿದು ಸಂಬಂಧಿಸಿಲ್ಲ ಎಂದು ಸುಮ್ಮನಿದೆ. ಕೆರೆಯನ್ನು ನೋಡಿಕೊಳ್ಳಬೇಕಾದ ಜವಾಬ್ದಾರಿ ಹೊತ್ತ ನೀರಾವರಿ ಇಲಾಖೆ (ಕೆಏನ್ ಎನ್ಎಲ್) ಸುಮ್ಮನೆ ಕುಳಿತಿದೆಯೋ ಅಥವಾ ಖಾಸಗಿ ಲೇಔಟ್ ಮಾಲಿಕರ ಜೊತೆ ಮಾತು ಕತೆ ಮುಗಿಸಿಕೊಂಡು ಮಣ್ಣನ್ನು ಮಾರುತ್ತಿದೆಯೇ? ಎಂದು ಪ್ರಶ್ನಿಸಿದ್ದಾರೆ.
ಶಿವಮೊಗ್ಗ ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು. ಶಿವಮೊಗ್ಗ ನಗರದಲ್ಲಿ ಉಳಿದಿರುವ ಕೆಲವೇ ಕೆಲವು ಅದರಲ್ಲೂ ಇಂತಹ ದೊಡ್ಡ ಕೆರೆ ಉಳಿಸುವ ನಿಟ್ಟಿನಲ್ಲಿ ಯಾವುದೇ ಯೋಚನೆ ಮಾಡದಿರುವುದು ದುರಂತವೇ ಹೌದು.
ಸ್ಥಳೀಯರ ಆಕ್ರೋಶ ಇಷ್ಟೇ , ಕೆರೆಯ ಮಣ್ಣನ್ನು ಬಳಸಿಕೊಳ್ಳಬಹುದು ಅದೂ ಹಣವಿದ್ದವನು ಹಾಗೂ ಇನ್ಫ್ಲುಯೆನ್ಸ್ ಇದ್ದವನು ಏನು ಬೇಕಾದರೂ ಮಾಡಬಹುದು ಅಲ್ಲವೇ ಎನಿಸುತ್ತದೆ. ಇದೇ ಕೆರೆಯಲ್ಲಿ ಕನಿಷ್ಠ ಎರಡು ಅಥವಾ ಮೂರು ಪುಟ್ಟಿ ಮರಳು ಸಾಗಾಣಿಕೆ ಮಾಡುತ್ತಿದ್ದರೆ, ಅವರನ್ನು ಗದರಿಸಿದ್ದ ಈ ಅಧಿಕಾರಿ ವರ್ಗ ಇಡೀ ಕೆರೆಯನ್ನೇ ಅಂದರೆ ಕೆರೆಯ ಮಣ್ಣನ್ನು ಕೊಳ್ಳೆ ಹೊಡೆಯುತ್ತಿದ್ದರೂ ಸುಮ್ಮನಿರುವುದೇಕೆ? ಮೊನ್ನೆ ತಾನೇ ಅವರು ಮಾಡಿದ್ದ ಗುಂಡಿಯೊಂದರಲ್ಲಿ ಪುಟಾಣಿ ಬಾಲಕ ಸಾವು ಕಂಡಿದ್ದು ಗೊತ್ತಿಲ್ಲವೇ? ಸಮಗ್ರ ಮಾಹಿತಿಗಳು ಹಾಗೂ ವಿಡಿಯೋ ಚಿತ್ರಣಗಳು ಸದ್ಯದಲ್ಲೇ…